• ಸಂಧ್ಯಾ ಸಿಹಿಮೊಗೆ

ಈ ಮಾಯಾಜಗತ್ತು ಎಷ್ಟೊಂದು ಸುಂದರ…! ಕುಳಿತ ಜಾಗದಲ್ಲೇ ನಮ್ಮನ್ನು ಕುಳಿತುಕೊಳ್ಳುವಂತೆ ಮಾಡುವ, ದೂರ ಸರಿದರೂ ಮತ್ತೆಮತ್ತೆ ತನ್ನ ಬಳಿಯೆ ಉಳಿಯುವಂತೆ ಮಾಡುವ, ದಿನ ಪೂರ್ತಿ ಊಟ, ನಿದ್ದೆ, ಸ್ನಾನ ಹೀಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸುಮ್ಮನೆ ಒಂದೆಡೆ ಮೂಲೆಗೊರಗಿ ಕುಳಿತುಕೊಳ್ಳುವಂತೆ ಮಾಡುವ ಮಾಂತ್ರಿಕ ಶಕ್ತಿ ಹೊಂದಿರುವ ಮಾಯೆ ಈ ಮೊಬೈಲು.
ಇಂದಿನ ವೈಜ್ಞಾನಿಕ ಯುಗದಲ್ಲಿ ಮೊಬೈಲ್, ಸ್ಮಾರ್ಟ್‍ಪೋನ್, ಐಪ್ಯಾಡ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ನಂತಹ ವಿನೂತನ ಅತ್ಯಾಧುನಿಕ ವಿದ್ಯುನ್ಮಾನ ಸಾಧನಗಳು ಕೈಲಿದ್ದರೆ ಸಾಕು ಇಡೀ ಜಗತ್ತೇ ನಮ್ಮ ಅಂಗೈಯಲ್ಲಿ. ನಮಗೆ ಅಗತ್ಯವಿರುವ ಎಲ್ಲಾ ಬಗೆಯ ವಿಷಯ, ಜ್ಞಾನ, ಮಾಹಿತಿ, ಸಂಗೀತ, ಮನೋರಂಜನೆ, ಸುದ್ದಿ, ಕ್ರೀಡೆ, ಸಂಪರ್ಕ, ಸಂದೇಶಗಳÀಂತಹ ತರಹೇವಾರಿ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಮಾನಸಿಕ ನೆಮ್ಮದಿ ನೀಡಿ ಮನಸ್ಸನ್ನು ಪುಳಕಗೊಳಿಸಬಲ್ಲ ಸಂಗತಿಗಳನ್ನು ನಾವು ಈ ಮೊಬೈಲ್ ತಂತ್ರಜ್ಞಾನದಿಂದ ಪಡೆಯಬಹುದಾಗಿದೆ.
ಮೊಬೈಲ್ ಅಥವಾ ಸ್ಮಾಟ್‍ಫೋನ್‍ನಿಂದ ಅವಶ್ಯಕ ಮಾಹಿತಿ, ಗೇಮ್, ಕಾರ್ಟೂನ್ ಮತ್ತು ಇನ್ನಿತರ ಮನಸ್ಸಿಗೆ ಮುದನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಬೌದ್ಧಿಕ ವಿಕಾಸ ಹಾಗೂ ಕಲಿತ ವಿದ್ಯೆಯನ್ನು ಒರೆಗೆ ಹಚ್ಚುವಲ್ಲಿಯೂ ಇದು ಸಹಾಯಕವಾಗಿದೆ. ನಾವು ಸ್ಮಾರ್ಟ್‍ಫೋನ್‍ನಂತೆ ಸ್ಮಾರ್ಟ್ ಕೂಡ ಆಗಬಹುದೆಂಬುದೇನೋ ನಿಜ. ಆದರೆ, ಮೊಬೈಲ್ ಮತ್ತು ಸ್ಮಾರ್ಟ್‍ಫೋನ್‍ಗಳನ್ನು ಮಕ್ಕಳು ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ ?.. ಅವುಗಳಿಂದ ಆಗಬಹುದಾದ ದುಷ್ಟರಿಣಾಮಗಳ ಅರಿವಿಲ್ಲದೆ ಮೌನವಾಗಿರುವುದು ಅಪಾಯದ ಮುನ್ಸೂಚನೆಯೇ ಅಲ್ಲವೇ?.
ಇಂದಿನ ನಮ್ಮ ಬದುಕು ಮೊಬೈಲ್‍ಮಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಚಂದಮಾಮ ತೋರಿಸಿ, ಲಾಲಿ ಹಾಡಿ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಎಂಬ ಮಾಯೆ ತನ್ನ ಪ್ರಭಾವ ಬೀರಿರುವುದು ಅತ್ಯಂತ ಕಳವಳಕಾರಿ ಸಂಗತಿ.
ನಿರಂತರವಾಗಿ ಮೊಬೈಲ್ ಬಳಸುವುದರಿಂದ ಮಕ್ಕಳು ಭವಿಷ್ಯದಲ್ಲಿ ಎದುರಿಸಬಹುದಾದ ಸಮಸ್ಯೆಗಳ ಕುರಿತು ಪೋಷಕರು ಕಿಂಚಿತ್ತು ಗಮನಹರಿಸಿದರೆ ಒಳಿತು. ಪಬ್‍ಜಿ ಗೇಮ್, ಟಿಕ್‍ಟಾಕ್, ಸಾಮಾಜಿಕ ಜಾಲತಾಣ, ಆತಂಕಕಾರಿ ಸಾಪ್ಟವೇರ್‍ಗಳು ಹಾಗೂ ಅಶ್ಲೀಲ ಸಂಗತಿಗಳು ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋದಿಸಿ ಅವರ ಗಮನ ಕೇಂದ್ರೀಕರಿಸಿಕೊಂಡು ಕೊನೆಗೆ ಜೀವಹಾನಿಯಂತಹ ಘಟನೆಗಳು ಸಂಭವಿಸುತ್ತಿರುವುದು, ವೈಚಾರಿಕ ನೆಲೆಯಿಂದ ವಿಮುಖರಾಗಿ ಕ್ರೌರ್ಯಗಳಿಗೆ, ದುಷ್ಕøತ್ಯಗಳಿಗೆ ಕಾರಣವಾಗುತ್ತಿರುವುದು ಮೊಬೈಲ್ ಬಳಸುವ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಅತಿಯಾದ ಸ್ಮಾಟ್‍ಫೋನ್ ಬಳಕೆಯಿಂದ ಮಕ್ಕಳ ಆರೋಗ್ಯದ ಜೊತೆಗೆ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಫಲಿತಾಂಶ ಕುಂಠಿತವಾಗುವ ಆತಂಕವಿದೆ. ಪ್ರೀತಿ, ವಾತ್ಸಲ್ಯ, ಮಮತೆ, ಜೀವನ, ಸಂಬಂಧಗಳ ಮೌಲ್ಯ ಹಾಗೂ ಸಂಸ್ಕøತಿಗಳ ಪರಿವೆಯೇ ಇಲ್ಲದೇ ಬದುಕುವ ಪರಿಸ್ಥಿತಿ ತಂದೊಡ್ಡಿದೆ.
ದೊಡ್ಡವರು ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ, ಮಕ್ಕಳ ಬದುಕಿಗೆ ಮಾದರಿಯಾಗಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ನಾವು ಮಾತ್ರವೇ ಬದಲಾಯಿಸಬಹುದು ಎಂಬುದನ್ನು ಅರಿತು ಜಾಗೃತರಾಗಬೇಕು.
ಮಕ್ಕಳನ್ನು ಮೊಬೈಲ್‍ನಿಂದ ದೂರವಿರಿಸುವುದು ಇಂದು ಕಷ್ಟದ ಕೆಲಸ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಧ್ಯಯನಗಳು ತಿಳಿಸಿದೆ.
ಹದಿಹರೆಯದ ಮತ್ತು ಯೌವ್ವನಾವಸ್ಥೆಯಲ್ಲಿರುವವರ ಆಲೋಚನಾ ಶಕ್ತಿ ಕುಗ್ಗಲು ಹಾಗೂ ಕ್ಷೀಣಿಸಲು ಮೊಬೈಲ್‍ನಿಂದಾಗುವ ದುಷ್ಟರಿಣಾಮಗಳು ಕಾರಣವಾಗಿದೆ.
ಪಬ್‍ಜಿ ಗೇಮ್‍ನಂತಹ ಅವೇಶಭರಿತ ಆಟಗಳ ನಿಯಂತ್ರಣಕ್ಕೊಳಪಟ್ಟು ಕೊನೆಗೆ ಆಟದಲ್ಲಿ ಸೋತ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದ ಮಕ್ಕಳ ಕಣ್ಣು, ಮೆದುಳು ಮತ್ತು ವಿವಿಧ ಶಾರೀರಿಕ ಬೆಳವಣಿಗೆಯ ಮೇಲೆ ಆರೋಗ್ಯದ ಅಡ್ಡ ಪರಿಣಾಮಗಳು ಆಗುತ್ತಿವೆ. ನಿರಂತರ ಮೊಬೈಲ್ ಬಳಕೆಯಿಂದ ರಕ್ತದೊತ್ತಡ ಮತ್ತು ನರರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಇರುವುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.
ನಿದ್ದೆ ಮಾಡೋಲ್ಲ ಮತ್ತು ಹೇಳಿದ ಮಾತು ಕೇಳೊಲ್ಲ ಎಂದರೆ ನಾವು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಗೊಂಬೆಗಳ ಕಾರ್ಯಕ್ರಮ ಮತ್ತು ಗೇಮ್ ಆಡುವುದಕ್ಕೆ ಹೇಳಿ ಸುಮ್ಮನಾಗಿಸುತ್ತೇವೆ. ತಾಂತ್ರಿಕತೆ ಮತ್ತು ತಂತ್ರಜ್ಞಾನ ಯುಗದತ್ತ ಮುಖ ಮಾಡುತ್ತಿರುವ ನಾವು ನಮ್ಮ ಕಾರ್ಯಬಾಹುಳ್ಯದ ಒತ್ತಡದಿಂದಾಗಿ ಮಕ್ಕಳ ಕಡೆಗೆ ಗಮನ ಕೂಡಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬಳಕೆಯಿಂದ ಹಲವಾರು ತೊಂದರೆಗಳು ಎದುರಾಗುತ್ತಿವೆ. ಹೀಗಾಗಿ ಮಕ್ಕಳ ಮನಸ್ಸು ಮತ್ತು ಆರೋಗ್ಯದ ಮೇಲೆ ಭೀಕರವಾದ ಪರಿಣಾಮ ಪರಿಣಾಮ ಬೀರುತ್ತಿವೆ.
ಮೊಬೈಲ್ ಫೋನ್‍ಗಳು ಮತ್ತು ಅವುಗಳ ಟವರ್‍ಗಳು ಹೊರಸೂಸುವ ತರಂಗಗಳು ಮಹಿಳೆಯರಲ್ಲಿ ಫಲವತ್ತತೆಯ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಎಂದು ವಿಶ್ವ ಆರೋಗ್ಯ ಸಂಸ್ಥೆ(Wಊಔ)ಯ ಅಧ್ಯಯನವೊಂದು ತಿಳಿಸಿದೆ. ಮೊಬೈಲ್ ಫೋನ್‍ಗಳ ನಿರಂತರ ಬಳಕೆಯು ಸದಾ ಪ್ರಶ್ನೆಯಲ್ಲಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ ಮತ್ತು ಮಹಿಳೆಯರಲ್ಲಿ ಫಲವತ್ತತೆ ಕಂಠಿತ ಸೇರಿದಂತೆ ಮೊಬೈಲ್ ವಿಕಿರಣದ ದುಷ್ಪರಿಣಾಮಗಳನ್ನು ಹಲವಾರು ಅಧ್ಯಯನಗಳು ಮತ್ತು ಸಂಶೋಧನೆಗಳು ಬಹಿರಂಗಗೊಳಿಸಿವೆ. ಅಷ್ಟೇ ಅಲ್ಲ, ಮೊಬೈಲ್ ವಿಕಿರಣವು ಮೆದುಳು ಟ್ಯೂಮರ್‍ಗಳನ್ನೂ ಉಂಟುಮಾಡುತ್ತದೆ ಎಂಬುದನ್ನು ಖಚಿತಪಡಿಸಿದೆ.
ಸ್ಮಾರ್ಟ್‍ಫೋನ್‍ಗಳ ನಿರಂತರ ಬಳಕೆ ನಮ್ಮ ಪ್ರತಿದಿನ ಬದುಕಿನ ಭಾಗವಾಗಿಬಿಟ್ಟಿದೆ. ಆದರೆ ಮನಸ್ಸು ಮತ್ತು ಶರೀರದ ಮೇಲೆ ಅದರ ದುಷ್ಟಪರಿಣಾಮಗಳ ಬಗ್ಗೆಯೂ ಮೊಬೈಲ್ ಬಳಕೆದಾರರು ತಿಳಿದಿರಬೇಕು.
ಮೊಬೈಲ್ ಫೋನ್‍ಗಳು ಹೊರಸೂಸುವ ವಿಕಿರಣಗಳು ಕ್ಯಾನ್ಸರ್‍ನಂತಹ ಮಾರಣಾಂತಿಕ ಕಾಯಿಲೆಯನ್ನುಂಟು ಮಾಡುವ ಅಪಾಯವಿದೆ ಎನ್ನುವುದನ್ನು WHO ಸಂಶೋಧನೆಯು ಬಹಿರಂಗಗೊಳಿಸಿದೆ. ಸೆಲ್ ಫೋನ್‍ಗಳನ್ನು ಬಳಸಿದ್ದ ಹಲವಾರು ಯುವಜನರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಹಂಗೇರಿಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಮೊಬೈಲ್ ಟವರ್‍ನ 400 ಮೀಟರ್‍ಗಳ ಪ್ರದೇಶದಲ್ಲಿರುವವರಲ್ಲಿ ಕ್ಯಾನ್ಸರ್ ಅಪಾಯದ ಸಂಭವನೀಯತೆ ಮೂರು ಪಟ್ಟು ಹೆಚ್ಚಾಗಿರುವುದನ್ನು ಜರ್ಮನಿಯಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ಈ 400 ಮೀ. ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‍ಗಳ ಪ್ರಸರಣವು ಇತರ ಕಡೆಗಳಿಂದ 100 ಪಟ್ಟು ಹೆಚ್ಚಾಗಿರುತ್ತದೆ. ಮೊಬೈಲ್ ಫೋನ್ ಟವರ್‍ಗಳಿಂದ ಹೊರಹೊಮ್ಮುವ ವಿಕಿರಣದಿಂದಾಗಿ ಜೇನುನೊಣಗಳ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎಂದು ಕೇರಳದಲ್ಲಿ ನಡೆಸಲಾದ ಸಂಶೋಧನೆಯೊಂದು ತಿಳಿಸಿದೆ.
ಸೆಲ್ ಫೋನ್ ಟವರ್‍ಗಳ ಸಮೀಪದಲ್ಲಿ ಕಾಗೆಗಳು ಇಡುವಂತಹ ಮೊಟ್ಟೆಗಳು 30ದಿನಗಳ ಬಳಿಕವೂ ಮರಿಗಳಾಗಿಲ್ಲ. ಸಾಮಾನ್ಯವಾಗಿ 10ರಿಂದ 14 ದಿನಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರಗೆ ಬರುತ್ತವೆ ಎನ್ನುವುದನ್ನೂ ಅಧ್ಯಯನಗಳು ಸೂಚಿಸಿವೆ.
ಪೋನ್ ವಿಕಿರಣಗಳು ಆರೋಗ್ಯಕ್ಕೆ ಯಾವ ರೀತಿಯ ಅಪಾಯಗಳನ್ನು ಉಂಟುಮಾಡಬಹುದೆಂದು ತಿಳಿದರೆ ಅಚ್ಚರಿವುಂಟಾಗದಿರದು. ಮೊಬೈಲ್ ಫೋನ್ ವಿಕಿರಣವು ತಲೆನೋವು, ತಲೆಯೊಳಗೆ ಜುಮ್ಮೆನಿಸುವಿಕೆ, ನಿರಂತರ ಬಳಲಿಕೆ, ತಲೆ ಸುತ್ತುವಿಕೆ, ಖಿನ್ನತೆ, ನಿದ್ರಾಹೀನತೆ, ಮಂಪರು ನಿದ್ರೆ, ಕಣ್ಣಿನ ತೊಂದರೆ, ಏಕಾಗ್ರತೆ ನಷ್ಟ, ಕಿವಿಗಳಲ್ಲಿ ಗಂಟೆ ಬಾರಿಸಿದ ಅನುಭವ, ಶ್ರವಣ ಶಕ್ತಿ ಮತ್ತು ಜ್ಞಾಪಕ ಶಕ್ತಿ ನಷ್ಟ, ಅಜೀರ್ಣ ಸಮಸ್ಯೆ, ಅನಿಯಮಿತ ಹೃದಯಬಡಿತ ಇತ್ಯಾದಿ ನೋವುಗಳಿಗೆ ಕಾರಣವಾಗುತ್ತದೆ.
ಮೊಬೈಲ್ ವಿಕಿರಣವು ಫಲವತ್ತತೆ ನಷ್ಟ, ಕ್ಯಾನ್ಸರ್, ಮೆದುಳು ಟ್ಯೂಮರ್ ಮತ್ತು ಗರ್ಭಪಾತಕ್ಕೂ ಕಾರಣವಾಗುತ್ತವೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ. ನಮ್ಮ ಶರೀರದಲ್ಲಿ ಶೇ.70ರಷ್ಟು ಭಾಗ ನೀರಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ನಮ್ಮ ಮೆದುಳಿನ ಶೇ.90ರಷ್ಟು ಭಾಗವೂ ನೀರೇ ಆಗಿದೆ. ಈ ನೀರು ಕ್ರಮೇಣ ವಿಕಿರಣವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಸದಾಕಾಲ ಮೊಬೈಲ್ ಫೋನ್ ಬಳಸುವವರು ಕ್ಯಾನ್ಸರ್‍ಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ ಎಂದು ಡಬ್ಲ್ಯೂಎಚ್‍ಒ ವರದಿ ತಿಳಿಸಿದೆ.
1,000 ರಿಂದ 3,000 ಮೆಘಾ ಹರ್ಟ್ಸ್ ಸಾಮಥ್ರ್ಯದವರೆಗಿನ ವಿದ್ಯುತ್‍ಕಾಂತೀಯ ಅಲೆಗಳು ಮೈಕ್ರೊವೇವ್ ವಿಕಿರಣವನ್ನುಂಟು ಮಾಡುತ್ತದೆ. ಮೈಕ್ರೊವೇವ್ ಓವನ್, ಏರ್ ಕಂಡೀಷನರ್, ನಿಸ್ತಂತು ಕಂಪ್ಯೂಟರ್, ಕಾರ್ಡ್‍ಲೆಸ್ ಫೋನ್ ಮತ್ತು ಇತರ ವೈರ್‍ಲೆಸ್ ಸಾಧನಗಳೂ ವಿಕಿರಣಗಳನ್ನು ಸೂಸುತ್ತವೆ. ಆದರೆ ಹೆಚ್ಚುತ್ತಿರುವ ಸ್ಮಾರ್ಟ್‍ಫೋನ್ ಮತ್ತು ಮೊಬೈಲ್ ಬಳಕೆಯಿಂದ ಅದರ ಸಾಮೀಪ್ಯದಿಂದಾಗಿ ಮೊಬೈಲ್ ವಿಕಿರಣವು ಶರೀರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
ಆಧುನಿಕತೆ ಮುಂದುವರೆದಂತೆ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಸಂಕೀರ್ಣವಾಗಿ ನಾಟಕೀಯತೆ, ಕೃತಕತೆ, ಸಮಯ ಸಾಧಕತನ, ಸ್ವಾರ್ಥಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಕಾಣಬಹುದಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಭಿಸಿವೆ ಎಂದರೆ ತಪ್ಪಾಗಲಾರದು.


error: Content is protected !!