ರಿಪ್ಪನ್‌ ಪೇಟೆ ಘನತ್ಯಾಜ್ಯ ವಿಲೆವಾರಿ ಘಟಕ

ಭಾರತ ಸರ್ಕಾರ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಅನುದಾನವನ್ನು ನೀಡುತ್ತಿದೆ. ದೇಶ ಸಂಪೂರ್ಣ ಕಸಮುಕ್ತವಾಗಬೇಕು. ಮಹಾತ್ಮಾ ಗಾಂಧೀಜಿಯವರ ಗ್ರಾಮರಾಜ್ಯದ ಪರಿಕಲ್ಪನೆಯಂತೆ ಭಾರತ ಸರ್ಕಾರ ಈ ಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಗ್ರಾಮಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆ ಗ್ರಾಮಗಳಲ್ಲಿ ಜಾಗಗಳನ್ನು ಗುರುತಿಸಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಸ್ಥಳೀಯ ಪಂಚಾಯ್ತಿಗಳಿಗೆ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆ ಗ್ರಾಮಪಂಚಾಯ್ತಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಪಂಚಾಯ್ತಿ ವತಿಯಿಂದ ಸ್ಥಾಪಿಸಿ ಮಾದರಿಯಾಗಿದೆ. ಹಸಿ ಕಸ, ಒಣಕಸ ಬೇರ್ಪಡಿಸಿ ಅವುಗಳನ್ನು ಸಂಗ್ರಹಿಸಿ ಸಂಸ್ಕರಿಸಿ ಗೊಬ್ಬರವನ್ನಾಗಿ ಮಾರಾಟ ಮಾಡುವ ಯೋಜನೆ ರೂಪಿಸಿದೆ. ಇನ್ನು ನ್ಯಾಪ್‍ಕಿನ್‍ಗಳನ್ನು ಸುಡಲು ಆಧುನಿಕ ಯಂತ್ರವನ್ನೂ ಸಹ ಅಳವಡಿಸಲಾಗಿದೆ. ಸರ್ಕಾರ ಇವರ ಆರಂಭಿಕ ಕಾಯಕವನ್ನು ಗುರುತಿಸಿ ಪಂಚಾಯ್ತಿಗೆ ಹೆಚ್ಚಿನ ಜಾಗವನ್ನು ನೀಡಿದೆ.

ಎಂ.ಎಲ್. ವೈಶಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಶಿವಮೊಗ್ಗ ಮಾತನಾಡಿ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ತುಂಬಾ ವ್ಯವಸ್ಥಿತವಾಗ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ. ಗ್ರಾಮಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು, ಸ್ಥಳೀಯರ ಸಹಕಾರದಿಂದ ಇದು ಯಶಸ್ವಿಯಾಗಿ ನಡೆಯುತ್ತಿದ್ದು ಸ್ವಚ್ಛಭಾರತ್ ಯೋಜನೆ ಅಡಿ 20 ಲಕ್ಷ 14ನೇ ಹಣಕಾಸು ಯೋಜನೆ ಅಡಿ ಮತ್ತು ಸ್ಥಳೀಯ ಹಣ ಕ್ರೋಢೀಕರಣದಲ್ಲಿಯೂ ಇದಕ್ಕೆ ಅನುದಾನ ನೀಡಲಾಗುತ್ತದೆ.

ಪಿಡಿಓ, ರಾಘವೇಂದ್ರ ಶಿವಮೊಗ್ಗ
ಮಾತನಾಡಿ ಜಿಲ್ಲೆಯಲ್ಲಿ ಪ್ರಥಮವಾಗಿ ರಿಪ್ಪನ್‍ಪೇಟೆ ಗ್ರಾಮಪಂಚಾಯ್ತಿ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ವಹಿಸುತ್ತಿದ್ದೇವೆ. ಆರಂಭದಲ್ಲಿ ಸವಾಲುಗಳಾದರೂ ಈಗ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿದೆ. ಎಲ್ಲರ ಸಹಕಾರದಿಂದ ಇದರಲ್ಲಿ ಇನ್ನೂ ಹೆಚ್ಚಿನ ಮಾರ್ಪಾಡುಗಳನ್ನು ಮಾಡಿ ವ್ಯವಸ್ಥಿತವಾಗಿ ನಡೆಸಲಾಗುವುದು.

ಆರ್.ಎನ್. ಮಂಜುನಾಥ, ಸ್ಥಳೀಯ
ಮಾತನಾಡಿ ನಮ್ಮ ಪಂಚಾಯ್ತಿಯ ಈ ರೀತಿಯ ಚಿಂತನೆ ಎಲ್ಲಾ ಗ್ರಾಮಪಂಚಾಯ್ತಿಯಲ್ಲಿಯೂ ಮಾಡಬೇಕು. ತ್ಯಾಜ್ಯ ವಿಲೇವಾರಿ ಎನ್ನುವುದು ತಲೆನೋವಾಗಿದೆ. ಇದಕ್ಕೆ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಾದದ್ದು ನಮ್ಮ ಜವಾಬ್ದಾರಿ.

ಸಾವಿತ್ರಮ್ಮ, ಪೌರನೌಕರರು
ಮಾತನಾಡಿ ತ್ಯಾಜ್ಯ ವಿಲೇವಾರಿ ಘಟಕದಿಂದ ಕಸವನ್ನು ಬೇರ್ಪಡಿಸಿ ಸಂಸ್ಕರಿಸಿ ಗೊಬ್ಬರ ಮಾಡುತ್ತೇವೆ. ಪಂಚಾಯ್ತಿಗೆ ಇದು ಆದಾಯ ತರುತ್ತದೆ, ದುಡಿಯುವ ಕೈಗಳಿಗೂ ಕೆಲಸ ಸಿಗುತ್ತದೆ.

ಪ್ರಕಾಶ, ಪೌರನೌಕರರು
ಮಾತನಾಡಿ ಇಲ್ಲಿ ಕಸದ ವಿಲೇವಾರಿ ವ್ಯವಸ್ಥಿತವಾಗಿ ನಡೆದಿದೆ. ಗ್ರಾಮಸ್ಥರ ಸಹಕಾರದಿಂದ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಪಂಚಾಯ್ತಿ ವತಿಯಿಂದ ನಿರ್ವಹಣೆಯಲ್ಲಿ ನಾವೆಲ್ಲ ತೊಡಗಿಕೊಂಡಿದ್ದೇವೆ.

error: Content is protected !!