‘ಶಿವಮೊಗ್ಗ ಜಿಲ್ಲೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ವತಿಯಿಂದ ಗ್ರಾಮದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದು ಕುಡಿಯುವ ನೀರು, ನೈರ್ಮಲ್ಯ, ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಈ ಬಾರಿ ಜಿಲ್ಲೆಯ ಏಳು ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧಿ ‘ಗ್ರಾಮ ಪುರಸ್ಕಾರ್’ ನೀಡಿದೆ.


ಶಿವಮೊಗ್ಗ ಜಿಲ್ಲೆಯ ‘ಅಬ್ಬಲಗೆರೆ, ಆನೆವೇರಿ, ರಿಪ್ಪನಪೇಟೆ, ಪಡವಗೋಡು, ಅರೆಹಳ್ಳಿ, ತೊಗರ್ಸಿ ಮತ್ತು ಹುರುಳಿ’ ಗ್ರಾಮಪಂಚಾಯ್ತಿಗಳಿಗೆ ಈ ಪುರಸ್ಕಾರ ನೀಡಲಾಗಿದೆ. ಈ ವರ್ಷ 2018-19 ನೇ ಸಾಲಿನಲ್ಲಿ 23 ಕೋಟಿ 30ಲಕ್ಷ ಹಣ ವ್ಯಯವಾಗಿದ್ದು ಶಿವಮೊಗ್ಗ ಜಿಲ್ಲೆಯ 870 ಕೆರೆಗಳನ್ನು ಉದ್ಯೋಗಖಾತ್ರಿ ಯೋಜನೆಯ ಮೂಲಕವೇ ಹಸನುಗೊಳಿಸಲಾಗಿದೆ. ಅದರಲ್ಲಿ 7ಲಕ್ಷ 49ಸಾವಿರ ಮಾನವ ದಿನಗಳನ್ನು ಬಳಸಲಾಗಿದೆ. ಇದರಲ್ಲಿ ಪುರಸ್ಕಾರಕ್ಕೆ ಭಾಜನವಾಗಿರುವ ಗ್ರಾಮಪಂಚಾಯ್ತಿಗಳು ಅತಿ ಹೆಚ್ಚು ಕಾರ್ಯ ನಿರ್ವಹಿಸಿವೆ.
ಈಗಾಗಲೇ ಶಿವಮೊಗ್ಗ ಜಿಲ್ಲೆಯನ್ನು ಬಹಿರ್ದೆಸೆಮುಕ್ತ ಜಿಲ್ಲೆ ಎಂದು 2017ರಲ್ಲಿಯೇ ಘೋಷಣೆ ಮಾಡಲಾಗಿದ್ದು ಪ್ರಶಸ್ತಿ ಪುರಸ್ಕ್ರತ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲೂ ಉತ್ತಮವಾದ ಶೌಚಾಲಯಗಳನ್ನು ವೈಯಕ್ತಿಕವಾಗಿ ಮತ್ತು ಸಾರ್ವಜನಿಕವಾಗಿ ನಿರ್ಮಿಸಿ ಶುಚಿತ್ವವನ್ನು ಕಾಪಾಡಲಾಗಿದೆ.


ಈ ಸಾಲಿನಲ್ಲಿ ಅತಿ ಹೆಚ್ಚು 128 ಜಾನುವಾರು ತೊಟ್ಟಿಗಳನ್ನು ಇದಕ್ಕೆ 83 ಲಕ್ಷ 70ಸಾವಿರ ಹಣವನ್ನು ವಿನಿಯೋಗಿಸಲಾಗಿದೆ. 4,990 ಮಾನವದಿನಗಳನ್ನು ಬಳಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಾದ್ದರಿಂದ ಹೆಚ್ಚು ಜಾಬ್‍ಕಾರ್ಡ್‍ಗಳನ್ನು ನೀಡಲಾಗಿತ್ತಲ್ಲದೆ ಓರ್ವನಿಗೆ 150 ಮಾನವದಿನಗಳನ್ನು ನೀಡಲಾಗಿತ್ತು. ಇದರ ಸದ್ವಿನಿಯೋಗವಾಗಿದ್ದು ಶಿವಮೊಗ್ಗ ಜಿಲ್ಲೆಯ ತುತ್ತತುದಿಯ ಗ್ರಾಮಪಂಚಾಯ್ತಿಯಾದ ಪ್ರಶಸ್ತಿ ಪುರಸ್ಕøತ ಅರೆಹಳ್ಳಿಯ ಕಾಡಿನಲ್ಲಿ ಜಾನುವಾರುಗಳಿಗೂ ಕುಡಿಯುವ ನೀರಿನ ಹಳ್ಳಗಳನ್ನು ನರೇಗಾದ ಮೂಲಕ ನಿರ್ಮಿಸಿರುವುದು ಗಮನಾರ್ಹ ಸಂಗತಿ.

ವೈಶಾಲಿ ಎಂ.ಎಲ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಪಂ, ಶಿವಮೊಗ್ಗ ಮಾತನಾಡಿ
ಶಿವಮೊಗ್ಗ ಜಿಲ್ಲೆಯಲ್ಲಿ 271 ಗ್ರಾಪಂಚಾಯತಿಗಳಿವೆ. ಅದರಲ್ಲಿ ಏಳು ಪಂಚಾಯ್ತಿಗಳಿಗೆ ಗಾಂಧಿ ಪುರಸ್ಕಾರ ಘೋಷಿಸಿದ್ದು ಇಲ್ಲಿ ಮಾನವ ದಿನಗಳನ್ನು ವ್ಯವಸ್ಥಿತವಾಗಿ ಬಳಸಲಾಗಿದೆಯಲ್ಲದೆ ನರೇಗಾ ಯೋಜನೆಯನ್ನು ಉಪಯುಕ್ತವಾಗಿ ಬಳಸಿಕೊಂಡು ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲಾ ಪಂಚಾಯ್ತಿಗಳನ್ನು ನಾನು ಗಮನಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಫಲವಂತಿಕೆ ಕಂಡಿವೆ.

ಪ್ರೇಮ ಶ್ರೀಧರ ಶೇಟ್, ಪಿಡಿಓ, ಶಿವಮೊಗ್ಗ [ಪ್ರಶಸ್ತಿ ಪುರಸ್ಕøತ] ಮಾತನಾಡಿ ನಮ್ಮ ಪಂಚಾಯ್ತಿಯಲ್ಲಿ ಉತ್ತಮವಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಕುಡಿಯುವ ನೀರು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದ್ದು ಸಾಂಘಿಕ ಪ್ರಯತ್ನದಿಂದ ಪ್ರಶಸ್ತಿ ಬಂದಿದೆ ಎಂದು ತಿಳಿಸಿದರು.

ಸಯದ್ ಸೀಮಾ, ಪಿಡಿಓ, ಆನೆವೇರಿ ಗ್ರಾಪಂ ಭದ್ರಾವತಿ [ಪ್ರಶಸ್ತಿ ಪುರಸ್ಕøತ] ಮಾತನಾಡಿ ಪಂಚಾಯ್ತಿಯ ಎಲ್ಲಾ ಸದಸ್ಯರ ಸಹಕಾರ ಮತ್ತು ಗ್ರಾಮದ ಜನರ ಒಟ್ಟು ಕಾರ್ಯ ನಿರ್ವಹಣೆಯಿಂದ ಪ್ರಶಸ್ತಿ ಬಂದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದೇವೆ ಎಂದರು.

ರಾಘವೇಂದ್ರ ಪಿಡಿಓ, ಪಡವಗೋಡು, ಸಾಗರ ತಾಲ್ಲೂಕು [ಪ್ರಶಸ್ತಿ ಪುರಸ್ಕøತ] ಮಾತನಾಡಿ
ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದ ಕಾಲೊನಿಗಳಿಗೆ ಕಾಂಕ್ರೀಟ್ ರಸ್ತೆ, ಸಂಪೂರ್ಣ ಎಲ್ಲಾ ಮನೆಗಳಿಗೂ ಅಗತ್ಯ ಶೌಚಾಲಯ ನಿರ್ಮಾಣ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿದ್ದು ನರೇಗಾ ಯೋಜನೆಯ ಅನುದಾನದಲ್ಲಿ ಭವನ ಕಟ್ಟಿದ್ದೇವೆಎಂದು ಹೇಳಿದರು.

ಮಾಲತೇಶ, ಗ್ರಾಮಸ್ಥ, ಪಡವಗೋಡು ಮಾತನಾಡಿ ನಮ್ಮ ಪಂಚಾಯ್ತಿಯಲ್ಲಿ ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಉತ್ತಮ ಕಾರ್ಯ ನಿರ್ವಹಣೆಯಾಗಿದ್ದು ಗ್ರಾಪಂ ಮಾದರಿಯಾಗಿದೆ ಎಂದರು.

error: Content is protected !!