2019ನೇ ಸಾಲಿನ “ಕುವೆಂಪು ರಾಷ್ಟ್ರೀಯ ಪುರಸ್ಕಾರ” ಕ್ಕೆ ಪಂಜಾಬಿ ಭಾಷೆಯ ಇಬ್ಬರು ಸುಪ್ರಸಿದ್ದ ಸಾಹಿತಿಗಳು ಆಯ್ಕೆಯಾಗಿರುತ್ತಾರೆ. ಇದೇ ನವೆಂವರ್‌೧೬ ನೇ ತಾರೀಖು ೧೬.೧೧.೨೦೧೯ರಂದು ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಟಾನದ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪ . ನಾಗರಾಜಯ್ಯನವರ.
ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು.

ಕನಾ೯ಟಕ ಸಕಾ೯ರದ ನಿವೃತ್ತ ಮುಖ್ಯ ಕಾಯ೯ದಶಿ೯ ಹಾಗು ಸಾಹಿತಿಗಳಾದ ಚಿರಂಜೀವಿ ಸಿಂಗ್‌ , ಜೆ.ಎನ್.ಯು (ನವದೆಹಲಿ) ವಿಶ್ವವಿದ್ಯಾಲಯದ ನಿವ್ರತ್ತ ಪ್ರಾದ್ಯಾಪಕರು ಪಂಜಾಬಿನ ಲೇಖಕರೂ ಆದ ಪಟಿಯಾಲದ ಪ್ರೊ.ಚಮನ್ ಲಾಲ್‌ ಹಾಗು ಕೇಂದ್ರ ಸಾಹಿತ್ಯ ಅಕಾಡಮಿಯ ನಿವೃತ್ತ ಕಾಯ೯ದಶಿ೯ ಶ್ರೀ ಅಗ್ರಹಾರ ಕೃಷ್ಣಮೂತಿ೯ಯವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಪ್ರತಿಷ್ಟಾನದ ಸಮ ಕಾಯ೯ದಶಿ೯ ಶ್ರೀ ಕಡಿದಾಳ್‌ ಪ್ರಕಾಶ್‌ ರವರು ಸಂಚಾಲಕರಾಗಿದ್ದರು.

ಪಂಜಾಬಿ ಸಾಹಿತ್ಯದ ಶ್ರೀಮಂತಿಕೆ ಹಾಗು ಸತ್ವವನ್ನು ತಮ್ಮ ಕಥೆ, ಕಾದಂಬರಿ, ಅನುವಾದಗಳನ್ನೊಳಗೊಂಡ ವಿಶಿಷ್ಟ ಕೃತಿಗಳ ಮೂಲಕ ಹೆಚ್ಚಿಸಿದ ಬಹು ಮಹತ್ವದ ಹಿರಿಯ ಲೇಖಕರಾದ ಶ್ರೀಮತಿ ಅಜೀತ್‌ ಕೌರ್‌ ಹಾಗು ಗುರು ಬಚನ್‌ ಸಿಂಗ್‌ ಭುಲ್ಲರ್‌ – ಈ ಇಬ್ಬರನ್ನು ೨೦೧೯ರ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು.

ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನೋತ್ಸವದಂದು ೨೯.೧೨.೨೦೧೯ ರಂದು ಶಿವಮೊಗ್ಗ ಜಿಲ್ಲೆ ತೀಥ೯ಹಳ್ಳಿ ತಾಲ್ಲೂಕಿನ ಕುಪ್ಫಳ್ಳಿಯಲ್ಲಿ ಶ್ರೀಮತಿ ಅಜಿತ್‌ ಕೌರ್‌ ಹಾಗು ಗುರು ಬಚನ್‌ ಸಿಂಗ್‌ ಭುಲ್ಲರ್‌ ಅವರಿಗೆ ಜಂಟಿಯಾಗಿ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಪ್ರಧಾನ ಮಾಡಲಾಗುವುದು. ಪ್ರಶಸ್ತಿಯು ೫ ಲಕ್ಷ ರೂಪಾಯಿ ಹಾಗು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.

error: Content is protected !!