ಸಾಗರ : ತಾಲ್ಲೂಕಿನ ಹೊಸಗುಂದದಲ್ಲಿ ಭಾನುವಾರ ಹೊಸಗುಂದ ಉತ್ಸವ ಅಂಗವಾಗಿ ಏರ್ಪಡಿಸಿದ್ದ ಕೃಷಿ ಮತ್ತು ಬದುಕು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಕೃಷಿ ಪದ್ದತಿ ಅತ್ಯಂತ ಉತ್ಕøಷ್ಟವಾಗಿದ್ದು, ಜಗತ್ತು ಇನ್ನೂ ಭಾರತೀಯ ಕೃಷಿ ಪದ್ದತಿಯನ್ನು ನೋಡಿ ಕಲಿತುಕೊಳ್ಳಬೇಕಾದದ್ದು ಸಾಕಷ್ಟಿದೆ ಎಂದು ಅಮೇರಿಕಾದ ಮೌಂಟೇನ್ ರೋಸ್ ಹಬ್ರ್ಸ್‍ನ ಮುಖ್ಯಸ್ಥೆ ಜೆನ್ನಿಫರ್ ಚೆಟ್ರಿ ಹೇಳಿದರು.

ಭಾರತದ ಸಾವಯವ ಕೃಷಿ ಪದ್ದತಿಗೆ ವಿಶ್ವದಾದ್ಯಂತ ಮಾನ್ಯತೆ ಸಿಗುತ್ತಿದೆ. ಬೇರೆಬೇರೆ ಕೃಷಿ ಪದ್ದತಿಗಳಿದ್ದಾಗ್ಯೂ ಅವೆಲ್ಲವೂ ಕೃಷಿಕರಲ್ಲಿ ಹೊಸ ಉತ್ಸಾಹವನ್ನು ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಅನುಷ್ಟಾನಗೊಳ್ಳಬೇಕು. ಕೃಷಿಯೊಂದಿಗೆ ನಮ್ಮ ರೈತರು ಸಹಬಾಳ್ವೆ ನಡೆಸುವಂತೆ ಆಗಬೇಕು. ಇಂತಹ ವಿಚಾರ ಸಂಕಿರಣದ ಮೂಲಕ ಕೃಷಿಯಲ್ಲಿ ಉನ್ನತಿ ಸಾಧಿಸುವ ಬಗ್ಗೆ ಅರಿತುಕೊಳ್ಳಲು ಸಾಧ್ಯವಿದೆ. ಮೌಂಟೇನ್ ರೋಸ್ ಹಬ್ರ್ಸ್ ಸಂಸ್ಥೆ ಕಳೆದ 30 ವರ್ಷಗಳಿಂದ ಭಾರತದ ಆರ್ಯುವೇದಿಕ ಮಾರುಕಟ್ಟೆ ಮತ್ತು ಸಾವಿರಾರು ರೈತರ ಜೊತೆ ನೇರ ಸಂಪರ್ಕವನ್ನು ಹೊಂದಿದೆ. ಇಲ್ಲಿನ ಅನೇಕ ಔಷಧೀಯ ವಸ್ತುಗಳನ್ನು ನಮ್ಮ ಸಂಸ್ಥೆ ಖರೀದಿಸುವ ಜೊತೆಗೆ ರೈತರ ಸಮಸ್ಯೆಗಳಿಗೆ ಕಾಲಕಾಲಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

ಪ್ರಸ್ತುತ ಅನೇಕ ಸವಾಲುಗಳನ್ನು ಸಹ ಎದುರಿಸುವಂತೆ ಆಗಿತ್ತು. ಆದರೆ ಗೆಲುವಿಗಿಂತ ಸೋಲಿನಲ್ಲಿಯೆ ಹೆಚ್ಚು ಪಾಠ ಕಲಿಯಬೇಕು ಎನ್ನುವುದು ನಮ್ಮ ಸಂಸ್ಥೆಯ ಉದ್ದೇಶ. ಈ ನಿಟ್ಟಿನಲ್ಲಿ ಭಾರತೀಯ ಕೃಷಿಗೆ ಯಾವತ್ತೂ ಸೋಲು ಇಲ್ಲ ಎಂದರು. ದಿಕ್ಸೂಚಿ ಭಾಷಣ ಮಾಡಿದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಅ.ಶ್ರೀ. ಆನಂದ್, ನಮ್ಮಲ್ಲಿ ಕೃಷಿ ಕ್ರಮ ಬೇರೆಬೇರೆ ಇದ್ದರೂ, ಎಲ್ಲವೂ ಕೃಷಿ ಅಭಿವೃದ್ದಿಗೆ ಬಳಕೆ ಆಗುತ್ತದೆ. ನಮ್ಮ ಹಳ್ಳಿ, ಕೃಷಿ, ಗೋವುಗಳನ್ನು ಉಳಿಸಿಕೊಳ್ಳುವ ತುರ್ತು ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚು ಇದೆ. ಪ್ರಸ್ತುತ ನಮ್ಮ ಮಕ್ಕಳು, ಗೋವು ನಮ್ಮ ಜೊತೆಯಲ್ಲಿ ಇಲ್ಲ. ಆಸ್ತಿ ಇದೆ, ಆದರೆ ಅದನ್ನು ಅಭಿವೃದ್ದಿಪಡಿಸುವ ಆಸಕ್ತಿ ನಮ್ಮಲ್ಲಿ ಉಳಿದಿಲ್ಲ. ನಾವು ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳುವುದು, ಜಮ್ಮುಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳುವುದು ಎಷ್ಟು ಮುಖ್ಯವೋ ನಮ್ಮ ನೆಲಮೂಲ ಸಂಸ್ಕøತಿಗಳಲ್ಲಿ ಒಂದಾಗಿರುವ ಕೃಷಿಯನ್ನು ಉಳಿಸಿಕೊಳ್ಳುವುದು ಸಹ ಎಲ್ಲದ್ದಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಶೂನ್ಯ ಬಂಡವಾಳ ಕೃಷಿ, ಜೀವಚೈತನ್ಯ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ ಸೇರಿದಂತೆ ಅನೇಕ ವಿಧಾನಗಳಿವೆ. ಒಂದು ಕೃಷಿ ಪದ್ದತಿಯವರನ್ನು ಕಂಡರೆ ಮತ್ತೊಂದು ಕೃಷಿಪದ್ದತಿಯವರಿಗೆ ಆಗುವುದಿಲ್ಲ. ಇಂತಹ ಗೊಂದಲಗಳ ನಿವಾರಣೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ. ಎಲ್ಲ ಕೃಷಿ ಪದ್ದತಿಗಳ ಉದ್ದೇಶವೂ ಪ್ರಕೃತಿ ಒಪ್ಪುವ ಉತ್ಪನ್ನಗಳನ್ನು ಗ್ರಾಹಕನ ಬಳಿಗೆ ಒಯ್ಯಬೇಕು ಎನ್ನುವುದೆ ಆಗಿರುತ್ತದೆ. ನಾವು ಗ್ರಾಹಕರಿಗೆ ಉತ್ಪನ್ನದ ರೂಪದಲ್ಲಿ ಅನ್ನದ ಅಗಳನ್ನು ಪೂರೈಕೆ ಮಾಡುತ್ತಿದ್ದೇವೆ ಎನ್ನುವ ವಿಶಾಲ ಮನೋಭಾವ ಬೆಳೆಯುವವರಲ್ಲಿ ಇರಬೇಕು ಎಂದರು. ಇಂದಿನ ದಿನಮಾನಗಳಲ್ಲಿ ಕೃಷಿಕ ತೀರ ಹತಾಶನಾಗಿದ್ದಾನೆ. ಆತನಲ್ಲಿ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎನ್ನುವ ಉತ್ಸಾಹ ಉಳಿದಿಲ್ಲ.

ನಮ್ಮ ವ್ಯವಸ್ಥೆ ಸಹ ರೈತರಲ್ಲಿ ಆತ್ಮಚೈತನ್ಯ ತುಂಬುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ರೈತರಲ್ಲಿ ಉತ್ಸಾಹ ಕಡಿಮೆ ಆಗುತ್ತಿರುವ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ನಮ್ಮ ಮಗ, ಮಗಳು, ಸೊಸೆ ಕೃಷಿಯಲ್ಲಿಯೆ ಬದುಕಿನ ಸಂತೃಪ್ತಿ ಕಟ್ಟಿಕೊಳ್ಳುವ ಮನೋಭೂಮಿಕೆ ವೃದ್ದಿಸುವ ಅಗತ್ಯವಿದೆ. ಇಂತಹ ಕಾರ್ಯಾಗಾರಗಳು ಕೃಷಿಯ ಮೇಲೆ ಬೆಳಕು ಚೆಲ್ಲಿ ರೈತರ ಮೊಗದಲ್ಲಿ ಕುಂದಿರುವ ಉತ್ಸಾಹದ ಚಿಲುಮೆಯನ್ನು ಮತ್ತೆ ಚಿಮ್ಮಿಸುವಂತೆ ಆಗಬೇಕು ಎಂದು ತಿಳಿಸಿದರು.

ಜೀವ ಚೈತನ್ಯ ಕೃಷಿ ‘ ವಿಷಯ ಕುರಿತು ಬೆಂಗಳೂರಿನ ಬಯೋ ಡೈನಾಮಿಕ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಸಂದೀಪ್ ಕಾಮತ್, `ಎಲ್ಲರ ಒಳಿತಿಗಾಗಿ ಸಾವಯವ ಕೃಷಿ’ ವಿಷಯ ಕುರಿತು ಬೆಂಗಳೂರು ಗ್ರೀನ್‍ಪಾತ್ ಆಗ್ರ್ಯಾನಿಕ್‍ನ ಎಚ್.ಆರ್.ಜಯರಾಮ್, ಶೂನ್ಯ ಬಂಡವಾಳ ಕೃಷಿ ಕುರಿತು ಪ್ರಗತಿಪರ ಕೃಷಿಕ ಸಿ.ಜಿ.ಹರ್ಷವರ್ಧನ್ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಅಮೇರಿಕಾದ ಮೌಂಟೇನ್ ರೋಸ್ ಹಬ್ರ್ಸ್ ಸಂಸ್ಥೆ ವತಿಯಿಂದ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿ ಪದವಿ ಶಿಕ್ಷಣ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಹೊಸಗುಂದದ ಗಣಪತಿ ಶೆಟ್ಟಿ ಪುತ್ರಿ ಹರ್ಷಿತಾ ಅವರಿಗೆ ರೂ. 35ಸಾವಿರ ರೂ. ಆರ್ಥಿಕ ಸಹಕಾರ ನೀಡಲಾಯಿತು.
ನವದೆಹಲಿ ಭಾರತೀಪೀಠದ ಶ್ರೀ ಸರ್ವಾನಂದ ಸರಸ್ವತಿ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಜ್ಯೋತಿ ಕೋವಿ, ಸುಧೀಂದ್ರ ದೇಶಪಾಂಡೆ, ಜೇಕಬ್ ಇನ್ನಿತರರು ಉಪಸ್ಥಿತರಿದ್ದರು. ಉಮಾಮಹೇಶ್ವರ ಸೇವಾ ಟ್ರಸ್ಟ್‍ನ ಮುಖ್ಯಸ್ಥ ಸಿ.ಎಂ.ಎನ್.ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಧ್ವರಾಜ್ ನಿರೂಪಿಸಿದರು.

error: Content is protected !!