ಶಿವಮೊಗ್ಗ, ನವೆಂಬರ್-೦೨ : ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ಇಳುವರಿಗಾಗಿ ಬೆಂಗಳೂರಿನಿದ ಬಿಡುಗಡೆಯಾದ ಅರ್ಕ ಜೀವಾಣು ಗೊಬ್ಬರವನ್ನು ಉಪಯೋಗಿಸುವುದು ಲಾಭದಾಯಕವಾಗಿರುತ್ತದೆ ಎಂದು ತೋಟಗಾರಿಕೆ ಉಪನಿದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.
ಅರ್ಕ ಜೀವಾಣು ಗೊಬ್ಬರವನ್ನು ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವುದರಿಂದ ಉತ್ಪಾದನೆ, ಮಣ್ಣಿನ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಶೇ ೨೫ ರಷ್ಟು ರಾಸಾಯನಿಕ ಗೊಬ್ಬರಗಳ ಕಡಿಮೆ ಬಳಕೆ, ೧೫ ರಿಂದ ೨೦% ರಷ್ಟು ಇಳುವರಿಯಲ್ಲಿ ಹೆಚ್ಚಳ ಹಾಗೂ ಉತ್ತಮ ಗುಣಮಟ್ಟದ ಬೆಳೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅರ್ಕ ಜೀವಾಣು ಗೊಬ್ಬರವನ್ನು ವಿವಿಧ ಬೆಳೆಗಳಲ್ಲಿ ವಿವಿಧ ಹಂತಗಳಲ್ಲಿ ಬಳಸಬಹುದಾಗಿರುತ್ತದೆ. ಕಾಳುಮೆಣಸು ಬೆಳೆಯಲ್ಲಿ ಬರುವ ಸೊರಗು ರೋಗಗಳ (ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗ) ನಿಯಂತ್ರಣಕ್ಕೆ ಅರ್ಕ ಜೀವಾಣು ಗೊಬ್ಬರವನ್ನು ಬಳಸಬಹುದಾಗಿರುತ್ತದೆ, ೧೦ ಮಿ.ಲೀ ಅರ್ಕ ಲಿಕ್ವಿಡ್ ಫಾರ್ಮುಲೇಶನ್ ಅನ್ನು ೧ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ೫೦ ಗ್ರಾಂ ಅರ್ಕ ಜೀವಾಣು ಗೊಬ್ಬರವನ್ನು ಪ್ರತಿ ಗಿಡಕ್ಕೆ ನೀಡಬೇಕು. ಶುಂಠಿ ಬೆಳೆಯಲ್ಲಿ ಮತ್ತು ಅಡಿಕೆ ಬೆಳೆಯಲ್ಲಿ ಬರುವ ಕೊಳೆರೋಗಕ್ಕೂ ಕೂಡ ಅರ್ಕ ಜೀವಾಣು ಗೊಬ್ಬರವನ್ನು (೫೦ ರಿಂದ ೭೦ ಗ್ರಾಂ ಅರ್ಕ ಜೀವಾಣು ಗೊಬ್ಬರ) ಬಳಸುವುರಿಂದ ರೋಗವನ್ನು ನಿಯಂತ್ರಿಸಬಹುದು ಎಂದು ಅವರು ಸಲಹೆ ನೀಡಿದರು.
ತರಕಾರಿ ಬೆಳೆಗಳಲ್ಲಿ ಬಳಸುವ ವಿಧಾನ, ಮೊದಲನೇ ಹಂತದಲ್ಲಿ ೧ ಲೀಟರ್ ನೀರಿಗೆ ೨೦ ಗ್ರಾಂ ಅರ್ಕ ಜೀವಾಣು ಗೋಬ್ಬರವನ್ನು ಹಾಕಿ ಮಿಶ್ರಣ ಮಾಡಿ ನರ್ಸರಿ ಮಡಿಗಳನ್ನು ತೋಹಿಸಬೇಕು. ಎರಡನೇ ಹಂತ ನಾಟಿ ಮಾಡಿದ ನಂತರ ಮುಖ್ಯ ಭೂಮಿಯಲ್ಲಿ ೧ ಲೀಟರ್ ನೀರಿಗೆ ೨೦ ಗ್ರಾಂ ಅರ್ಕ ಜೀವಾಣು ಗೋಬ್ಬರವನ್ನು ಹಾಕಿ ಮಿಶ್ರಣಮಾಡಿ ಡ್ರೆಂಚ್ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಎಲ್ಲಾ ತೋಟಗಾರಿಕೆ ಬೆಳೆಗಳಲ್ಲಿಯೂ ಅರ್ಕ ಜೀವಾಣು ಗೊಬ್ಬರವನ್ನು ಬಳಸಬಹುದಾಗಿರುತ್ತದೆ, ಅರ್ಕಾ ಜೀವಾಣು ಗೊಬ್ಬರದ ಬಳಕೆಯಿಂದ ಉತ್ತಮ ಇಳುವರಿಯನ್ನು ನೀರಿಕ್ಷಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

error: Content is protected !!