ಶಿವಮೊಗ್ಗದಿಂದ ಚೆನೈ, ತಿರುಪತಿ ಹಾಗೂ ಮೈಸೂರಿಗೆ ನೇರ ರೈಲು- ಶಿವಮೊಗ್ಗಕ್ಕೆ ಭರ್ಜರಿ ಮೂರು ರೈಲ್ವೆ ಕೊಡುಗೆಗಳು – ಶ್ರೀ ಬಿ.ವೈ. ರಾಘವೇಂದ್ರ,

ಶಿವಮೊಗ್ಗ, ಅಕ್ಟೋಬರ್-31 : ಸಾಗರ ತಾಲ್ಲೂಕಿನಲ್ಲಿ ಹಾದು ಹೋಗಿರುವಂತಹ ರೈಲ್ವೇ ಮಾರ್ಗದ ತಾಂತ್ರಿಕ ಪರಿಶೀಲನೆ ಕಾರ್ಯ ಅ. 30 ರಿಂದ ನ.6ರ ವರೆಗೆ ವಿವಿಧ ಲೆವೆಲ್ ಕ್ರಾಸ್‍ಗಳಲ್ಲಿ ನಡೆಯಲಿದ್ದು, ರಸ್ತೆ ವಾಹನ ಸಂಚಾರಕ್ಕೆ ತೊಡಕಾಗಲಿದ್ದು, ವಾಹನ ಸವಾರರು ಇಲಾಖೆಯಿಂದ ಸೂಚಿಸಲಾದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿರುತ್ತಾರೆ.
ನ.1ರ ಬೆ.8 ರಿಂದ ಸಂಜೆ 6.30ರ ವರೆಗೆ ಬಾಳೆಗುಂಡಿ ರಸ್ತೆಯಲ್ಲಿ ಹಾದು ಹೋಗಿರುವ ಲೆವೆಲ್ ಕ್ರಾಸ್ ಸಂಖ್ಯೆ 121ರ ಪರಿಶೀಲನೆ ಕಾರ್ಯ ನಡೆಯಲಿದ್ದು ವಾಹನ ಸವಾರರು ಮಾರ್ಗ-1ರ ಉಳ್ಳೂರು-ಕಾಸ್ಪಾಡಿ- ಅಡ್ಡೇರಿ-ಬಾಳೆಗುಂಡಿ-ನೀಚಡಿ-ತ್ಯಾಗರ್ತಿ-ದೊಡ್ಡಬೈಲ್/ಬಾಳೆಗುಂಡಿ, ಮಾರ್ಗ-2ರ ತ್ಯಾಗರ್ತಿ ಕ್ರಾಸ್-ಎಲ್.ಸಿ 126-ಬೊಮಟ್ಟಿ- ತ್ಯಾಗರ್ತಿ-ಬಾಳೆಗುಂಡಿ ಪರ್ಯಾಯ ಮಾರ್ಗವಾಗಿ ಸಾಗುವುದು.
ನ.2ರ ಬೆ.8 ರಿಂದ ಸಂ.6.30ರ ವರೆಗೆ ತ್ಯಾಗರ್ತಿ ರಸ್ತೆಯಲ್ಲಿ ಹಾದು ಹೋಗಿರುವ ಎಲ್.ಸಿ 126 ಮಾರ್ಗದ ಪರಿಶೀಲನೆ ನಡೆಯಲಿದ್ದು ವಾಹನ ಸವಾರರು ಮಾರ್ಗ-1 (ಸೊರಬ ರಸ್ತೆ ಮೂಲಕ) ಸಾಗರ-ಕಲಸೆ-ಬೊಮ್ಮತ್ತಿ-ತ್ಯಾಗರ್ತಿ, ಮಾರ್ಗ-2, ರಾಷ್ಟ್ರೀಯ ಹೆದ್ದಾರಿ-206ರ ಮೂಲಕ ಉಳ್ಳೂರು-ಕಾಸ್ಪಡಿ-ಅಡ್ಡೇರಿ-ಬಾಳೆಗುಂಡಿ-ನೀಚಡಿ-ತ್ಯಾಗರ್ತಿ ಮಾರ್ಗ-3ರ, ಬಳಸಗೋಡು-ಮಂಚಾಲೆ-ಬೊಮ್ಮಟ್ಟಿ-ತ್ಯಾಗರ್ತಿ ಮಾರ್ಗವಾಗಿ ಸಂಚರಿಸುವುದು.
ನ.3ರ ರಾತ್ರಿ.8 ರಿಂದ ನ.4ರ ಬೆ.7ರ ವರೆಗೆ ಬೈಪಾಸ್ ರಸ್ತೆಯಲ್ಲಿ ಹಾದು ಹೋಗಿರುವ ಎಲ್‍ಸಿ 129 ಮಾರ್ಗ-1 ರಾಷ್ಟ್ರೀಯ ಹೆದ್ದಾರಿ-2016ರ ಮೂಲಕ ಸಿಗಂದೂರು ಕ್ರಾಸ್-ಸೊರಬ ರಸ್ತೆ, ಮಾರ್ಗ-2ರ ಬೈಪಾಸ್-ಸೊರಬ ರಸ್ತೆ-ಎಲ್.ಸಿ130ಬಿ ಮೂಲಕ ಸಂಚರಿಸುವುದು.
ನ.05 ರ ರಾತ್ರಿ 8.00 ರಿಂದ ನ.06 ರ ಬೆಳಿಗ್ಗೆ 7.00ರವರೆಗೆ ಸೊರಬ ರಸ್ತೆಯಲ್ಲಿ ಹಾದು ಹೋಗಿರುವ ಎಲ್‍ಸಿ-130ಬಿ ಮಾರ್ಗ-1ರ ಬೈಪಾಸ್-ಕೆಳದಿ ಚೆನ್ನಮ್ಮ ಸರ್ಕಲ್-ಅಣಲೆಕೊಪ್ಪ-ಆರ್.ಪಿ.ರಸ್ತೆ, ಮಾರ್ಗ-2ರ ವೆಂಕಟರಮಣ ದೇವಸ್ಥಾನದ ರಸ್ತೆ-ಎಲ್.ಸಿ.132-ಚೆನ್ನಮ್ಮ ವೃತ್ತ-ಸೊರಬ ರಸ್ತೆ ಮಾರ್ಗವಾಗಿ ಸಂಚರಿಸುವುದು.
ಈ ತಾತ್ಕಾಲಿಕ ಮಾರ್ಗ ಬದಲಾವಣೆಗೆ ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳೊಡನೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!