ಒತ್ತಡದ ಜೀವನ ಮತ್ತು ತಪ್ಪು ಹೆಜ್ಜೆಗಳಿಂದಾಗಿ ಅಮಾಯಕ ಯುವಕರು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರ ಕನಸು ನನಸು ಮಾಡಬೇಕಾದ ವಯಸ್ಸಿನಲ್ಲಿ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಮೊದ ಮೊದಲು ಶೋಕಿಗಾಗಿ ಸಿಗರೇಟ್, ಗುಟ್ಕಾ, ತಂಬಾಕು, ಸೇವನೆ ಪ್ರಾರಂಭವಾಗಿ ನಂತರ ಅವು ಚಟವಾಗಿ ಪರಿಣಮಿಸಿ ಬೀಡಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪುವರು. ಸಿಗರೇಟ್ ಸೇದುವುದರಿಂದ ಮತ್ತು ತಂಬಾಕು ಆಗಿಯುವುದರಿಂದ ಏನೋ ಒಂಥರ ಖುಷಿ-ಕಿಕ್ ಕೊಟ್ಟು ಮೆದುಳು ಚುರುಕುಗೊಂಡಂತೆ ಭಾಸವಾಗುತ್ತದೆ.
ಅತಿಯಾಗಿ ತಂಬಾಕು ಸೇವಿಸುವವರು ಇತರೆ ವ್ಯಕ್ತಿಗಳಿಗಿಂತ ಹೆಚ್ಚಾಗಿ ಚಹಾ, ಕಾಫಿಯನ್ನು ಸೇವಿಸುತ್ತಾರೆ. ಇಂಥವರಿಗೆ ವ್ಯಾಯಮ ಮಾಡಲಾಗುವುದಿಲ್ಲ, ಮಾಡಿದರೂ ಬೇಗ ಸುಸ್ತಾಗುತ್ತಾರೆ. ಉಸಿರಾಟದ ತೊಂದರೆ, ಓಡುವಾಗ ಆಟವಾಡುವಾಗ ಹೆಚ್ಚು ಬಳಲುತ್ತಾರೆ. ಯುವಕರು ಖಿನ್ನತೆಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದೆ. ಇದರ ಅರಿವಿದ್ದರೂ ಯುವ ಜನರು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಧೂಮಪಾನ ನಿಷೇಧಿಸಿದೆ, ತಂಬಾಕು ಕೊಲ್ಲುತ್ತದೆ ಎಂಬ ಸೂಚನ ಫಲಕಗಳನ್ನು ಪ್ರತಿನಿತ್ಯ ನಾವು ಗಮನಿಸುತ್ತಲ್ಲೆ ಇರುತ್ತೇವೆ. ಹೀಗೆ ‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂದು ಸಿಗರೇಟು, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಪ್ಯಾಕೇಟಿನ ಮೇಲೆ ಶ್ವಾಸಕೋಶಗಳ ಹಾಳಾದ ಚಿತ್ರ ಸಹಿತ ಓದುತ್ತೇವೆ. ಹಾಗೂ ಚಿತ್ರಮಂದಿರಗಳಲ್ಲಿ ಚಿತ್ರದ ವಿಕ್ಷಣೆಗೆ ಹೋದರೆ ಅಲ್ಲೂ ಮೊದಲು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವೆಂದು ಜಾಹೀರಾತು ನೋಡತ್ತಲೇ ಇರುತ್ತವೆ. ಹೀಗೆ ಹಲವಾರು ಭಯಾನಕ ಚಿತ್ರಗಳನ್ನೂ ಕಾಣುತ್ತೇವೆ. ಆದರೂ ತಿಳಿದು ತಿಳಿದು ತಪ್ಪು ಮಾಡುವುದು ಯಾಕೆÉಂಬ ಪ್ರಶ್ನೆಯೂ ಸಹಜವಾಗಿ ಮೂಡುವುದು.
1984 ರಲ್ಲಿ ಇಂಗ್ಲೆಂಡಿನ ಹಲವರು ಧೂಮಪಾನಕ್ಕೆ ವಿರೋಧ ವ್ಯಕ್ತಪಡಿಸಿ, ಇದಕ್ಕಾಗಿ ರಾಪ್ಟ್ರೀಯ ಮಟ್ಟದಲ್ಲಿ ಮಾರ್ಚ್ ತಿಂಗಳು 2ನೇ ಬುಧವಾರದಂದು ‘ಧೂಮಪಾನ ವಿರೋಧಿ ದಿನ’ ಆಚರಿಸಬೇಕೆಂದು ನಿರ್ಧರಿಸಿದರು. ಧೂಮಪಾನದಿಂದ ತಮ್ಮ ಮತ್ತು ಇತರರ ಆರೋಗ್ಯ ಹಾಳು ಮಾಡುತ್ತಿರುವ ವಿಷಯ ಜನರಿಗೆ ತಿಳಿಸುವುದೇ ಇದರ ಮುಖ್ಯ ಗುರಿಯಾಗಿದೆ.
ಭಾರತದಲ್ಲಿ ತಂಬಾಕಿನ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು ಬೀಡಿ, ಸಿಗರೇಟ್, ಗುಟ್ಕಾ ಇವು ಧೂಮಪಾನ ರೂಪದಲ್ಲಿ ತಂಬಾಕು ಸೇವನೆಯ ವಿಧಗಳು ಇವುಗಳಲ್ಲಿ 4 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ಮತ್ತು 60ಕ್ಕೂ ಹೆಚ್ಚು ಕ್ಯಾನ್ಸರ್‍ಕಾರಕ ವಸ್ತುಗಳಿವೆ. ತಂಬಾಕಿನಿಂದ ಮುಖ್ಯವಾಗಿ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಕರುಳು, ಮೂತ್ರಪಿಂಡ ಇವೇ ಮೊದಲಾದ ಅಂಗಗಳು ಕ್ಯಾನ್ಸರ್‍ಗೆ ತುತ್ತಾಗುತ್ತದೆ. ಸಮಾನ್ಯವಾಗಿ ಧೂಮಪಾನ ಮಾಡುವವರು ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಎಂಬ ಭೀತಿ ಜನರಲ್ಲಿದೆ ಸಂಶೋಧನೆಗಳ ಪ್ರಕಾರ ಸಿಗರೇಟ್ ಸೇದುವವರಿಗೆ ಈ ವ್ಯಾಧಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದು ಗೊತ್ತಾಗಿದೆ.
ಪ್ರತಿದಿನ 2 ಪ್ಯಾಕ್ ಧೂಮಪಾನ ಮಾಡುವ ವ್ಯಕ್ತಿಯೊಂದಿಗೆ ಇತರೆ ಯಾವ ವ್ಯಕ್ತಿ ಇದ್ದರೂ ಪರೋಕ್ಷವಾಗಿ ಆತನು ದಿನಕ್ಕೆ 3 ಸಿಗರೇಟ್ ಸೇದಿದಂತಾಗುತ್ತದೆ. ಪರೋಕ್ಷವಾಗಿ ಧೂಮಪಾನ ಮಾಡಿದವರ ಮೂತ್ರ ಪರೀಕ್ಷೆಯಿಂದ ಅವರ ಮೂತ್ರದಲ್ಲಿ ನಿಕೋಟಿನ್ ವಿರುವ ಅಂಶ ಕಂಡುಬಂದಿದೆ. ಈ ಪರೋಕ್ಷ ಧೂಮಪಾನಿಗಳಿಗೆ ಪ್ಯಾಸೀವ್ ಸ್ಮೋಕ್‍ರ್ಸ್ ಎನ್ನುವರು.
ಭಾರತ ಸರ್ಕಾರವು ಜನಸಮಾನ್ಯರನ್ನು ತಂಬಾಕಿನ ದುಷ್ಟಪರಿಣಾಮಗಳಿಂದ ರಕ್ಷಿಸಲು ಒಂದು ರಾಪ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆಯಡಿಯಲ್ಲಿ ಸಾರ್ವಜನಿಕ ಪ್ರದೇಶಗಳಾದ ಆಸ್ಪತ್ರೆ, ಸರ್ಕಾರಿ ಕಛೇರಿಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತು ಹಾಗೂ ಶಾಲಾ-ಕಾಲೇಜುಗಳಿಂದ ಸುಮಾರು 100 ಅಡಿಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲವೆಂದು ಶಿಫಾರಸ್ಸುಗಳನ್ನು ಮಾಡಿದೆ.
ವಿಶ್ವದ್ಯಾದಂತಹ ತಡೆಗಟ್ಟಬಹುದಾದ ಕಾಯಿಲೆ ಮತ್ತು ಮರಣಗಳ ಕಾರಣಗಳಲ್ಲಿ ತಂಬಾಕು ಸೇವನೆಯು ಏಕೈಕ ಪ್ರಮುಖ ಕಾರಣವಾಗಿದೆ. ಪ್ರತೀ ವರ್ಷ ವಿಶ್ವದ್ಯಾದಂತಹ 55 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ 10 ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಇದು ಏಡ್ಸ್, ಕ್ಷಯ ಹಾಗೂ ಮಲೇರಿಯಾ ಈ ಮೂರು ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನರಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ. ತಂಬಾಕಿನಿಂದ ಸಾವನ್ನಪ್ಪುವವರ ಪೈಕಿ ಶೇ 80ರಷ್ಟು ಜನ ಗ್ರಾಮೀಣ ಭಾಗದವರು ಎಂಬುದು ಅಘಾತಕಾರಿ ಸಂಗತಿ. ಭಾರತದಲ್ಲಿ ಪುರುಷರು ಮತ್ತು ಮಹಿಳೆಯರು ತಂಬಾಕಿನಿಂದ ಬರುವ ಕ್ಯಾನ್ಸರ್‍ನ ಪ್ರಮಾಣ ಕ್ರಮವಾಗಿ ಶೇ. 56.4 ಮತ್ತು ಶೇ 44.6 ಆಗಿದೆ. 100 ಕ್ಯಾನ್ಸರ್ ಪ್ರಕರಣಗಳಲ್ಲಿ 40 ತಂಬಾಕು ಸೇವನೆಗೆ ಸಂಬಂಧಿಸಿದ್ದಾಗಿದೆ. ಸುಮಾರು ಶೇ 95 ರಷ್ಟು ಬಾಯಿ ಕ್ಯಾನ್ಸರ್‍ಗೆ ಕಾರಣ ತಂಬಾಕು ಸೇವನೆಯಾಗಿದೆ ಎಂದು ಕೆಲವೂಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ತಂಬಾಕು ಸೇವಿಸುವವರು ತಮ್ಮ ವಯಸ್ಸಿಗಿಂತ 10 ವರ್ಷ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ.
ಇಷ್ಟೆಲ್ಲಾ ದುಷ್ಟರಿಣಾಮಗಳ ಅರಿವಿದ್ದರೂ, ಯುವಜನತೆ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ. ಕಾಲೇಜು ಯುವಕರೆ ಹೆಚ್ಚು ಹೆಚ್ಚು ಮಾದಕ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಕಡೆ ಹೆಚ್ಚಿನ ಗಮನಕೊಡದಿರುವುದೇ ಇದಕ್ಕೆ ಕಾರಣವಾಗಿದೆ. ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ ಎಷ್ಟು ಮುಖ್ಯವೋ ಅವರ ಜೀವನವೂ ಅಷ್ಟೇ ಮುಖ್ಯ, ಈ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.


error: Content is protected !!