ಶಿವಮೊಗ್ಗ, ಅಕ್ಟೋಬರ್ 15 : ಪಶು ವೈದ್ಯಕೀಯ ಮಹಾವಿದ್ಯಾಲಯವು ಗ್ರಾಮೀಣ ಪ್ರದೇಶದ ರೈತರು, ರಐತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಅಕ್ಟೋಬರ್ 21ರಂದು ವಿದ್ಯಾಲಯದ ಆವರಣದಲ್ಲಿ ಮಲೆನಾಡು ಗಿಡ್ಡ ತಳಿ ಸಾಕಾಣಿಕೆ ಹಾಗೂ ಸಾಕಾಣಿಕೆದಾರರ ಸಂಘದ ಸದಸ್ಯತ್ವದ ಮಹತ್ವ ಎಂಬ ವಿಷಯದ ಕುರಿತು ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಈ ತರಬೇತಿಯಲ್ಲಿ ದೇಶಿ ಹಸು ತಳಿಗಳು, ಹಸುಗಳ ಆಹಾರ ನಿರ್ವಹಣೆ, ಸಂತಾನೋತ್ಪತ್ತಿ, ಮುಂತಾದ ವಿಷಯಗಳ ಕುರಿತು ಹಾಗೂ ಮಲೆನಾಡುಗಿಡ್ಡ ತಳಿ ಸಾಕಾಣಿಕೆದಾರರ ಸಂಘದ ಕುರಿತಾದ ಮಾಹಿತಿಗಳು ಮತ್ತು ರಸಮೇವು ತಯಾರಿಕೆ ಪ್ರಾತ್ಯಕ್ಷಿತೆಯನ್ನು ಆಯೋಜಿಸಲಾಗಿದೆ.
ತರಬೇತಿಗೆ ಆಯ್ದ 30ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಅಕ್ಟೋಬರ್ 19ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ಡಾ|| ಆರ್.ಜಯಶ್ರೀ, ಸಹ ಪ್ರಾಧ್ಯಾಪಕರು, ಮಲೆನಾಡುಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ-577204 ಅಥವಾ ಮೊ.9448627916, 789958776ನ್ನು ಸಂಪರ್ಕಿಸಬಹುದಾಗಿದೆ ಎಂದು ಪಶು ಮಹಾವಿದ್ಯಾಲಯದ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.