“ಸ್ವಚ್ಚತಾ ಹಿ ಸೇವಾ” ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾಯೋಜನೆ ಘಟಕಗಳ ವತಿಯಿಂದ ‘ಸ್ವಚ್ಚ ಹಾಗೂ ಹಸಿರು ಕ್ಯಾಂಪಸ್’ನ ಅರಿವು ಮೂಡಿಸಲು ಹೊಸದಾಗಿ ಜಾರಿಗೊಳಿಸಿದ “ನನ್ನ ಗಿಡ – ನನ್ನ ಪದವಿ” ಯೋಜನೆಗೆ ನವೀನ ರೀತಿಯ ಲೋಗೊ ವಿನ್ಯಾಸಗೊಳಿಸುವ ಸ್ಪರ್ಧೆಯನ್ನೂ ಸೇರಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಸೆಪ್ಟೆಂಬರ್-2019 ಮಾಸದಲ್ಲಿ ಹಮ್ಮಿಕೊಳ್ಳಾಗಿತ್ತು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಿ: 02-10-2019 ರಂದು ಮಹಾವಿದ್ಯಾಲಯದ ಅವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಇದರಲ್ಲಿ ವಿಧ್ಯಾರ್ಥಿಗಳು, ಭೋದಕ-ಭೋದಕೇತರ ಸಿಬ್ಬಂಧಿಗಳು ಹಾಗೂ ಸ್ವಯಂ ಸೇವಕರು ಬಹು ಸಂಖೈಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಜಾನುವಾರು ಸಂಕೀರ್ಣ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ತಿರುಮಲೇಶ ಟಿ., ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಸ್ತುತ ವಿದ್ಯಮಾನದಲ್ಲಿ, ದೇಶದ ರಾಷ್ಟಪಿತ, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ ಅನೇಕ ವಿಚಾರಧಾರೆಗಳ ಮಹತ್ವವನ್ನು ತಿಳಿಯಪಡಿಸಿದರು. ಗಾಂಧೀಜಿಯಂತಹ ಮಹಾಪುರುಷರ ಬದುಕು, ಆದರ್ಶಗಳನ್ನು ಒಂದಷ್ಟಾದರೂ ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ದೇಶದ ಇತಿಹಾಸ, ಸಂಸ್ಕøತಿಯ ಬಗ್ಗೆ ಮೇಲಿಂದ ಮೇಲೆ ಇಂತಹ ಮಹಾಚೇತನಗಳ ಜನ್ಮ ದಿನಾಚಹರಣೆಯೊಂದಿಗೆ ನೆನೆಪಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವದು ನಮ್ಮೆಲರ ಮಹತ್ತರ ಜವಾಬ್ದಾರಿ’ ಎಂದು ಅಭಿಪ್ರಾಯಪಟ್ಟರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್‍ರವರಾದ ಡಾ. ಪ್ರಕಾಶ್ ನಡೂರ್‍ರವರು ‘ಸ್ವಚ್ಚತಾ ಪ್ತತಿಜ್ಞಾವಿಧಿ’ಯನ್ನು ವಿಧ್ಯಾರ್ಥಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಭೋಧಿಸಿದರು. ನಂತರ ಮಾತನಾಡಿ, ಪ್ಲಾಸ್ಟಿಕ್‍ನಿಂದ ಪರಿಸರ-ಪ್ರಾಣಿ-ಮನುಷ್ಯನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಪ್ರತಿ ವರ್ಷವೂ ಟನ್‍ಗಟ್ಟಲೇ ಒಮ್ಮೆ-ಬಳಸುವ ಪ್ಲಾಸ್ಟಿಕ ಪರಿಸರದಲ್ಲಿ ಕಸದಂತೆ ಕೊನೆಗೊಳ್ಳುತ್ತದೆ. ಮುಂಬರುವ ಕೆಲವೇ ವರ್ಷಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಪ್ರಮಾಣವು ಭಾರಿ ಹೆಚ್ಚಳವನ್ನು ಎದುರಿಸಬೇಕಾಗಿರುವುದು ಬಹಳ ಆತಂಕಕಾರಿ ಬೆಳವಣಿಗೆ. ಇಂತಹ ಪ್ಲಾಸ್ಟಿಕನಿಂದ ಉತ್ಪತ್ತಿಯಾಗುವ ವಿಷಕಾರಿ ಹಾಗೂ ಕ್ಯಾನ್ಸರ್‍ಕಾರಕ ರಾಸಾಯನಿಕಗಳಾದ ಬಿಸ್ಫೆನಾಲ್-ಎ; ಡೈಯಾಕ್ಸಿನ್ಸ್; ಥ್ಯಾಲೇಟ್ಸ್ ಮತ್ತು ವಿನೈಲ್ ಕ್ಲೊರೈಡ್‍ಗಳ ಅಂಶ ಆಹಾರ ಹಾಗೂ ನೀರಿನ ಮೂಲಕ ‘ಆಹಾರಚಕ್ರ’ವನ್ನು ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿರವುದು ಬಹಳ ವಿಪರ್ಯಾಸದ ಸಂಗತಿ. ಈ ನಿಟ್ಟಿನಲ್ಲಿ, ಪ್ಲಾಸ್ಟಿಕ್‍ನ ನಿರ್ಮೂಲನೆಗಾಗಿ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಿ ನಮ್ಮ ಕ್ಯಾಂಪಸ್‍ನ್ನು ‘ಪ್ಲಾಸ್ಟಿಕ್ ತ್ಯಾಜ್ಯ’ ಮುಕ್ತಗೋಳಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎನ್. ಎಸ್. ಎಸ್. ಘಟಕದ ಸ್ವಯಂ ಸೇವಕರು ‘ಒಮ್ಮೆ-ಬಳಸುವ ಪ್ಲಾಸ್ಟಿಕನ’ ಬಳಕೆ ಹಾಗು ಸಂಪೂರ್ಣ ನಿರ್ಮೂಲನೆಯ ಘೋಷ ವಾಕ್ಯಗಳುಳ್ಳ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು. ನಂತರ ಸಾಮೂಹಿಕವಾಗಿ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಚತೆಯಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಸೇವಾಯೋಜನಾ ಅಧಿಕಾರಿಗಳಾದ ಡಾ. ಎಮ್.ಎಮ್. ವೆಂಕಟೇಶ್ ಹಾಗೂ ಡಾ. ಎಮ್. ಧೂಳಪ್ಪ ಇವರುಗಳು ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಲಹೆಗಾರರಾದ ಡಾ. ಪಿ. ಶೀಲಾ ಹಾಗೂ ಡಾ. ಜಿ. ಎಂ. ಸತೀಶ್ ರವರುಗಳ ಸಹಯೋಗದೊಂದಿಗೆ ಆಯೋಜಿಸಿದ್ದರು.

error: Content is protected !!