“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಶಿವಮೊಗ್ಗ, ಸೆಪ್ಟೆಂಬರ್-21 : ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತನ್ನ ಆಸಕ್ತಿ, ಬುದ್ದಿವಂತಿಕೆಯನ್ನೂ ತೋರಿಸುವಲ್ಲಿ ಯಶಸ್ವಿಯಾಗಿದ್ದು, ಹಾಗೇ ಕೃಷಿ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದಾರೆ ಎಂದು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪದ್ಮಶ್ರೀ ಡಾ.ವಿ. ಪ್ರಕಾಶ್ ಹೇಳಿದರು.
ನಗರದ ನವಲೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಆಯೋಜಿಸಿದ್ದ ಏಳನೇಯ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯನ್ನು ಬೆಳೆಯೋದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದರ ಬಳಕೆ ಅರಿವು, ಒಂದರಿಂದ ನಾಲ್ಕು ವರ್ಷದೊಳಗಿನ ಮಕ್ಕಳು ಪ್ರತಿ ದಿನ ಊಟವಿಲ್ಲದೇ ಹಸಿವಿನಿಂದ ಬಳಲುತಿದ್ದಾರೆ. ಆದರೆ ನಾವುಗಳು ಮೂರು ಹೊತ್ತು ಊಟ ಮಾಡುತ್ತಾ ಅದರ ಜೊತೆ ಅಷ್ಟೋಂದು ಆಹಾರವನ್ನು ಹಾಳು ಮಾಡುತ್ತಿದ್ದೆ. ಆ ಊಟದ ಹಿಂದಿನ ರೈತ ಶ್ರಮದ ಬಗ್ಗೆ ಅರಿವಿಲ್ಲದಂತಗಿದೆ. ರೈತ ಪರಿಶ್ರಮಕ್ಕೆ ಇಂದಿನಿಂದ ನಾವುಗಳೆಲ್ಲ ಬೆಲೆ, ಗೌರವ ನೀಡೋಣ ಎಂದು ಪ್ರತಿಜ್ಞೆ ಮಾಡಿಸಿದರು.
ಪ್ರಕೃತಿ ವಿರುದ್ಧ ಯಾವ ಕಾರ್ಯಗಳನ್ನೂ ಕೈಗೊಳ್ಳವಂತಿಲ್ಲ. ಅದರ ವಿರುದ್ಧ ಕಾರ್ಯ ಕೈಗೊಂಡಿದ್ದೇ ಆದಲ್ಲಿ ಮಾನುಷ್ಯ ಕುಲ ನಾಶವಾಗುವಲ್ಲಿ ಯಾವುದೇ ಸಂದೇಹ ಇಲ್ಲ. ಆ ಕಾರಣದಿಂದ ಹಸೀರಿಕರಣಗೊಳಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.
`ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ. ಮಂಜುನಾಥ್ ಕೆ. ನಾಯ್ಕ್ ವಹಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ನಿವೃತ್ತ ನಿರ್ದೇಶಕ ಡಾ. ವೀರಭದ್ರಯ್ಯ, ಇಲಾಖೆಯ ವ್ಯವಸ್ಥಾಪನಾ ಮಂಡಳಿ ಸದಸ್ಯ ನೀತು ಯೋಗಿರಾಜ್ ಪಾಟೀಲ್ ಮತ್ತಿತರರು ಹಾಜರಿದ್ದರು. ಹಾಗೂ ವಿವಿಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!