ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಸಿಬ್ಬಂದಿ ವರ್ಗದವರಿಗೆ ವಿಶೇಷ ಘಟಕ ಯೋಜನೆಯಡಿ ಆಡಳಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ: ಬಿ.ವಿ.ಮುರಳಿಕೃಷ್ಣ, ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ಇವರು “ಭಾರತದ ಅಭಿವೃದ್ಧಿಯಲ್ಲಿ ಸÀರಕು ಮತ್ತು ಸೇವಾ ತೆರಿಗೆಯ ಪಾತ್ರ ” ಈ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸರಕು ಮತ್ತು ಸೇವಾ ತೆರಿಗೆಯ ಮಹತ್ವ, ಅದರ ಅನುಷ್ಠಾನ, ಸಾಧಕ ಬಾಧಕಗಳ ಬಗ್ಗೆ ಸವಿಸ್ತಾರವಾದ ವಿವರವನ್ನು ನೀಡಿದರು. ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಇವರು ಆಡಳಿತದಲ್ಲಿ ಕನ್ನಡ ತತ್ರಾಂಶಗಳ ಬಳಕೆಯ ಬಗ್ಗೆ ಉಪನ್ಯಾಸ ನೀಡಿದರು.
ಡಾ: ಪ್ರಕಾಶ್ ನಡೂರ್, ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ನವ ಭಾರತದ ನಿರ್ಮಾಣದಲ್ಲಿ ಸರಕು ಮತ್ತು ಸೇವಾ ತೆರಿಗೆಯ ಮಹತ್ವ ತಿಳಿಸಿ, ಎಲ್ಲರೂ ಕಡ್ಡಾಯವಾಗಿ ಖರೀದಿ ರಸೀದಿಯನ್ನು ಪಡೆಯಬೇಕೆಂದು ಕರೆಯಿತ್ತರು. ಅಲ್ಲದೇ ಡಾ: ಮುರಳಿಕೃಷ್ಣರವರು ಯಶಸ್ವಿ ಪಶುವೈದ್ಯರಾಗಿ ಪ್ರಾರಂಭಿಕ ಹಂತದಲ್ಲಿ ಬೋಧಕರಾಗಿ ಗುರುತರ ಸೇವೆ ಸಲ್ಲಿಸಿದ್ದು, ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲೂ ಸಹ ಉತ್ತಮ ಸೇವೆ ಸಲ್ಲಿಸಿದ್ದು, ಪ್ರಸಕ್ತ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಡಾ: ಮುರಳಿಕೃಷ್ಣ ಇವರು ಪಶುವೈದ್ಯಕೀಯ ಕ್ಷೇತ್ರ ಮತ್ತು ಸರಕು ತೆರಿಗೆ ಕ್ಷೇತ್ರದಲ್ಲ್ಲಿ ಸಲ್ಲಿಸಿದ ಗುರುತರ ಸೇವೆಗಾಗಿ ಅವರನ್ನು ಸಿಬ್ಬಂದಿ, ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ಗೃಂಥಪಾಲಕ ಶ್ರೀ ಭೂಪಾಲ್ ಕಾಂಬ್ಳೆ, ವಿಶೇಷ ಘಟಕ ಯೋಜನೆಯ ಸಂಯೋಜಕರಾದ ಡಾ: ಅನಂತಕೃಷ್ಣ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಶ್ರೀ ಕುಮಾರ್ ರಾಘವೇಂದ್ರ, ಶ್ರೀಮತಿ ನಂದನ, ಶ್ರೀ ರಮೇಶ್ ನಾಯ್ಕ್, ಶ್ರೀ ದಯಾನಂದ ಮತ್ತು ಡಾ: ಎನ್.ಬಿ.ಶ್ರೀಧರ್ ಇವರು ತರಬೇತಿ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.

error: Content is protected !!