ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಿಂದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯರಿಗಾಗಿ “ಪಶುಗಳಿಗೆ ಲೇಸರ್ ಚಿಕಿತ್ಸೆ ” ಈ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ವಿಶೇಷ ಘಟಕ ಯೋಜನೆಯಡಿ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಪಶುಗಳ ಹಲವು ರೋಗಗಳಲ್ಲಿ ಲೇಸರ್ ಚಿಕಿತ್ಸೆಯ ಬಗ್ಗೆ ಇತ್ತೀಚಿನ ಸಂಶೋಧನೆಗಳು, ಹೊಸ ಆವಿಷ್ಕಾರಗಳ ಬಗ್ಗೆ ತಾಂತ್ರಿಕ ವಿವರಗಳು ಲೇಸರ್ ಚಿಕಿತ್ಸೆ ಹಾಗೂ ಜಾನುವಾರು ಹೃದಯ ಸಮಸ್ಯೆಗಳ ಕುರಿತು ಡಾ: ಎಸ್.ಯತಿರಾಜ್, ವಿಶ್ರಾಂತ್ ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇವರು ನೀಡಿದರು.
ಡಾ: ಪ್ರಕಾಶ್ ನಡೂರ್, ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ಆಧುನಿಕ ಸಂಶೋಧನೆಗಳ ಫಲವನ್ನು ಅಳವಡಿಸಿಕೊಂಡು ಪಶುವೈದ್ಯರು ರೈತರ ರಾಸುಗಳ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕೆಂದರು.
ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿಗಳಾದ ಡಾ: ಸುರೇಶ್ ಪಟೇಲ್, ವಿಶೇಷ ಘಟಕ ಯೋಜನೆಯ ಸಂಯೋಜಕರಾದ ಡಾ: ಅನಂತಕೃಷ್ಣ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಡಾ: ಗಣೇಶ ಉಡುಪ, ಡಾ: ರವಿ ರಾಯದುರ್ಗ್, ಡಾ: ಮುರುಗೆಪ್ಪ, ಡಾ:ರವಿಕುಮಾರ್,ಬಿ.ಪಿ, ಡಾ: ಮೋಹನ್ ಮತ್ತು ಡಾ: ಎನ್.ಬಿ.ಶ್ರೀಧರ್ ಇವರು ಕಾರ್ಯಾಗಾರದ ಆಯೋಜನೆಯಲ್ಲಿ ಸಹಕರಿಸಿದರು.

error: Content is protected !!