ಶಿವಮೊಗ್ಗ, ಜುಲೈ. 17 : ಜಿಲ್ಲೆಯಲ್ಲಿ ಬಿಸಿಲು ಹಾಗೂ ಮಳೆಯ ವಾತಾವರಣದಿಂದಾಗಿ ಅಡಿಕೆ ಬೆಳೆಯಲ್ಲಿ ಕೊಳೆ ಅಥವಾ ಸುಳಿಕೊಳೆ ರೋಗ ಕಂಡು ಬರುವ ಸಾಧ್ಯತೆಗಳಿZ್ಪ್ಮý, ಬೆಳೆಗಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಡಿಕೆ ಕಾಯಿಗಳ ಮೇಲೆ ಕಂದು ಬಣ್ಣದ ಶಿಲೀಂದ್ರಗಳ ಬೆಳವಣಿಗೆ ಆರಂಭದಲ್ಲಿ ಕಂಡುಬಂದು ನಂತರ ಬಿಳಿ ಬಣ್ಣದ ಶಿಲೀಂದ್ರಗಳು ಬೆಳೆದು ಅಡಿಕೆ ಕೊಳೆತು ಉದುರುವುದು, ಗೊಂಚಲುಗಳು ಕಪ್ಪಾಗುವುದು, ಗಿಡದ ಬೆಳವಣಿಗೆ ಕುಂಟಿತಗೊಳ್ಳುವುದು ಕೊಳೆ ರೋಗದ ಲಕ್ಷಣಗಳಾಗಿವೆ.
ರೋಗ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳು; ಶೇಕಡಾ ಒಂದರಷ್ಟು ಬೋರ್ಡೋದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮೆಟಲಾಕ್ಸಿಕಲ್ ಮತ್ತು ಮ್ಯಾಂಕೋಜೆಬ್ 75 ಡಬ್ಲ್ಯೂಪಿ 2ಗ್ರಾಂನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಮಳೆಗಾಲ ಆರಂಭಗೊಳ್ಳುವ ಮೊದಲು ಸಿಂಪಡಿಸಬೇಕು. ಮತ್ತು ಒಂದು ತಿಂಗಳ ನಂತರ ಇದನ್ನು ಪುನಾರಾವರ್ತಿಸಬೇಕು. ಹಾಗೂ ಈ ದ್ರಾವಣವನ್ನು ರೋಗ ಪೀಡಿತ ಎಲೆಯ ಭಾಗಗಳನ್ನು ಕತ್ತರಿಸಿ ಆ ಭಾಗಕ್ಕೆ ಹಾಕಬೇಕು. ಅಥವಾ ಪ್ಲಾಷ್ಟಿಕ್ ಹಾಳೆಗಳಿಂದ ಕಾಯಿಗೊಂಚಲುಗಳನ್ನು ಮುಚ್ಚುವುದರಿಂದ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!