ತರಬೇತಿಯ ಉದ್ಘಾಟನಾ ಸಮಾರಂಭ ರೈತರಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿ
ಬೆಳೆಯಲು ಉತ್ತೇಜಿಸುವ ಕಾರ್ಯಕ್ರಮವನ್ನು ಕೃಷಿ ಸಖಿಯರು ಮಾಡಬೇಕೆಂದು ಡಾ ಗಣೇಶ್ ನಾಯ್ಕ್, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ, ಇವರು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಮತ್ತು ಜಿಲ್ಲಾ
ಪಂಚಾಯಿತಿ ಸಂಜೀವಿನಿ, ಕೆ.ಎಸ್.ಆರ್.ಎಲ್.ಪಿ.ಎಸ್ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು
ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಇವರ ಸಂಯುಕ್ತಾಶ್ರಯದಲ್ಲಿ ಪರಿಸರ ಕೃಷಿ ವಿಧಾನಗಳು ಕುರಿತಂತೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ) 6 ದಿನಗಳ ತರಬೇತಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಹಲವಾರು ಕೃಷಿ ತಾಂತ್ರಿಕತೆಗಳು ಇದ್ದರೂ ಸಹ ರೈತರನ್ನು ಸಮರ್ಪಕವಾಗಿ ತಲುಪಲು ವಿಫಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೃಷಿ ಸಖಿಯರು ತರಬೇತಿಯಲ್ಲಿ ಪಡೆಯುವ ಕೃಷಿ ಜ್ಞಾನವನ್ನು ತಮ್ಮ ಗ್ರಾಮ ಮಟ್ಟದ ರೈತ ಬಾಂಧವರಿಗೆ ತಲುಪಿಸಲು ಸೇತುವೆಯಾಗಿ ಕೆಲಸ ನಿರ್ವಹಿಸ ಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಧರಾದ ಡಾ ಜಿ.ಕೆ.ಗಿರಿಜೇಶ್‍ರವರು ತಿಳಿಸಿದರು.
ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಹನುಮಂತಸ್ವಾಮಿಯವರು ವೈಜ್ಞಾನಿಕ ಕೃಷಿ ಅಳವಡಿಸಿಕೊಂಡಲ್ಲಿ ರೈತರ ಆದಾಯವು ಸುಧಾರಿಸುತ್ತದೆ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್.ಎಲ್.ಆರ್.ಎಂ. ಜಿಲ್ಲಾ ಪಂಚಾಯತ್ ವ್ಯವಸ್ಥಾಪಕರಾದ ಶ್ರೀಯುತ ದೇವರಾಜ್‍ರವರು ಮತನಾಡಿ “ಕೃಷಿ ಸಖಿ” ಕಾರ್ಯಕ್ರಮದ ಮೂಲ ಉದ್ದೇಶದ ಬಗ್ಗೆ ಹಾಗೂ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತರಬೇತಿಯಲ್ಲಿ ಭಾಗವಹಿಸಿದ್ದ “ಕೃಷಿ ಸಖಿ”ಯರಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ವ್ಯವಸ್ಥಾಪಕಾರ ಶ್ರೀಯುತ ಉಮೇಶ್ ಮತ್ತು ಶ್ರೀಯುತ ಯತಿರಾಜ್ ಉಪಸ್ಥಿತರಿದ್ದರು. ಡಾ ಸಹನಾ.ಎಸ್., ವಿಜ್ಞಾನಿ (ಕೃಷಿ ವಿಸ್ತರಣೆ), ಎಲ್ಲಾರಿಗೂ ವಂದಿಸಿದರು, ಡಾ ಅಂಜಲಿ.ಎಂ.ಸಿ., ವಿಜ್ಞಾನಿ (ಮಣ್ಣು ವಿಜ್ಷಾನ) ಕೆ.ವಿ.ಕೆ, ಶಿವಮೊಗ್ಗ ನಿರೂಪಿಸಿದರು.

error: Content is protected !!