ಶಂಕರಘಟ್ಟ, ಅ. 07: ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ, ಕರ್ನಾಟಕ‌ ರಾಜ್ಯ ಖೋ- ಖೋ ಸಂಸ್ಥೆ, ಮತ್ತು‌ ಶಂಕರಘಟ್ಟದ ರೋವರ್ಸ್ ಮತ್ತು ರೇಂಜರ್ಸ್ ಸಂಯುಕ್ತಾಶ್ರಯದಲ್ಲಿ ವಿಶ್ವದ್ಯಾಲಯದ ಪ್ರೊ.‌ಎಸ್. ಪಿ.‌ ಹಿರೇಮಠ್ ಸಭಾಂಗಣದಲ್ಲಿ ಶನಿವಾರ ರಾಜ್ಯಮಟ್ಟದ ಖೋ-ಖೋ ತೀರ್ಪುಗಾರರ ಪರೀಕ್ಷೆ ನಡೆಯಿತು.

ಪರೀಕ್ಷೆಗೆ ಮುಂಚೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಸ್.‌ ವೆಂಕಟೇಶ್ ನೆರವೇರಿಸಿದರು. ವಿವಿಯ ಡಾ.‌ಎನ್.‌ಡಿ.‌ವಿರೂಪಾಕ್ಷ, ಡಾ.‌ರವೀಂದ್ರ ಗೌಡ, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಖೋ- ಖೋ ಕೋಚ್ ನಟರಾಜ್, ರಾಜ್ಯ ಖೋ- ಖೋ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಬಸವರಾಜ್ ಚಿಲಕಾಂತಮಠ, ಡಾ. ಸಿ.‌ ಚಂದ್ರಶೇಖರ್, ಡಾ. ತಂಗಾರಾಣಿ ಉಪಸ್ಥಿತರಿದ್ದರು.

error: Content is protected !!