ಸಾಗರ:ಗುರು ಸಾರ್ವಭೌಮರು ಭೌತಿಕ ದೃಷ್ಟಿಗೆ ಅಗೋಚರಆಗಿದ್ದರೂ ಭಜಕರಿಗೆಕಾಮಧೇನು, ನಮಿಪರಿಗೆಕಲ್ಪವೃಕ್ಷವೆಂದು ಪ್ರಚಲಿತವಾಗಿದೆ. ರಾಯರುಕಲಿಯುಗದಲ್ಲಿತಮ್ಮ ಮಹಿಮೆಯ ಮೂಲಕವೇ ಪ್ರಸಿದ್ಧರಾಗಿದ್ದಾರೆ ಎಂದು ಸಾಗರ ಮಾಧ್ವ ಸಂಘದಅಧ್ಯಕ್ಷಡಾ. ಗುರುರಾಜ್‍ಕಲ್ಲಾಪುರ ಹೇಳಿದರು.
ಸಾಗರ ಮಾಧ್ವ ಸಂಘದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಕೊನೆ ದಿನದಂದು ಶನಿವಾರ ಅನಂತ ಸೇವಾ ಪುರಸ್ಕಾರ ಪ್ರದಾನಿಸಿ ಮಾತನಾಡಿದರು.
ಗುರು ಸಾರ್ವಭೌಮರು ಬೇಡಿದವರಿಗೆ ಬೇಡಿದಂತ ವರಗಳನ್ನು ನೀಡುತ್ತ ಬಂದಿದ್ದಾರೆ.ಗುರುಗಳೆಂದರೆ ಮನಸ್ಸಿಗೆ ಬರುವವರು ಶ್ರೀ ರಾಘವೇಂದ್ರ ಸ್ವಾಮಿಗಳು ರಾಘವೇಂದ್ರ ಸ್ವಾಮಿಗಳು ವೇಣುಗೋಪಾಲ ಎಂಬ ಅಂಕಿತದಲ್ಲಿಗೋವಿಂದನದಯೆಕೋರಿಕೀರ್ತನೆ ರಚಿಸಿದ್ದಾರೆ
ರಾಯರ ಸ್ಮರಣೆಯಿಂದಲೇ ಪ್ರೇರಣೆಗೊಂಡ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಂತಹ ಮಹಾಮಹಿಮರು ಹರಿದಾಸ ಸಾಹಿತ್ಯವನ್ನು ಮತ್ತೆ ಪುನಸ್ಥಾಯಿಗೊಳಿಸುವಲ್ಲಿ ನಿರಂತರವಾಗಿತೊಡಗಿಕೊಂಡರು. ಅವರು ತಮ್ಮ ಹಾಡು, ಸುರಾಭಿ, ಕೀರ್ತನೆಗಳಲ್ಲಿ ಗುರುಗಳನ್ನು ಸ್ತುತಿಸಿದ್ದಾರೆ.ಗುರು ಸಾರ್ವಭೌಮರಆರಾಧಾನಾ ಮಹೋತ್ಸವದೇಶ ವಿದೇಶಗಳಲ್ಲಿ ನಡೆಯುತ್ತಿದೆಎಂದರು.
ಉತ್ತರಾಧಿ ಮಠದ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ದಿವ್ಯಾನುಗ್ರಹದಿ ಸಂಘದಆಶ್ರಯದಲ್ಲಿ ಈ ವರ್ಷದಿಂದ ಸಮಾಜದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕೆ.ಜಿ.ಅನಂತರಾವ್ ಸ್ಮರಣಾರ್ಥಅನಂತ ಸೇವಾ ಪುರಸ್ಕಾರವನ್ನು ನೀಡುತ್ತಿದ್ದೇವೆ. ಪ್ರತಿ ವರ್ಷ ಸಾಗರದಕಲ್ಯಾಣಿಕುಟುಂಬದವರು ನೀಡುತ್ತಿದ್ದು, ಈ ವರ್ಷದಿಂz ಆರಾಧನೆ ಸಂದರ್ಭದಲ್ಲಿ ಬಾಣಸಿಗರು ಮತ್ತು ಪುರೋಹಿತರಿಗೆ ಪ್ರದಾನ ಮಾಡಲಾಗುತ್ತಿದ್ದು, ಮೊದಲ ಪುರಸ್ಕಾರವನ್ನು ಆನವಟ್ಟಿಯ ಬಾಣಸಿಗರಾದ ರಾಘವೇಂದ್ರಆಚಾರ್‍ಅವರಿಗೆ ಪ್ರದಾನ ಮಾಡಿದ್ದೇವೆಎಂದು ಹೇಳಿದರು.
ಮಾಧ್ವ ಸಂಘದ ನಿರ್ದೇಶಕ ಆನಂದಕಲ್ಯಾಣಿ ಮಾತನಾಡಿ, ನಮ್ಮ ಸಮುದಾಯಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವಅರ್ಚಕ ಮತ್ತು ಪಾಚಕ ಸೇವೆ ಮಾಡುವವರನ್ನುಗುರುತಿಸಬೇಕಾದದ್ದು ನಮ್ಮಕರ್ತವ್ಯವಾಗಿದೆ.ಸಮುದಾಯದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ವ್ಯವಸ್ಥಿತವಾಗಿ ಇವರು ನಡೆಸಿಕೊಂಡು ಬರುತ್ತಿದ್ದಾರೆ.ಇಂದು ಪ್ರಶಸ್ತಿ ಸ್ವೀಕರಿಸಿರುವ ಆನವಟ್ಟಿಯರಾಘವೇಂದ್ರಆಚಾರ್‍ಕುಟುಂಬದವರು ಕಳೆದ 50 ವರ್ಷಗಳಿಂದ ಬಾಣಸಿಗರಾಗಿ ಸೇವೆ ಮಾಡುತ್ತಿದ್ದು, ಇವರ ಸೇವೆ ಗುರುತಿಸಿದ್ದೇವೆ. ಗುರುರಾಯರ ಸಂಪೂರ್ಣಅನುಗ್ರಹಅವರಿಗೆದೊರೆಯಲಿ ಎಂದು ಆಶಿಸಿದರು.
ಅನಂತ ಸೇವಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಆನವಟ್ಟಿಯ ಬಾಣಸಿಗ ರಾಘವೇಂದ್ರಆಚಾರ್, ನಾನು ಎಂದಿಗೂ ಪುರಸ್ಕಾರ ನೀರಿಕ್ಷಿಸಿದವನಲ್ಲ. ತಂದೆರಾಮಾಚಾರ್ ನಡೆಸಿಕೊಂಡು ಬಂದ ಸೇವೆಯನ್ನು ನಾನು ಮುಂದುವರೆಸಿದ್ದೇನೆ. ಬಾಣಸಿಗರನ್ನು ಕೂಡ ಸಮಾಜ ಗುರುತಿಸಿ ಆರಾಧನೆ ಸಂದರ್ಭದಲ್ಲಿ ಗೌರವಿಸಿರುವುದು ನನ್ನಜೀವಮಾನದ ಎಂದಿಗೂ ಮರೆಯಲಾಗದಅವೀಸ್ಮರಣೀಯ ದಿನ ಎಂದುಕೊಂಡಿದ್ದೇನೆ. ಇನ್ನಷ್ಟು ಕೆಲಸ ಮಾಡಲುಗುರುರಾಯರಿಂದ ಪ್ರೇರಣೆಗೊಂಡಿದ್ದೇನೆಎಂದರು.
ಸಾಗರ ಮಾಧ್ವ ಸಂಘದಉಪಾಧ್ಯಕ್ಷ ವೆಂಕಟೇಶಕಟ್ಟಿ, ಪ್ರಧಾನ ಕಾರ್ಯದರ್ಶಿ ಬದ್ರೀಶ್, ಶ್ರೀಶಾಚಾರ್, ಸತ್ಯಶೀಲಾ, ವಿದ್ವಾನ್ ಪಿ.ಎಲ್.ಗಜಾನನ ಭಟ್, ಸಹನಾ ಕಲ್ಯಾಣಿ, ಮಂಜುಳಾ, ವೈ.ಮೋಹನ್, ವೇದವ್ಯಾಸಾಚಾರ್, ರಮಾಮಣಿ ಮತ್ತಿತರರು ಉಪಸ್ಥಿತರಿದ್ದರು.ಮೂರು ದಿನಗಳ ಕಾಲ ನಡೆದಆರಾಧನ ಮಹೋತ್ಸವದಲ್ಲಿ ವಿವಿಧಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಾಗರದ ಮಾಧ್ವ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಗುರುರಾಯರಆರಾಧನಾ ಮಹೋತ್ಸವದಲ್ಲಿಅನಂತ ಸೇವಾ ಪುರಸ್ಕಾರವನ್ನುಆನವಟ್ಟಿಯ ಬಾಣಸಿಗ ರಾಘವೇಂದ್ರಆಚಾರ್‍ಅವರಿಗೆ ಪ್ರದಾನ ಮಾಡಲಾಯಿತು.ಮಾಧ್ವ ಸಂಘದಅಧ್ಯಕ್ಷಡಾ.ಗುರುರಾಜಕಲ್ಲಾಪುರ, ಆನಂದಕಲ್ಯಾಣಿ, ಬದ್ರೀಶ್, ವಿದ್ವಾನ್ ಪಿ.ಎಲ್.ಗಜಾನನ ಭಟ್, ಸತ್ಯಶೀಲಾ ಇತರರು ಹಾಜರಿದ್ದರು.