ಶಿವಮೊಗ್ಗ, ಆಗಸ್ಟ್-03 : ಕಾರ್ಮಿಕ ಇಲಾಖೆಯು ಜಿಲ್ಲೆಯಲ್ಲಿನ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಕಾಯ್ದೆ 1961 ಕಲಂ 4(1) ಮತ್ತು (3) ಹಾಗೂನಿಯಮ 3ಮೇರೆಗೆ ನೋಂದಾಯಿಸಿಕೊಳ್ಳುವಂತೆ ಮಾಲೀಕರುಗಳಿಗೆ ಕಾರ್ಮಿಕ ಇಲಾಖೆಯು ಸೂಚನೆ ನೀಡಿದೆ.
ಶಿವಮೊಗ್ಗದಲ್ಲಿ ನೋಂದಣಿಯಾಗದ (ಕಾರ್ಮಿಕರಿರದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಒಳಗೊಂಡಂತೆ) ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ರಾಜ್ಯ ಸರ್ಕಾರದ http://www.ekarmika.karnatak.gov.in/ekarmika/static/home.aspx ತಂತ್ರಾಂಶದಲ್ಲಿ 15 ದಿನಗಳೊಳಗಾಗಿ ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಣಿ ಪತ್ರ ಪಡೆದುಕೊಳ್ಳುವುದು. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.