“ಪ್ರಕೃತಿ ಚನ್ನಾಗಿದ್ದರೆ ಮನುಕುಲ ಚನ್ನಾಗಿರುತ್ತದೆ”- ಜಿ.ವಿಜಯಕುಮಾರ್
ಮನಷ್ಯ ಭೂಮಿಮೇಲೆ ಆರೋಗ್ಯದಿಂದ ಜೀವಿಸಲು ಉತ್ತಮ ಪರಿಸರಬೇಕು. ಪರಿಸರ, ಪ್ರಕೃತಿ ಚನ್ನಾಗಿಲ್ಲದಿದ್ದರೆ ಭೂಮಿ ಮೇಲೆ ಜೀವಿಸುವುದು ತುಂಬಾ ಕಷ್ಟವಾಗುತ್ತದೆ ರಂದು ಮಾಜಿ ಜಿಲ್ಲಾ ಗೌರ್ನರ್ ಜಿ.ವಿಜಯಕುಮಾರ್ ನುಡಿದ ಅವರು, ಕೊಮ್ಮನಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಇಂಟರ್್ಯಾಕ್ಟ್ ಕ್ಲಬ್ ವತಿಯಿಂದಡ ಹಮ್ಮಿ ಕೊಂಡಿದ್ದ ವಿಶ್ವ ಪ್ರಕೃತಿ ಸಂರಕ್ಷಣ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಆಚರಿಸಿದರು.
ಪ್ರಕೃತಿಯಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದನಾವು ಇಂದು ಪ್ರಕೃತಿಯನ್ನು ಎಷ್ಟು ಸಾದ್ಯವೋ ಅಷ್ಟು ಕಲ್ಮಷ ಗೊಳಿಸುತ್ತಿದ್ದೇವೆ ಪ್ರತಿಯೊಬ್ಬರು ಸಸಿಯನ್ನು ನೆಡುವುದರ ಮೂಲಕ ಅವುಗಳ ಪಾಲನೆ ಪೋಷಣೆ ಮಾಡಬೇಕು ಎಂದರು.
ರೋಟರಿ ಮಾಜಿ ಅಧ್ಯಕ್ಷೆ ಸುಮತಿ ಕುಮಾರ್ ಸ್ವಾಮಿ ಮಾತನಾಡುತ್ತಾ ಮರ ಗಿಡ ಪರಿಸರ ಸಂರಕ್ಷಣೆಯಿಂದ ಉತ್ತಮ ಆಮ್ಲಜನಕ ಪಡೆಯುವುದರ ಜೊತೆಗೆ ಆರೋಗ್ಯ ಸಹ ಚನ್ನಾಗಿರುತ್ತದೆ. ಪರಿಸರ ಪ್ರಜ್ಞೆಯನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು ಎಂದರು.
ಮಾಜಿ ಕಾರ್ಯದರ್ಶಿ ಕುಮಾರ ಸ್ವಾಮಿ, ಕಾರ್ಯದರ್ಶಿ ಕಿಶೋರ್, ಶಾಲ ಮಕ್ಕಳು ಉಪಸ್ಥಿತರಿದ್ದರು