ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ಸಹಯೋಗದಲ್ಲಿ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಜುಲೈ 20ಕ್ಕೆ “ ಶಿವಮೊಗ್ಗ ಪ್ರವಾಸೋದ್ಯಮ ಪೂರಕ ಅವಕಾಶಗಳು ” ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಜುಲೈ 20ರ ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ವಿಚಾರ ಸಂಕಿರಣವನ್ನು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಉದ್ಘಾಟಿಸುವರು. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಕೆ.ವೀಣಾ ಉಪನ್ಯಾಸ ನೀಡುವರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಧ್ಯಕ್ಷತೆ ವಹಿಸುವರು.
ಶಿವಮೊಗ್ಗದ ಪ್ರವಾಸೋದ್ಯಮ ವಿಕಾಸ ವಿಷಯ ಕುರಿತು ಅಜಯ್‌ಕುಮಾರ ಶರ್ಮಾ, ಪರಿಸರ ಪ್ರವಾಸೋದ್ಯಮ ಕುರಿತು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಅವಿನ್.ಆರ್, ಗ್ರಾಮೀಣ ಪ್ರವಾಸೋದ್ಯಮ ಕುರಿತು ಪತ್ರಕರ್ತ ರಾಮಚಂದ್ರ ಗುಣಾರಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಗಳು ವಿಷಯ ಕುರಿತು ಸವಿತಾ ಮಾಧವ್ ವಿಶೇಷ ಉಪನ್ಯಾಸ ನೀಡುವರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಪ್ರದೀಪ್ ವಿ.ಯಲಿ, ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಶಶಿರಾಜ್, ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು. ಟ್ಯಾಕ್ಸಿ, ಹೊಟೇಲ್ ಉದ್ಯಮ ನಡೆಸುವರು, ಪ್ರವಾಸಿ ಗೈಡ್ಸ್, ಪ್ರವಾಸೋದ್ಯಮ ಆಸಕ್ತಿ ಇರುವ ಸಾರ್ವಜನಿಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಬಹುದಾಗಿದೆ.

error: Content is protected !!