25-06-2023 ರಂದು ಐಎಂಎ  ಶಿವಮೊಗ್ಗದ ಸುಮಾರು 35 ಸದಸ್ಯರು ಮತ್ತು ಪದಾಧಿಕಾರಿಗಳು ಮಾಚೇನಹಳ್ಳಿಯ  ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ನಿರ್ವಹಿಸುತ್ತಿರುವ  ಬೈಯೋಮೆಡಿಕಲ್ ತ್ಯಾಜ್ಯ ಸೌಲಭ್ಯಕ್ಕೆ  ಭೇಟಿ ನೀಡಿದರು. ಇದು 20 ವರ್ಷಗಳಿಂದ ಯಶಸ್ವಿಯಾಗಿ ಚಾಲನೆಯಲ್ಲಿರುವ ಆಸ್ಪತ್ರೆ ತ್ಯಾಜ್ಯ ವಿಲೇವಾರಿ , ಸಂಸ್ಕರಣೆ,ಪ್ರತ್ಯೇಕತೆ ಮತ್ತು ಚಿಕಿತ್ಸಾ ಸೌಲಭ್ಯದ ಸಂಸ್ಥೆಯಾಗಿದ್ದು ಇಡೀ ದೇಶದಲ್ಲಿ ವೈದ್ಯರೇ ಹುಟ್ಟುಹಾಕಿ ನಡೆಸುತ್ತಿರುವ  ಬೆರಳೆಣಿಕೆಯ ಸಂಸ್ಥೆಗಳಲ್ಲೊಂದಾಗಿದೆ .
ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆಯನ್ನು ಶುಶ್ರುತ ಸಮಿತಿಯ ಅಧ್ಯಕ್ಷರಾದ  ಡಾ. ಪ್ರಶಾಂತ್ ಇಸ್ಲೂರ್, ಕಾರ್ಯದರ್ಶಿ ಡಾ. ಗಿರೀಶ್ ಮತ್ತು ಡಾ. ವಿನಿತ್ ಆನಂದ್ ಅವರು ವಿವರವಾಗಿ ಎಲ್ಲ ಐಎಂಎ ಸದಸ್ಯರಿಗೆ ತಿಳಿಸಿದರು .
ತ್ಯಾಜ್ಯವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಣೆ ಮತ್ತು ಬೇಕಾದಲ್ಲಿ ಸಂಸ್ಕರಿಸಿದ ನೀರು ಹಾಗು ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆಯು ಬಹಳ ಚೆನ್ನಾಗಿ ಮೂಡಿಬರುತ್ತಿದ್ದು , ಸದಸ್ಯರಿಂದ ಮೆಚ್ಚುಗೆ ಪಡೆಯಿತು.
ಈ ಉಪಯುಕ್ತ ಚಟುವಟಿಕೆಯಲ್ಲಿ ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ , ಕಾರ್ಯದರ್ಶಿ ಡಾ . ರಕ್ಷಾ ರಾವ್ , ಉಪಾಧ್ಯಕ್ಷರಾದ ಡಾ.ರವೀಶ್ ,ಡಾ . ಶಂಭುಲಿಂಗ ಹಾಗು ಹಿರಿಯ ಕಿರಿಯ ಸದಸ್ಯರು ಭಾಗಿಯಾಗಿದ್ದರು .

error: Content is protected !!