ಶಿವಮೊಗ್ಗ: “ಸ್ವೇದ ” ಮಹಿಳಾ ಉದ್ಯಮಿಗಳ ಸಂಘದಿಂದ ಫ್ಲಿಪ್ ಕಾರ್ಟ್ ಆನ್ ಬೋರ್ಡಿಂಗ್ ಕುರಿತು ಜುಲೈ 13ಕ್ಕೆ ಶಿವಮೊಗ್ಗ ನಗರದ ಮಥುರಾ ಪಾರಾಡೈಸ್‌ನಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ. ಮಹಿಳೆಯರು ಅನೇಕ ಆಹಾರ ಪದಾರ್ಥ, ಕರಕುಶಲ ವಸ್ತುಗಳನ್ನು ಉತ್ಪಾದಿಸುತ್ತಿದ್ದರೂ ಮಾರುಕಟ್ಟೆ ಸೌಲಭ್ಯದ ಕೊರತೆ ಹಾಗೂ ಮಾರ್ಗದರ್ಶನದ ಕೊರತೆಯಿಂದ ಹೆಚ್ಚಿನ ಪ್ರಗತಿಯನ್ನು ಕಾಣಲಾಗಿಲ್ಲ. ಗ್ರಾಹಕರ ನಡುವಿನ ಸಂಪರ್ಕ ಸಾಧ್ಯವಾಗದೆ ವಿಶಿಷ್ಟ ಉತ್ಪಾದನೆಗಳು ಮಾರುಕಟ್ಟೆಯನ್ನು ತಲುಪಿಲ್ಲ.
ವಿಶೇಷವಾಗಿ ಎರಡನೇ ಹಾಗೂ ಮೂರನೇ ವರ್ಗದ ನಗರಗಳಲ್ಲಿ ಮಾರುಕಟ್ಟೆಯ ಜ್ಞಾನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಹೆಚ್ಚಾಗಿದೆ. ಗ್ರಾಹಕರ ಖರೀದಿ ವಿಧಾನಗಳು ಬದಲಾಗಿದೆ. ಆನ್‌ಲೈನ್‌ ಮಾರ್ಕೆಟಿಂಗ್, ಡಿಜಿಟಲ್ ಮಾರ್ಕೆಟಿಂಗ್, ಈ ಕಾಮರ್ಸ್ನ ನೂತನ ಮಾರುಕಟ್ಟೆ ವಿಧಾನದಿಂದ ಹಳ್ಳಿಯಲ್ಲಿ ಉತ್ಪಾದನೆ ಮಾಡುವ ಮಹಿಳೆ ಕೂಡ ತನ್ನ ಉತ್ಪನ್ನವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಹಾಗೂ ಮಾರಾಟ ಮಾಡುವ ಅವಕಾಶ ಕಲ್ಪಿತವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಗಳಿಗೆ ನೂತನ ವಿಧಾನದ ಬಗ್ಗೆ ಹೆಚ್ಚಿನ ತರಬೇತಿ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ.
“ಸ್ವೇದ” ಮಹಿಳಾ ಉದ್ಯಮಿಗಳ ಸಂಘ ಮಹಿಳಾ ಉದ್ಯಮಿಗಳಿಗಾಗಿ ಫ್ಲಿಪ್ಕಾರ್ಟ್ ಮತ್ತು ವಾಲ್ ಮಾರ್ಕ್ ಮಾರುಕಟ್ಟೆ ತಾಣದಲ್ಲಿ ಉತ್ಪಾದನೆಯನ್ನು ಆನ್ ಬೋರ್ಡ್ ಮಾಡಲು ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜುಲೈ 13ರಂದು ಶಿವಮೊಗ್ಗ ನಗರದ ಹೋಟೆಲ್ ಮಥುರಾ ಪ್ಯಾರಡೈಸ್‌ನಲ್ಲಿ ನಡೆಯುವ ತರಬೇತಿ ಕಾರ್ಯಗಾರದಲ್ಲಿ ಫ್ಲಿಪ್ಕಾರ್ಟ್ ನಿಂದ ತಂತ್ರಜ್ಞರು ತರಬೇತಿ ನೀಡಲಿದ್ದಾರೆ 31 ವಿಧಾನದ ಈ ಲರ್ನಿಂಗ್ ಕೋರ್ಸ್ ಗಳನ್ನು ಮಹಿಳಾ ಉದ್ಯಮಿಗಳು ಮೊಬೈಲ್ ಆಪ್‌ನಲ್ಲಿಯೇ ಕಲಿಯಲು ಬೇಕಾದ ಮಾಹಿತಿಯನ್ನು ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.
ಆಸಕ್ತಿಯುಳ್ಳ ಮಹಿಳಾ ಉದ್ಯಮಿಗಳು ಜೂನ್ 30 ರೊಳಗೆ ಹೆಸರನ್ನು ಕೆಳಕಂಡ ಸಂಖ್ಯೆಗಳಲ್ಲಿ ನೋಂದಾಯಿಸಬಹುದು ಎಂದು ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ತಿಳಿಸಿದ್ದಾರೆ. 9740760061, 9243314217, 9980181488 ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಸಬಹುದಾಗಿದೆ.

error: Content is protected !!