ಪ್ರಪಂಚದ ಎಲ್ಲಾ ರಾಷ್ಟ್ರಗಳು ಯೋಗವನ್ನು ಒಪ್ಪುತ್ತೇವೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸ್ಥಿರವಾಗಿರುತ್ತದೆ. ಸಿವಿ ರುದ್ರಾರಾಧ್ಯ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು
ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿರುವ ಜೊತೆಗೆ ಖಿನ್ನತೆ ದೂರವಾಗುತ್ತದೆ ಯಾವುದೇ ಖರ್ಚಿಲ್ಲದ ಹಾಗೆ ನಮ್ಮ ದೇಹದಲ್ಲಿ ಇರುವ ಅನೇಕ ಕಾಯಿಲೆಗಳನ್ನು ಯೋಗ ಹಾಗೂ ಪ್ರಾಣಾಯಾಮದಿಂದ ಗುಣಪಡಿಸಿಕೊಳ್ಳಬಹುದು ಇಂದು ಯೋಗವನ್ನು ಪ್ರಪಂಚದ ಎಲ್ಲಾ ರಾಷ್ಟ್ರಗಳು ಒಪ್ಪುತ್ತಿವೆ ಯೋಗ ಮನಸ್ಸನ್ನು ಬೆಸೆಯೋದರ ಜೊತೆಗೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ ಯೋಗ ಮಾಡುವುದರಿಂದ ಪ್ರತಿನಿತ್ಯ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿವಿ ರುದ್ರಾರಾಧ್ಯರು ಅಭಿಮತ ವ್ಯಕ್ತಪಡಿಸಿದರು ಅವರಿಂದು ಬೆಳಿಗ್ಗೆ ಕಲ್ಲಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಯೋಗ ಅಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಇಂದು ಶಿವಮೊಗ್ಗ ನಗರದಲ್ಲಿ 32 ಕೇಂದ್ರಗಳಲ್ಲಿ ಉಚಿತವಾಗಿ ಯೋಗ ಪ್ರಾಣಾಯಾಮ ಧ್ಯಾನ ತರಗತಿಗಳನ್ನು ನಡೆಸುತ್ತಿದ್ದು ಸಾರ್ವಜನಿಕರ ಸಹಕಾರ ದಿಂದ ನಡೆಯುತ್ತಿದೆ ಎಂದು ನೋಡಿದರು ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿಗಳಾದ ಎಸ್, ಜ್ಯೋತಿ ಪ್ರಕಾಶ್ ಅವರು ಮಾತನಾಡುತ್ತಾ ಇಂದು ನಮ್ಮ ಎಲ್ಲರಿಗೂ ಅಗತ್ಯವಾಗಿ ಯೋಗ ಬೇಕೇ ಬೇಕಾಗಿದೆ ಶಿವಗಂಗಾ ಯೋಗ ಕೇಂದ್ರವು ನಗರದ ವಿವಿಧ ಬಡಾವಣೆಗಳಲ್ಲಿ ನಡೆಸುತ್ತಿರುವ ತರಗತಿಗಳಿಂದ ಸಾಕಷ್ಟು ಜನರು ಆರೋಗ್ಯವಂತರಾಗಿದ್ದಾರೆ ಯೋಗ ಪ್ರಾಣಾಯಾಮ ಧ್ಯಾನ ನಮ್ಮ ದೇಹ ಮನಸ್ಸನ್ನು ಸದಾ ಉಲ್ಲಾ ದಿಂದ ಇಡುತ್ತದೆ ಬಾಲ್ಯದಲ್ಲೇ ಮಕ್ಕಳಿಗೆ ಯೋಗಭ್ಯಾಸದ ಶಿಕ್ಷಣ ಕೊಡಬೇಕು ಭಾರತದಲ್ಲಿ ಹುಟ್ಟಿದ ಯೋಗಭ್ಯಾಸ ವಿದೇಶದಲ್ಲಿ ಹೆಚ್ಚು ಪ್ರಭಾವ ಬೀರಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಈ ನಿಟ್ಟಿನಲ್ಲಿ ಯಾವುದೇ ವಯಸ್ಸಿನ ಇತಿಮಿತಿ ಇಲ್ಲದೆ ಎಲ್ಲರೂ ಯೋಗ ಮಾಡಿ ಸದಾ ಆರೋಗ್ಯದಿಂದ ಇರಿ ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ನಗರದ ಎಲ್ಲಾ ಶಾಖೆಗಳ ಯೋಗ ಶಿಕ್ಷಕರು ಹಾಗೂ ಶಿಬಿರಾರ್ಥಿಗಳು ಯೋಗ ಪ್ರಾಣಾಯಾಮ ಧ್ಯಾನ ಮಾಡುವುದರ ಜೊತೆಗೆ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು ಸಮಾರಂಭದಲ್ಲಿ 32 ಶಾಖೆಯ ಹಾಗೂ 600ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡಿದ್ದರು ವೇದಿಕೆಯಲ್ಲಿ ಕಾಟನ್ ಜಗದೀಶ್ ಹರೀಶ್ ಜಿ ವಿಜಯಕುಮಾರ್ ವಿಜಯ ಕೃಷ್ಣ ಭಾಗ್ಯ ವೀಣಾ ನರಸುಜಿ ರಾವ್ ಮಂಜುಳಾ ಶೀಲಾ ಉಪಸ್ಥಿತರಿದ್ದರು