ಎಲ್.ಇ.ಡಿ. ಲೈಟ್‍ಗಳನ್ನು ಬಳಸಿ ಪರಿಸರ ಉಳಿಸಿ ಇತ್ತೀಚಿನ ದಿನಮಾನದಲ್ಲಿ ತಂತ್ರಜ್ಞಾನ ಮುಂದುವರೆದಂತೆ ಆಧುನಿಕತೆ ಹೆಚ್ಚಾಗುತ್ತಿದ್ದು ಹೊಸ ಹೊಸ ಆವೀಷ್ಕಾರಗಳು ಉದಯವಾಗುತ್ತಿವೆ ಈ ನಿಟ್ಟಿನಲ್ಲಿ ಪರಿಸರ ಸ್ನೇಹ ಹಾಗೂ ಮಿತಮಯವಾಗಿ ಮತ್ತು ಕಡಿಮೆ ವಿದ್ಯುತ್ ಪಡೆದು ಹೆಚ್ಚು ಬೆಳಕು ಕೊಡುವ ಎಲ್.ಇ.ಡಿ ಲೈಟ್‍ಗಳನ್ನು ಬಳಸಿದರೆ ಪರಿಸರವನ್ನು ಉಳಿಸುವಲ್ಲಿ ಸ್ವಲ್ಪಮಟ್ಟಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಡಿ.ಎಸ್.ಅರುಣ್‍ರವರು ನುಡಿದರು. ಅವರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಎನರ್ಜಿ ಎಫೀಸಿಯಂಟ್ ವತಿಯಿಂದ ಎಲ್.ಇ.ಡಿ. ಲೈಟ್‍ಗಳ ಬಳಕೆ ಹಾಗೂ ಕಾರ್ಯಕ್ಷಮತೆ ಬಗ್ಗೆ ಹಾಗೂ ಎಲ್.ಇ.ಡಿ. ಲೈಟ್‍ಗಳನ್ನು ಲಾಂಚ್ ಮಾಡುವ ಕಾರ್ಯಕ್ರಮದ ಉದ್ಘಾಟಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ಸಂಶೋಧನೆಗಳ ಪ್ರಕಾರ ಎಲ್.ಇ.ಡಿ. ಲೈಟ್‍ಗಳು ದೀರ್ಘಕಾಲ ಬಾಳಿಕೆ ಬರುವುದರ ಜೊತೆಗೆ ಸುಮಾರು 50 ಸಾವಿರ ಗಂಟೆಗಳ ಕಾಲ ಬೆಳಗುವ ಶಕ್ತಿಯನ್ನು ಹೊಂದಿವೆ ಹಾಗೂ ಹಣದ ಉಳಿತಾಯವು ಕೂಡ ಆಗುತ್ತದೆ. ಈ ನಿಟ್ಟಿನಲ್ಲಿ ನಾವು ನೀವೇಲ್ಲರೂ ಸಾಧ್ಯವಾದಷ್ಟು ಎಲ್.ಇ.ಡಿ. ಲೈಟ್‍ಗಳನ್ನು ಬಳಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜೆ.ಆರ್.ವಾಸುದೇವ್, ಕಾರ್ಯದರ್ಶಿ ಗೋಪಿನಾಥ್, ವಿತರಕರಾದ ರತನ್‍ಕುಮಾರ್ ಗುಬ್ಬಿ, ಯೋಗೇಶ್, ಜೆ.ಎನ್.ಎನ್.ಸಿ. ಕಾಲೇಜಿನ ಡಾ|| ಶ್ರೀಪತಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!