ಶಿವಮೊಗ್ಗ, ಜೂನ್ 19, : ಆಯುಷ್ ಇಲಾಖೆಯು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನ ಆಸ್ಪತ್ರೆ ಹಾಗೂ ಮಾಚೇನಹಳ್ಳಿ ಕೆ.ಎಸ್.ಆರ್.ಪಿ.8ನೇ ಬೆಟಾಲಿಯನ್ರವರುಗಳ ಸಹಯೋಗದೊಂದಿಗೆ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ.8ನೇ ಬೆಟಾಲಿಯನ್ ಸ್ಥಳದಲ್ಲಿ ಜೂನ್ 21 ರಂದು ಬೆಳಗ್ಗೆ 7-00 ರಿಂದ 8.00 ರ ವರೆಗೆ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿವಿಧ ಯೋಗಸಂಸ್ಥೆಯ ಯೋಗಪಟುಗಳು, ಶಾಲಾ/ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಎ.ಎಸ್.ಪುಷ್ಪ ಪ್ರಕಟಣೆಯಲ್ಲಿ ಕೋರಿರುತ್ತಾರೆ.