2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಇಂದು ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಜಾವಳ್ಳಿಯಲ್ಲಿ ನಡೆಯಿತು.

https://chat.whatsapp.com/CgEr6sCOoOzInoK9DNcvD7

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ( ನಗರ) ದ ಜನಪ್ರಿಯ ಶಾಸಕರಾದ ಶ್ರೀ ಎಸ್.ಎನ್ ಚೆನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ ಮಕ್ಕಳ ಭವಿಷ್ಯತ್ತಿನ ಅವಶ್ಯಕತೆ ಅರಿತು ಇಂದಿನ ಶಾಲೆಗಳು ಕಾರ್ಯಕ್ರಮ ರೂಪಿಸಬೇಕು. ಸ್ವಾವಲಂಬನೆ, ರಾಷ್ಟ್ರಭಕ್ತಿ, ದೇಶಕಟ್ಟುವ ಕಾರ್ಯವನ್ನು ಜ್ಞಾನದೀಪ ಶಾಲೆ ಮಾಡುತ್ತಿದೆ. ಜ್ಞಾನ ಮತ್ತು ಕೌಶಲ ಎರಡೂ ಮಕ್ಕಳ ಬದುಕಿನಲ್ಲಿ ನಾಯಕತ್ವಗುಣಗಳನ್ನು ಬೆಳೆಸಲು ಅತ್ಯಂತ ಸಹಕಾರಿಯಾಗುತ್ತವೆ. ಪ್ರತಿಭೆಗಳ ಸಾಗರವಾದ ಜ್ಞಾನದೀಪ ಶಾಲೆ ಬೆಳ್ಳಿ ಹಬ್ಬವನ್ನು ಈ ವರ್ಷ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಶಾಲಾ ವಿದ್ಯಾರ್ಥಿ ಸಂಸತ್ತು ಮಾಡಿರುವುದು ಶ್ಲಾಘನೀಯ.” ಎಂದರು.


ಈ ಕಾರ್ಯಕ್ರಮಕ್ಕೆ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ( ಗ್ರಾಮೀಣ) ದ ಜನಪ್ರಿಯ ಶಾಸಕಿಯರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ ಅವರು ಶಾಲಾ ವಿದ್ಯಾರ್ಥಿ ಸಂಸತ್ ಗೆ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿ ಮಾತನಾಡುತ್ತಾ “ ಇಂದಿನ ದಿನಗಳಲ್ಲಿ ಗೌರವ ಭಾವನೆ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಅದಕ್ಕೆ ಪೂರಕವಾಗಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಉತ್ತಮವಾಗಬೇಕು. ಹಾಗೆ ಶಿಕ್ಷಕgಲ್ಲಿÀ ನಿಸ್ವಾರ್ಥ ಸೇವಾ ಮನೋಭಾವನೆ ಇರಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಹಾಗೂ ನೀತಿಕಥೆಗಳ ಮೂಲಕ ಮೌಲ್ಯಗಳನ್ನು ಬೆಳೆಸಬೇಕು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶ್ರೀಕಾಂತ ಎಮ್.ಹೆಗ್ಡೆ ಅವರು ಮಾತನಾಡುತ್ತಾ “ ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಸಹಭಾಗಿತ್ವದ ಕಲಿಕೆ ಅತ್ಯಂತ ಮುಖ್ಯವಾದ್ದರಿಂದ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಶ್ರೇಷ್ಠ ಸಾಧನೆ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಹಾಗೂ ಶಾಲೆಯ ವಿವಿಧ ಗುಂಪುಗಳ ನಾಯಕ-ಉಪನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಅಧ್ಯಕ್ಷರಾದ ಶ್ರೀ ತಲವಾನೆ ಪ್ರಕಾಶ್ ಅವರು 2023-24 ನೇ ಸಾಲಿನ ಪಠ್ಯ -ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ- ಮಕ್ಕಳು ಶಾಲೆಯು ಬೆಳ್ಳಿ ಹಬ್ಬದ ವರ್ಷದಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮ ಪಡಬೇಕು. ಆ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಶಾಲೆಗೆ ಕೀರ್ತಿ ತರಬೇಕು ಎಂದರು.
ಕಾರ್ಯದರ್ಶಿಗಳಾದ ಬಿ.ಎಲ್ ನೀಲಕಂಠಮೂರ್ತಿ, ಉಪಸ್ಥಿತರಿದ್ದರು ಉಪಪ್ರಾಚಾರ್ಯರಾದ ರೆಜಿ ಜೋಸೇಫ್ ಸ್ವಾಗತಿಸಿದರು ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿಕೃಷ್ಣಪ್ರಸಾದ್ ವಂದಿಸಿದರು ಉಪಸ್ಥಿತರಿದ್ದರು.

error: Content is protected !!