ಒತ್ತಡದ ಜೀವನ ಶೈಲಿಯಲ್ಲಿ ಆರೋಗ್ಯದ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸುವುದು ಅತ್ಯಂತ ಮುಖ್ಯ ಎಂದು ಡಿವೈಎಸ್ಪಿ ಹೇಳಿದರು.
ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ನಾಗೇಂದ್ರ ಮಾತನಾಡಿ, ಸಾರ್ವಜನಿಕರು ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಜಾಗೃತಿ ಮೂಡುತ್ತದೆ ಎಂದರು.
ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯ ಎಂಡಿ ಡಾ. ಪ್ರೀತಂ ಬಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಡಯಾಬಿಟಿಸ್ ರೋಗಿಗಳಿಗೆ ಉಪಯುಕ್ತ ಆಗುವ ವಿಶೇಷ ಆಹಾರ ಕಿಟ್ ಸಿದ್ಧಪಡಿಸಿದ್ದು, 500 ರೂ.ಗೆ ದೊರೆಯಲಿದೆ. 300 ರೂ. ವಾರ್ಷಿಕ ಹೆಲ್ತ್ ಕಾರ್ಡ್ ಮಾಡಿಸುವುದರಿಂದ ಸಮಾಲೋಚನೆ ಸಂದರ್ಭಗಳಲ್ಲಿ ಶೇ. 50 ರೀಯಾಯಿತಿ ಸಿಗಲಿದೆ ಎಂದು ಹೇಳಿದರು.
ಮಣಿಪಾಲ್ ಆಸ್ಪತ್ರೆ ಬೆಂಗಳೂರು ವಾಸ್ಕ್ಯುಲರ್ ಸರ್ಜನ್ ಡಾ. ರಾಹುಲ್ ಎನ್.ಎಸ್. ಪ್ರತಿ ತಿಂಗಳ ಒಂದು ದಿನ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಣಿಪಾಲ್ ಆಸ್ಪತ್ರೆ ಬೆಂಗಳೂರು ವಾಸ್ಕ್ಯುಲರ್ ಸರ್ಜನ್ ಡಾ. ರಾಹುಲ್ ಎನ್.ಎಸ್. ಹಾಗೂ ಡಾ. ಪಲ್ಲವಿ ಆರ್.ಬಿ. ಉಪಸ್ಥಿತರಿದ್ದರು.

error: Content is protected !!