ಶಿವಮೊಗ್ಗ: ಜೂನ್ 10 ಮತ್ತು 11ರಂದು ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ರೋಟರಿ ಅಂತರರಾಷ್ಟ್ರೀಯ ಜಿಲ್ಲಾ 3182 ಜಿಲ್ಲಾ ಸಮಾವೇಶ ಹಾಗೂ ತರಬೇತಿ ಕಾರ್ಯಕ್ರಮ “ಜ್ಞಾನ ಸಹ್ಯಾದ್ರಿ 2023” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರೋಟರಿ ಜಿಲ್ಲೆ 3182 ರೋಟರಿ ಕ್ಲಬ್ಗಳಿಗೆ ಆಯ್ಕೆಯಾದ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ರೋಟರಿ ಕ್ಲಬ್ ನಿರ್ದೇಶಕರಿಗೆ ವರ್ಷದ ರೋಟರಿ ಮಾಹಿತಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪ್ರಾಜೆಕ್ಟ್ ಗಳ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು. 500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುತ್ತಿದ್ದಾರೆ. ಶಿವಮೊಗ್ಗ, ಹಾಸನ, ಚಿಕ್ಕಮಂಗಳೂರು ಮತ್ತು ಉಡುಪಿಯಿಂದ ಆಗಮಿಸುತ್ತಿದ್ದಾರೆ.
ಟಿಆರ್ ಎಫ್ ಮತ್ತು ಗ್ರ್ಯಾಂಟ್ ಮ್ಯಾನೇಜ್ ಮೆಂಟ್ ಕಾರ್ಯಕ್ರಮವನ್ನು ಬೆಳಗ್ಗೆ 9ಕ್ಕೆ ಪಿಡಿಜಿ ಮಂಜುನಾಥ ಶೆಟ್ಟಿ ಉದ್ಘಾಟಿಸುವರು. ಸಂಜೆ 4.30ಕ್ಕೆ ಜಿಲ್ಲಾ ತರಬೇತಿ ಸೆಮಿನಾರ್ ಕಾರ್ಯಕ್ರಮವನ್ನು ರೋಟರಿ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ರಾಜು ಸುಬ್ರಹ್ಮಣ್ಯಂ ಉದ್ಘಾಟಿಸುವರು. ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಅಧ್ಯಕ್ಷತೆ ವಹಿಸುವರು.
ಬಿ ಸಿ ಗೀತಾ, ಅಭಿನಂದನ್ ಶೆಟ್ಟಿ, ಡಾ. ನಾರಾಯಣ, ಜಿ ಎನ್ ಪ್ರಕಾಶ್.ದೇವಾನಂದ್, ಪಾಲಾಕ್ಷ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಹಾಯಕ ಗವರ್ನರ್ ರವಿ ಕೊಟೋಜಿ, ಚುಡಾಮಣಿ ಪವಾರ್ , ಧರ್ಮೇಂದ್ರ ಸಿಂಗ್, ಶಿವಮೊಗ್ಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಜೆಪಿ ಚಂದ್ರು , ವಿಜಯ್ ಕುಮಾರ್ ಜಿ, ವಸಂತ್ ಹೋಬಳಿದಾರ್, ಮಂಜುನಾಥ್ ಕದಂ, ಅರುಣ್ ದೀಕ್ಷಿತ್ ಹಾಗೂ ಇತರೆ ಎಲ್ಲಾ ಸದಸ್ಯರು ಉಪಸ್ಥಿತರಿರುತ್ತಾರೆ.

error: Content is protected !!