ಬ್ರೈನ್ ಟ್ಯೊಮರ್ – ಮೆದುಳಿನ ಗೆಡ್ಡೆಯ ಬಗ್ಗೆ ವಿಶೇಷ ಮಾಹಿತಿ
ಶಿವಮೊಗ್ಗ ಜೂನ್ 8 ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 8 ರಂದು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನಾಗಿ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ನರರೋಗ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ತಜ್ಞರುಗಳಾದ ಡಾ. ರೂಪ ಕೆ ಜಿ, ಡಾ. ಅನಿಲ್ ಕುಮಾರ್ ಎಂ ಎಸ್ ಡಾ. ಪ್ರಸನ್ನ ಕೆ ಎಲ್ ಇವರುಗಳು ಬ್ರೈನ್ ಟ್ಯೂಮರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರೆ
ಮೆದುಳಿನ ಕಣಗಳು ಅಗತ್ಯಕ್ಕಿಂತ ಮತ್ತು ಮಿತಿ ಮೀರಿ ಬೆಳೆದು ಗೆಡ್ಡೆ ಆಕಾರ ಹೊಂದುತ್ತದೆ. ಈ ಗೆಡ್ಡೆಗಳು ಸಾಮನ್ಯವಾದ ಗೆಡ್ಡೆ ಆಗಿರಬಹುದು ಅಥವಾ ಕ್ಯಾನ್ಸರ ಸ್ವರೂಪ ಹೊಂದಬಹುದು.
ಭಾರತದಲ್ಲಿ ಪ್ರತೀ ವರ್ಷ ಸುಮಾರು ಐದು ಸಾವಿರ ಜನರಲ್ಲಿ ಒಬ್ಬರಿಗೆ ಮೆದುಳಿನ ಗಡ್ಡೆ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಇದರ ಅರಿವು ಸಾಮಾನ್ಯ ಜನರಿಗೆ ತುಂಬಾ ಕಡಿಮೆ. ಮೆದುಳಿನ ಕಣಗಳು ಅಸಹಜವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಮತ್ತು ಮಿತಿ ಮೀರಿ ಬೆಳೆದಾಗ ಗಡ್ಡೆ ಆಕಾರ ಹೊಂದುತ್ತದೆ.
ಬ್ರೈನ್ ಟ್ಯೊಮರ್ ವಿದಗಳು
ಗೆಡ್ಡೆಗಳು ಎಷ್ಟು ವೇಗವಾಗಿ ಬೆಳೆಯುತ್ತದೆ ಮತ್ತು ಎಲ್ಲಿ ಹರಡುತ್ತದೆ ಎಂಬ ಅಂಶಗಳ ಮೇಲೆ ಮೆದುಳಿನ ಗೆಡ್ಡೆಗಳನ್ನು 1 ರಿಂದ 4 ವರ್ಗಗಳಾಗಿ ವಿಂಗಡಿಸಬಹುದು.
1) ಸೌಮ್ಯ ಗೆಡ್ಡೆಗಳು (ಮಾರಣಾಂತಿಕವಲ್ಲದ)
ಈ ಗೆಡ್ಡೆಗಳು ಒದರಿಂದ ಎರಡು ವರ್ಗದಲ್ಲಿ (ಗ್ರೇಡ್ 1 ಮತ್ತು 2) ಇರುತ್ತವೆ. ಇವು ಮೆದುಳಿಗೆ ಸೀಮಿತವಾಗಿರುತ್ತವೆ. ಮತ್ತು ವೇಗವಾಗಿ ಬೆಳೆಯುವುದಿಲ್ಲಾ ಮತ್ತು ಬೇರೆ ಕಡೆಗೆ ಹರಡುವುದಿಲ್ಲಾ.
2) ಮಾರಕ ಗೆಡ್ಡೆಗಳು (ಹೆಚ್ಚು ತೊಂದರೆಯುಳ್ಳ) –
ಇವು 3 ರಿಂದ 4 ವರ್ಗಗಳಲ್ಲಿ (ಗ್ರೇಡ್ 3 ಮತ್ತು 4) ಇದ್ದು ಅತೀ ವೇಗದಲ್ಲಿ ಹರಡುವ ಸಂಭವ ಹೆಚ್ಚಾಗಿರುತ್ತದೆ. ಇವುಗಳು ಸರ್ಜರಿಯ ನಂತರ ಮತ್ತೆ ಮರುಕಳಿಸುವ ಸಾದ್ಯತೆ ಹೆಚ್ಚು.
ಬ್ರೈನ್ ಟ್ಯೊಮರ್‍ನ ಲಕ್ಷಣಗಳು
ಗೆಡ್ಡೆಯು ಮೆದುಳಿನ ಯಾವ ಭಾಗದಲ್ಲಿದೆ ಎಂಬುದರ ಮೇಲೆ ಹಲವಾರು ಲಕ್ಷಣಗಳು ಕಂಡು ಬರಬಹುದು.
ತೀವ್ರವಾದ ಹಾಗು ನಿರಂತರ ತಲೆನೋವು
ಮೂರ್ಛೆ (ಫಿಟ್ಸ) ಉಂಟಾಗುವುದು
ತಲೆ ಸುತ್ತುವಿಕೆ, ವಾಕರಿಕೆ ಅಥವಾ ವಾಂತಿಯಾಗುವುದು
ದುರ್ಬಲತೆ ಹಾಗು ಕ್ರಮೇಣ ಅಂಗಗಳ ಶಕ್ತಿ ಕುಗ್ಗುವುದು
ದೃಷ್ಠಿ ದೋಷಗಳು ಮಾನಸಿಕ ಅಥವಾ ನಡುವಳಿಕೆಯಲ್ಲಿ ಬದಲಾವಣೆ

ಕೆಲವೊಮ್ಮೆ ಈ ಯಾವುದೇ ರೋಗ ಲಕ್ಷಣಗಳು ಗೋಚರಿಸಬಹುದು ಅಥವಾ ನಿದಾನವಾಗಿ ಗೋಚರಿಸಬಹುದು. ಆದರೆ ಈ ಮೇಲಿನ ಯಾವುದೇ ರೋಗ ಲಕ್ಷಣಗಳನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಭೇಟಿಯಾಗಿ. ಈ ಲಕ್ಷಣಗಳಿರುವವರಿಗೆಲ್ಲಾ ಗೆಡ್ಡೆ ಇದೆ ಎಂದಲ್ಲಾ ಆದರೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ್ತ.
ಯಾರಲ್ಲಿ ಬರುವ ಸಾದ್ಯತೆ ಇದೆ?
ಗೆಡ್ಡೆಗಳು ಯಾವುದೇ ವಯಸ್ಸಿನಲ್ಲಿ ಬರಬಹುದು ಆದರೂ ಹೆಚ್ಚಾಗಿ ವಯಸ್ಕರಲ್ಲಿ ಕಂಡು ಬರುತ್ತದೆ
ಹಿಂದೆ ಕ್ಯಾನ್ಸರ್ ಹೊಂದಿದ್ದ ಮಕ್ಕಳಲ್ಲಿ ನಂತರದ ಜೀವನದಲ್ಲಿ ಬ್ರೈನ್ ಟ್ಯೊಮರ್ ಸಾದ್ಯತೆ ಹೆಚ್ಚು. ಲ್ಯುಕೇಮಿಯಾ ಹಾಗು ಹೊಂದಿರುವ ವಯಸ್ಕರಲ್ಲಿ ಅಪಾಯ ಹೆಚ್ಚು
ಈ ಮೊದಲೇ ರೇಡಿಯೋ ಥೆರಪಿಗೆ ಒಳಪಟ್ಟಿದ್ದಲ್ಲಿ ಅಂತವರಲ್ಲಿ ಗೆಡ್ಡೆ ಕಾಣಿಸಿಕೊಳ್ಳುವ ಸಾದ್ಯತೆ ಹೆಚ್ಚು.
ಕೆಲವು ಗೆಡ್ಡೆಗಳು ವಂಶ ಪಾರಂಪರ್ಯವಾಗಿ ಬರುವ ಸಾದ್ಯತೆ ಇರುತ್ತದೆ
ಊIಗಿ / ಂIಆS ಸೋಂಕಿತರಲ್ಲಿ ಸಾದ್ಯತೆ ಹಚ್ಚು
ಬ್ರೈನ್ ಟ್ಯೊಮರ್ ಚಿಕೆತ್ಸೆ
ಚಿಕೆತ್ಸೆಯು ಈ ಕೆಳಗಿನ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ
ಗೆಡ್ಡೆಯ ವಿದ
ಅದು ಮೆದುಳಿನ ಯಾವ ಭಾಗದಲ್ಲಿದೆ
ಎಷ್ಟು ದೊಡ್ಡದಾಗಿದೆ ಮತ್ತು ಎಷ್ಟು ದೂರಹರಡಿದೆ
ಜೀವ ಕೋಶಗಳು ಎಷ್ಟು ಅಸಹಜವಾಗಿದೆ
ರೋಗಿಯ ಒಟ್ಟಾರೆ ಆರೋಗ್ಯ ಮತ್ತು ಫಿಟ್ಸನ ಮಟ್ಟ
ಚಿಕಿತ್ಸೆ –
ಸ್ಟೀರಾಯ್ಡಗಳು
ಶಸ್ತ್ರ ಚಿಕಿತ್ಸೆ
ವಿಕಿರಣ ಚಿಕಿತ್ಸೆ
ಕೀಮೋಥೆರಪಿ
ಮೆದುಳಿನ ಗೆಡ್ಡೆಯ ಸುತ್ತ ಊತವನ್ನು ಕಡಿಮೆ ಮಾಡಲು ಸ್ಟೀರಾಯ್ಡ್ ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಯೇ ಮೆದುಳಿನ ಗೆಡ್ಡೆಗಳ ಪ್ರಮುಖ ಚಿಕಿತ್ಸೆಯಾಗಿದೆ ಶಸ್ತ್ರಚಿಕಿತ್ಸೆಯಿಂದ ಆದಷ್ಟು ಗೆಡ್ಡೆಯ ಅಂಶವನ್ನು ತೆಗೆಯಲಾಗುತ್ತದೆ 1 ರಿಂದ 2 ಗ್ರೇಡ್ನಲ್ಲಿರುವ ಗೆಡ್ಡೆಗಳಿಗೆ ಇದೇ ಶಾಶ್ವತ ಪರಿಹಾರವಾಗುತ್ತದೆ. 3 ರಿಂದ 4 ಗ್ರೇಡ್ನಲ್ಲಿರುವ ಗೆಡ್ಡೆಗಳನ್ನು ಕೆಲವೊಮ್ಮೆ ಸಂಪೂರ್ಣವಾಗಿ ತೆಗೆಯಲು ಸಾದ್ಯವಾಗುವುದಿಲ್ಲ. ಶಸ್ತ್ರ ಚಿಕಿತ್ಸೆಯ ನಂತರ ರೇಡಿಯೋ ಥೆರಪಿ ಅಥವಾ ಕೀಮೋ ಥೆರಪಿಯ ಅಗತ್ಯವಿರುತ್ತದೆ. ಇನ್ನು ಕೆಲವು ಗೆಡ್ಡೆಗಳು ಶಸ್ತ್ರ ಚಿಕಿತ್ಸೆಯ ನಂತರವೂ ಹಲವು ವರ್ಷಗಳ ನಂತರ ಪುಸರಾವರ್ತಿಸಬಹುದು. ಕೆಲವೂಮ್ಮೆ ಗೆಡ್ಡೆಗಳನ್ನು ಸಂಪೂರ್ಣವಾಗಿ ತೆಗೆಯಲಾಗದಿದ್ದರೂ ಜೀವನ ಗುಣಮಟ್ಟ ಹೆಚ್ಚಿಸಲು ಚಿಕಿತ್ಸೆ ಮಾಡಬೇಕಾಗುತ್ತದೆ.

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿರುವ ಶಸ್ತ್ರಚಿಕಿತ್ಸೆಗಳು –
ಕನಿಷ್ಟ ಆಕ್ರಮಣಶೀಲ ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆ
ಎಂಡೋಸ್ಕೋಪಿಕ್ ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆ
ಮೈಕ್ರೋಸ್ಕೋಪಿಕ್ ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆ
ಅಲ್ಟ್ರ ಸೌಂಡ್ ನ್ಯಾವಿಗೇಟೆಡ್ ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆ
ಕೀ ಹೋಲ್ ಬ್ರೈನ್ ಟ್ಯೊಮರ್ ಶಸ್ತ್ರಚಿಕಿತ್ಸೆ

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನ್ಯೊರೋಸರ್ಜರಿ ವಿಭಾಗದ ಸಾದನೆ –
1) ಈ ಪ್ರದೇಶದಲ್ಲಿ ಮೊಟ್ಟಮೊದದಲು ಎಂಡೋಸ್ಕೋಪಿಕ್ ಬ್ರೈನ್ ಸರ್ಜರಿ ನಡೆಸಿದ ಹೆಗ್ಗಳಿಕೆ
2) ಈ ಪ್ರದೇಶದಲ್ಲಿ ಮೊಟ್ಟಮೊದದಲು ಅಲ್ಟ್ರ ಸೌಂಡ್ ನ್ಯಾವಿಗೇಟೆಡ್ ಬ್ರೈನ್ ಟ್ಯೊಮರ್ ಶಸ್ತ್ರಚಿಕಿತ್ಸೆ ನಡೆಸಿದ ಹೆಗ್ಗಳಿಕೆ.
ನಮ್ಮ ಆಸ್ಪತ್ರೆಯಲ್ಲಿ ಈ ರೋಗಿಗಳಿಗೆ ವಿಶೇಷ ಚಿಕಿತ್ಸಾ ಸೌಲಭ್ಯವಿದ್ದು 1.5 ಮತ್ತು 64 ಸ್ಕ್ಯಾನ್ ಮಾಡಲಾಗುತ್ತದೆ. ಮತ್ತು ಬ್ರೈನ್ ಸರ್ಜರಿಗೆ ಪ್ರತ್ಯೇಕವಾದ ಓ.ಟಿ.ರೂಮ್ ಸಹ ಇರುತ್ತದೆ. ಇಬ್ಬರು ನುರಿತ ನ್ಯೂರೋ ಸರ್ಜನ್ಸ್ 2್ಠ47 ಗಂಟೆಗಳೂ ಲಭ್ಯರಿರುತ್ತಾರೆ. ಹಾಗೂ ಎಲ್ಲಾ ರಜಾ ದಿನಗಳಲ್ಲೂ ರೇಡಿಯಾಲಜಿ ಡಿಪಾರ್ಟ್‍ಮೆಂಟ್‍ನಿಂದ ಒ.ಖ.I ಸ್ಕ್ಯಾನ್ & ಅ.ಖಿ. ಸ್ಕ್ಯಾನ್‍ನ್ನು ಮಾಡಲಾಗುತ್ತದೆ. ನಮ್ಮ ಆಸ್ಪತ್ರೆಯ ಈ ವಿಶೇಷ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕರಾದ ಶ್ರೀಯುತ ವರ್ಗಿಸ್ ಪಿ ಜಾನ್, ರವರು ತಿಳಿಸಿರುತ್ತಾರೆ.

error: Content is protected !!