ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯಲ್ಲಿ ಜೂನ್ 9 ರಂದು ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಎಂಡಿ ಡಾ. ಪ್ರೀತಂ ಬಿ ಹೇಳಿದರು.
ಮಣಿಪಾಲ್ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಡಯಾಬಿಟಿಕ್ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ವಾಸ್ಕ್ಯುಲರ್ ಸರ್ಜನ್ ಡಾ. ರಾಹುಲ್ ಎನ್.ಎಸ್. ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜನತೆ ಉಚಿತ ಶಿಬಿರದ ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಯಾಬಿಟಿಕ್ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ. ಡಯಾಬಿಟಿಕ್ ರೋಗಿಗಳಿಗೆ ಎಲ್ಲ ರೀತಿಯಲ್ಲಿ ಸಲಹೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕಾಲಿನ ನರಗಳ ಉಚಿತ ಪರೀಕ್ಷೆ ನಡೆಸಲಾಗುವುದು. ಕಣ್ಣಿನ ಉಚಿತ ತಪಾಸಣೆ ಕೂಡ ಮಾಡಲಾಗುತ್ತದೆ ಎಂದರು.
ಡಯಾಬಿಟಿಸ್ ರೋಗಿಗಳಿಗೆ ವಿಶೇಷ ಆಹಾರ ಕಿಟ್ ಸಿದ್ಧಪಡಿಸಿದ್ದು, 500 ರೂ. ದರ ನಿಗಧಿಪಡಿಸಲಾಗಿದೆ. 300 ರೂ. ವಾರ್ಷಿಕ ಹೆಲ್ತ್ ಕಾರ್ಡ್ ಪಡೆದುಕೊಳ್ಳುವುದರಿಂದ ಸಮಾಲೋಚನೆ ಸಂದರ್ಭಗಳಲ್ಲಿ ಶೇ. 50 ರೀಯಾಯಿತಿ ಸಿಗಲಿದೆ ಎಂದು ತಿಳಿಸಿದರು.
ಡಾ. ಪಲ್ಲವಿ ಆರ್.ಬಿ., ಜಾನ್ ವಿನಯ್, ಚೇತನ್, ಕುಮಾರ್ ಹಾಗೂ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.