ಶಿವಮೊಗ್ಗ : ಜೂನ್ 15 : ಜಿಲ್ಲಾ ಕೌಶಲ್ಯ ಮಿಷನ್, ಕೈಗಾರಿಕಾ ಮತ್ತು ಉದ್ಯೋಗ ಇಲಾಖೆ ಹಾಗೂ ಸಹಾರ ಸ್ಕಿಲ್ ಸೆಲ್ಯೂಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಜೂನ್ 17ರಂದು ಬೆಳಿಗ್ಗೆ 9ರಿಂದ ಮುಸ್ಲಿಂ ಹಾಸ್ಟೆಲ್ (ವೀರಭದ್ರೇಶ್ವರ ಚಿತ್ರಮಂದಿರದ ಎದುರು)ನಲ್ಲಿ ನಡೆಯುತ್ತಿದ್ದು, ಮೇಳದಲ್ಲಿ ಸುಮಾರು 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ., ಸ್ನಾತಕೋತ್ತರ ಪದವಿ, ಐ.ಟಿ.ಐ., ಡಿಪ್ಲೋಮಾ ಪೂರೈಸಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಈ ಮೇಳದಲ್ಲಿ ಆಯ್ಕೆಯಾಗದವರನ್ನು ಕೌಶಲ್ಯ ಅಭಿವೃದ್ಧಿಗೆ ಆಯ್ಕೆ ಮಾಡಿ ನಂತರ ಉದ್ಯೋಗ ನೆರವು ಒದಗಿಸಲಾಗುವುದು.
ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ದೂರವಾಣಿ 08182-255293, ಮೊ.8861890866, 9482023412ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!