ಭದ್ರಾವತಿ ದಿನಾಂಕ: 25.3.2023 ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಶಿವಮೊಗ್ಗ ಹಾಗೂ ತಾಲೂಕು ಆಡಳಿತ ಮತ್ತು ತಾಲೂಕ ಪಂಚಾಯತ್ ಭದ್ರಾವತಿ ಇವರ ಸಹಯೋಗದಲ್ಲಿ ಭದ್ರಾವತಿ ತಾಲೂಕಿನ ಸೆಕ್ಟರ್ ಅಧಿಕಾರಿಗಳು ಬಿ ಎಲ್ ಓ ಗಳು ಮತ್ತು ಪ್ರೌಢಶಾಲೆ, ಕಾಲೇಜುಗಳ ಮತದಾರ ಸಾಕ್ಷತಾ ಸಂಘಗಳ ಸಂಚಾಲಕರಿಗೆ ಮತದಾನ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಸಭಾಭವನ ಹಳೇ ನಗರ ಭದ್ರಾವತಿ ಇಲ್ಲಿ ದಿನಾಂಕ 25.03.2023 ರಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಭದ್ರಾವತಿ ತಾಲೂಕಿನ ಗ್ರೇಡ್-2 ತಹಶೀಲ್ದಾರ್ ಆದ ಶ್ರೀಮತಿ ರಂಗಮ್ಮನವರ ಅಧ್ಯಕ್ಷತೆಯಲ್ಲಿ ” ಮೈ ಭಾರತ್ ಹೂ” ಮತದಾನ ಜಾಗೃತಿ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರನ್ನು ಶ್ರೀ ಮಂಜುನಾಥ್ ಸಿ .ಡಿ. ಮುಖ್ಯ ಶಿಕ್ಷಕರು, ಕನಕ ವಿದ್ಯಾ ಸಂಸ್ಥೆ, ಭದ್ರಾವತಿ, ಇವರು ಸ್ವಾಗತಿಸಿದರು. ನಗರ ಸಭೆಯ ಆಯುಕ್ತರಾದ ಶ್ರೀ ಮನು ಕುಮಾರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷಾತೀತವಾಗಿ ದಕ್ಷತೆ ಇಂದ ಚುನಾವಣಾ ಜವಾಬ್ದಾರಿ ನಿಭಾಯಿಸಲು ಕೋರಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರವಿಚಂದ್ರರವರು ಶಿವಮೊಗ್ಗ ಉಪ ವಿಭಾಗಾಧಿಕಾರಿಗಳು,ಹಾಗೂ ಇ ಆರ್ ಓ ಭದ್ರಾವತಿ,ಇವರು ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಬಿ ಎಲ್ ಓ ಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಮತದಾನ ಕೇಂದ್ರಗಳ ಮೂಲಭೂತ ಸೌಕರ್ಯಗಳ ಕುರಿತು ಸೆಕ್ಟರ್ ಮತ್ತು ಬಿ ಎಲ್ ಒ ಗಳ ಜೊತೆಗೆ ಸಂವಾದ ನಡೆಸಿದರು. ಮತದಾರ ಸಾಕ್ಷರತಾ ಸಂಘದ ಸಂಚಾಲಕರು ಮತದಾನದ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.ವಿಕಲಚೇತನರ , ಮತ್ತು 80 ವರ್ಷ ಮೇಲ್ಪಟ್ಟ ಮತದಾರರಿಗೆ postal ballot ನೆಡಲು ಚುನಾವಣಾ ಆಯೋಗ ತಿಳಿಸಿದೆ ಮಾಹಿತಿ ಪಡೆದು ವ್ಯವಸ್ಥಿತ ಮತ ಚಲಾಯಿಸಬೇಕು.ಅದಕ್ಕೆ ಮನೆ ಬೇಟಿ ಮಾಡಿ ಸೂಕ್ತ ಕ್ರಮ ತೆಗೆದು ಕೊಳ್ಳಲು ತಿಳಿಸಿದರು. ವೀಲ್ ಚೇರ್ ವ್ಯವಸ್ಥೆ ಮಾಡಿಕೊಳ್ಳ ತಿಳಿಸಿದರು. ಸಮಯದಲ್ಲಿ ನಮ್ಮ ನಮ್ಮ ವ್ಯಾಪ್ತಿಯಲ್ಲಿ ಮತ ಪ್ರಚಾರ ಮಾಡುವಾಗ ಏನಾದರೂ ಅವ್ಯವಹಾರ ನಡೆಯುವುದು ಕಂಡು ಬಂದಲ್ಲಿ C ವಿಜಿಲ್ ಮೊಬೈಲ್ ಆಪ್ ಮುಖೇನ ಚುನಾವಣೆ ಆಯೋಗಕ್ಕೆ ಗೌಪ್ಯ ವಾಗಿ ಮಾಹಿತಿ ತಿಳಿಸ ಬಹುದು , ತಿಳಿಸಿ ದವರ ಮಾಹಿತಿ ಗೌಪ್ಯ ವಾಗಿ ಇಡಲಾಗುವುದು ಎಂದು ತಿಳಿಸಿದರು
ಶ್ರೀ ನಾಗೇಂದ್ರಪ್ಪ ಎ. ಕೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಭದ್ರಾವತಿ, ಮತದಾನವನ್ನು ಹೆಚ್ಚಿಸುವಲ್ಲಿ ಬಿ ಎಲ್ ಓ ಗಳು ಹಾಗೂ ಸಾಕ್ಷರತಾ ಸಂಘಗಳ ಸಂಚಾಲಕರ ಪಾತ್ರದ ಕುರಿತು ಮಾಹಿತಿ ನೀಡಿದರು. ಶ್ರೀ ನವೀದ್ ಅಹಮದ್ ಪರ್ವೀಜ್ SVEEP ರಾಜ್ಯಮಟ್ಟದ ತರಬೇತಿದಾರರು, ಜಿಲ್ಲಾ ಪಂಚಾಯತ್ ಇವರು ಯುವ ಮತದಾರರ ನೊಂದಣಿ, ಕೆ ವೈ ಸಿ ಮೊಬೈಲ್ ಅಪ್ , C vigil ಮೊಬೈಲ್ ಆಪ್, VHA ಮತ್ತು nvsp ಮುಖೇನ ಆನ್ಲೈನ್ ಮೂಲಕ ನೋಂದಣಿ ಮಾಡುವ ವಿಧಾನ ವನ್ನು ತಿಳಿಸಿಕೊಟ್ಟರು. ಮತದಾನ ಪ್ರತಿಯೊಬ್ಬರ ಕರ್ತವ್ಯ
ನಮ್ಮ ಹಕ್ಕಾದ ಮತದಾನವನ್ನು ಚಾಚು ತಪ್ಪದೇ ಚಾಲಯಿಸುವ
ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗೌರವಿಸಬೇಕು ಹಾಗೂ
ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಇಲ್ಲಿ ಬಡ, ಶ್ರೀಮಂತ ಎನ್ನುವ ತಾರತಮ್ಯವಿಲ್ಲದೇ ಸಿಗುವ ಹಕ್ಕು ಮತದಾನವಾಗಿದೆ. ಹಾಗಾಗಿ 18 ವರ್ಷ ಮೇಲ್ಪಟ್ಟ ಯುವಕರು ಕಡ್ಡಾಯವಾಗಿ ಮತ ಚಲಾವಣೆ ಮಾಡುವ ಮೂಲಕ ಸಂವಿಧಾನ ಬದ್ದ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ ಎಂದರು ಹಾಗೂ ಎಲ್ಲ ಸಾರ್ವಜನಿಕರಿಗೆ ತಿಳಿಸಬೇಕು. ಎಲ್ಲ ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರೀಕ್ಷಿಸಲು ಕೋರಿದರು.. ಮತದಾನ ಪ್ರಕ್ರಿಯೆಯ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಿಕೊಳ್ಳುವ ಜೊತೆಗೆ ಸಂವಾದ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಲು ಚುನಾವಣಾ ಆಯೋಗ ಈಗ ವರ್ಷದಲ್ಲಿ 4 ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.
. ಎಲ್ಲ ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರೀಕ್ಷಿಸಲು ಕೋರಿದರು. ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ Voter Awareness ಗಳ ರಚನೆ ಆಗಿರುತ್ತದೆ ಅದರ ಮೂಲಕ ನೌಕರರ ಎಲ್ಲ ಅರ್ಹ ಮತ ದಾರಿಗೆ ಕಡ್ಡಾಯ ಮತದಾನ ಮಾಡಲು ಪ್ರೇರೇಪಿಸಲು ಸೂಚಿಸಿದರು ಮತ್ತು ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ಶಿರಸ್ತೆದಾರ್ ಚುನಾವಣಾ ಶಾಖೆ, ಭದ್ರಾವತಿ, ಇವರು ಬಿ ಎಲ್ ಓಗಳಿಗೆ ಚುನಾವಣೆ ಸಂಬಂಧಿಸಿದ ವಿವಿಧ ನಮೂನೆಗಳನ್ನು ಪರಿಚಯಿಸಿದರು ಮತ್ತು ಸಂವಾದ ಮೂಲಕ ಸಮಸ್ಯೆಗೆ ಪರಿಹರ ಸೂಚಿಸಿದರು..
ಶ್ರೀ ರಾಧಾಕೃಷ್ಣ ಭಟ್ ಶಿರಸ್ತೆದಾರ್ ಇವರು
ಈ ವಿ ಎಂ, ವಿ ವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಗಳ ಮಾಹಿತಿ ನೀಡಿ ಶಿಕ್ಷಕರಿಂದ ಅಣಕು ಮತದಾನ ಮಾಡಿಸಿ ಜಾಗೃತಿ ಮೂಡಿಸಿದರು. ಶ್ರೀ ಮಂಜಪ್ಪನವರು ಸಹ ಶಿಕ್ಷಕರು ಸಹ್ಯಾದ್ರಿ ಪ್ರೌಢಶಾಲೆ ಇವರು ನಮೂನೆ ಆರು, ಏಳು, ಎಂಟುಗಳ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ
ಶ್ರೀ ಮಂಜನಾಯಕ್ ಉಪತಹಸಿಲ್ದಾರ್, ಶ್ರೀ ಮಲ್ಲಿಕಾರ್ಜುನ ಶಿರಸ್ತೆದಾರ್, ಶ್ರೀ ಡಾ. ಶಿವರುದ್ರಪ್ಪ ಸಹಾಯಕ ಪ್ರಾಧ್ಯಾಪಕರು,. ಹಾಗೂ ತಾಲೂಕಿನ 253 ಬಿ ಎಲ್ ಓ ಗಳು 128 ಪ್ರೌಢಶಾಲೆ ಹಾಗೂ ಕಾಲೇಜುಗಳ ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಸತೀಶ್ ಕುಮಾರ್ ಕೆ ಜಿ ಸಹ ಶಿಕ್ಷಕರು ಸಂಚಿ ಹೊನ್ನಮ್ಮ ಪದವಿ ಪೂರ್ವ ಕಾಲೇಜು ಭದ್ರಾವತಿ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಶ್ರೀ ನವೀನ್ ಕುಮಾರ್ ಎಂ. ಜಿ .ಸಹಶಿಕ್ಷಕರು ಕೆ. ಪಿ .ಎಸ್. ಅಂತರಗಂಗೆ. ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲ ಶಿಬಿರಾರ್ಥಿಗಳು ಸಕ್ರಿಯವಾಗಿ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿದರು..