ಡಾ|| ರಾಜೇಶ್ ಸುರಗಿಹಳ್ಳಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ.
ಕ್ಷಯರೋಗ ಮುಕ್ತ ಭಾರತಕ್ಕೆ ಕೈಜೋಡಿಸೋಣ, ಭಾರತದಲ್ಲಿ ಸುಮಾರು ಆರು ಸಾವಿರ ಕ್ಷಯ ರೋಗಿಗಳು ಕಂಡು ಬರುತ್ತಿದ್ದು, ಐದು ನಿಮಿಯಷಕ್ಕೆ ಎರಡು ರೋಗಿಗಳು ಸಾವನ್ನಪ್ಪುತ್ತಿರುವುದು ತುಂಬಾ ವಿಷಾದ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ರಾಜೇರ್ಶ ಸುರಗಿಹಳ್ಳಿ ನುಡಿದರು. ಅವರು ಇಂದು ಬೆಳಿಗ್ಗೆ ಸಿಮ್ಸ್ ವೈದ್ಯಕೀಯ ಕಾಲೇಜ್ ಆವರಣದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ನಗರದ ಎಲ್ಲಾ ರೋಟರಿ ಕ್ಲಬ್ಗಳು, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಐ.ಎಂ.ಎ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವಕ್ಷಯ ರೋಗ ದಿನಚಾರಣೆಯ ಜಾಗೃತಿ ಜಾತಕ್ಕೆ ಚಾಲನೆ ನೀಡಿ ಮಾತನಾಡಿದರು. ಸತತ ಎರಡು ವಾರಗಳ ಕೆಮ್ಮು ಮತ್ತು ಕಫ, ಸಂಜೆಯ ಜ್ಚರ, ಎದೆನೋವು, ರಾತ್ರಿವೇಳೆ ಬೆವರುವುದು, ತೂಕ ಕಡಿಮೆ ಆಗುವುದು ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು ಕ್ಷಯ ರೋಗದ ಮುಖ್ಯ ಲಕ್ಷಣವಾಗಿದೆ. ಈ ಕಾಯಿಲೆಗೆ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯರೋಗ ನಿರ್ಮೂಲನೆಗೆ ಉಚಿತವಾತಿ ಸಾಕಷ್ಟು ಸಹಕಾರ ನೀಡುತ್ತಾ ಬಂದಿದೆ. ೨೦೨೦ರಲ್ಲಿ ಮಾನ್ಯ ಪ್ರಧಾನಮಂತ್ರಿಗಳು ೨೦೨೫ರ ಒಳಗೆ ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿರುತ್ತಾರೆ ಹಾಗೆಯೇ ಸಾರ್ವಜನಿಕರು, ಸಂಘ ಸಂಸ್ಥೆಗಳು, ಜನ ಪ್ರತಿನಿದಿಗಳು ಚಿಕಿತ್ಸೆಯಲ್ಲಿ ರೋಗಿಗಳನ್ನು ಪೋಷ್ಠಿಕ ಆಹಾರ ನೀಡುವ ಮುಖಾಂತರ ದತ್ತುಪಡೆದುಕೊಳ್ಳಲು ಸೂಚಿಸಿರುತ್ತಾರೆ.
ಈಗಾಗಲೆ ಶಿವಮೊಗ್ಗ ನಗರದ ಎಲ್ಲಾ ರೋಟರಿ ಕ್ಲಬ್ಗಳು ಕ್ಷಯರೋಗ ಪೀಡಿತರಿಗೆ ಹಾಲು, ಹಣ್ಣು, ಮೊಟ್ಟೆ ಪೌಷ್ಠಿಕ ಆಹಾರವನ್ನು ನೀಡುತ್ತಿದ್ದಾರೆ ಇವರ ಸೇವೆ ಅವಿಸ್ಮರಣಿಯ ಎಂದು ನುಡಿದರು.
ಈ ಜಾಗೃತಿ ಜಾತ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಐ.ಎಂ.ಎ ಹಾಲ್ನಲ್ಲಿ ಮುಕ್ತಾಯಗೊಂಡಿತು. ಈ ಜಾಗೃತಿ ಜಾತದಲ್ಲಿ ಜಿಲ್ಲಾ ಸರ್ಜನ್ ಡಾ|| ಸಿದ್ದನಗೌಡ ಪಾಟೀಲ್, ಜಿಲ್ಲಾ ಅಧೀಕ್ಷಕರು ಡಾ|| ಶ್ರೀಧರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ದಿನೇಶ್, ಡಾ|| ಗುಡದಪ್ಪ ಕಸಬಿ, ಡಾ|| ಚಂದ್ರಶೇಖರ್, ಐಎಂಎ ಅಧ್ಯಕ್ಷರಾದ ಡಾಕ್ಟರ್ ಅರುಣ್. ರೋಟರಿ ಕ್ಲಬ್ನ ಸಹಾಯಕ ಗರ್ನರ್ ಸುನಿತಾ ಶ್ರೀಧರ್, ಮಾಜಿ ಸಹಾಯಕ ಗರ್ನರ್ ಜಿ.ವಿಜಯಕುಮಾರ್, ಶಿವಮೊಗ್ಗ ನಗರದ ಎಲ್ಲಾ ರೋಟರಿ ಕ್ಲಬ್ನ ಅಧ್ಯಕ್ಷರು, ಕಾರ್ಯದರ್ಶಿಗಳು, ನರ್ಸಿಂಗ್ಕಾಲೇಜಿನ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪಸ್ಥಿತರಿದ್ದರು.