ಶಿವಮೊಗ್ಗ :ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ 2022 23ನೇ ಸಾಲಿನಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲಾ ಪಂಚಾಯತ್ ಮತ್ತು ಅನುಷ್ಠಾನ ಮಾಡಿದ ವಿವಿಧ ಇಲಾಖೆಗಳಿಗೆ ಗ್ರಾಮ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ
ಶಿವಮೊಗ್ಗ ಜಿಲ್ಲಾ ಪಂಚಾಯತ್ ರಾಜ್ಯದಲ್ಲಿಯೇ ಎರಡನೇ ಸ್ಥಾನವನ್ನು ಗಳಿಸಿದೆ ಭದ್ರಾವತಿ ಸೊರಬ ಸಾಗರ ತಾಲೂಕಿ ಗೆ ಉತ್ತಮ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ
ಬಹಳ ಮುಖ್ಯವಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಮಹಿಳೆಯರು ಶಿವಮೊಗ್ಗ ಜಿಲ್ಲೆಯಲ್ಲಿ ಪಾಲ್ಗೊಂಡಿದ್ದಾರೆ ಅದರಲ್ಲಿಯೂ ನಿಗದಿತ ಹಂತದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಮಾನವ ದಿನಗಳ ಸೃಜನತೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳಲಾಗಿದೆ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಚಟುವಟಿಕೆಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿರುವುದಲ್ಲದೆ ಬಹಳ ವ್ಯವಸ್ಥಿತವಾಗಿ ಜಾಬ್ ಕಾರ್ಡ್ ಗಳನ್ನು ವಿತರಿಸಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನದಾಗಿ ಮಹಿಳೆಯರು ಪಾಲ್ಗೊಳ್ಳುವಂತೆ ಕಾಯಕೋತ್ಸವಗಳನ್ನು ನಡೆಸಿ ಯಶಸ್ವಿಯಾಗಿದೆ
ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ದ್ವಿತೀಯ ಸ್ಥಾನ ಭದ್ರಾವತಿಯ ತಾಲೂಕ್ ಪಂಚಾಯಿತಿಗೆ ಅತ್ಯುತ್ತಮ ತಾಲೂಕು ಪಂಚಾಯಿತಿ ಪುರಸ್ಕಾರ ಸೊರಬದ ಕೃಷಿ ಇಲಾಖೆಗೆ ಕೃಷಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಿರುವುದಕ್ಕಾಗಿ ಪುರಸ್ಕಾರ ದೊರೆತಿದೆ
ಸಾಗರ ತಾಲೂಕಿನ ಸೈದೂರು ಗ್ರಾಮ ಪಂಚಾಯಿತಿ ಜಲಸಂಜೀವಿನಿ ಯೋಜನೆಯನ್ನು ಅತ್ಯಂತವಾಗಿ ಬಳಸಿಕೊಂಡು ಮಲೆನಾಡಿನ ಜಲಮೂಲಗಳನ್ನು ಬಳಸಿ ಅವುಗಳನ್ನು ಹಿಂಗಿಸಿ ಬೇಸಿಗೆಯಲ್ಲಿಯೂ ಅದರ ಅನುಕೂಲತೆಗಳನ್ನು ಪಡೆಯಲು ಕೆರೆ ನೀರಿನ ಮೂಲಗಳಲ್ಲಿ ನೀರು ಉಳಿಸಿಕೊಳ್ಳುವಲ್ಲಿ ಸೈದೂರು ಗ್ರಾಮ ಪಂಚಾಯಿತಿ ವಿಶೇಷವಾಗಿ ಕಾರ್ಯ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪುರಸ್ಕಾರ ನೀಡಲಾಗಿದೆ

ಜಿಲ್ಲಾ ಪಂಚಾಯತ್ ಶಿವಮೊಗ್ಗ
ಸಂತಸ ವ್ಯಕ್ತಪಡಿಸಿ ಮಾತನಾಡಿದ ತಾರಾ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಶಿವಮೊಗ್ಗ ನಮ್ಮ ಶಿವಮೊಗ್ಗ ಜಿಲ್ಲಾ ಪಂಚಾಯತಿ ಒಳಗೊಂಡಂತೆ ಗ್ರಾಮ ಪಂಚಾಯತಿ ತಾಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆಯನ್ನು ಗುರುತಿಸಿ ರಾಜ್ಯ ಸರ್ಕಾರ ವಿಶೇಷ ಪುರಸ್ಕಾರವನ್ನು ನೀಡಿದೆ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಮ್ಮ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನ ಪ್ರೋತ್ಸಾಹ ತುಂಬಾ ಉಪಯೋಗಕಾರಿ ಯಾಗಿದೆ ಇದು ನಮ್ಮ ಜಿಲ್ಲೆಯ ಶ್ರಮಜೀವಿಗಳಿಗೆ ಸಂದ ಬಹುದೊಡ್ಡ ಗೌರವ ಮತ್ತಷ್ಟು ಕೆಲಸ ಮಾಡಲು ಸಹಕಾರಿಯಾಗಿದೆ
ಕುಮಾರ್ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಸೊರಬ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ನಮ್ಮ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಮಾನವ ದಿನಗಳನ್ನು ಸೂಚಿಸಿದ್ದೇವೆ ಇದರಿಂದ ಆರ್ಥಿಕವಾಗಿಯೂ ಗ್ರಾಮೀಣ ಜನರಿಗೆ ಸಹಕಾರವಾಗಿದೆ ಅಭಿವೃದ್ಧಿ ಯಶಸ್ವಿಯಾಗಿ ಮುನ್ನಡೆದಿದೆ
ಲತಾದೇವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈದೂರು ಸಾಗರ ತಾಲೂಕು ಮಾತನಾಡಿ ನಮ್ಮ ಭಾಗದಲ್ಲಿ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ ಆದರೆ ಬೇಸಿಗೆಯಲ್ಲಿ ಕೆರೆಗಳು ಬತ್ತಿಬಿಡುತ್ತವೆ ಯೋಜನೆಯಲ್ಲಿ ಬಸ್ಸಿಗಾಲುಗಳ ನಿರ್ಮಾಣ ಕೆರೆಗಳ ಹೂಳ ಎತ್ತುವುದು ಇಂಗುಗುಂಡಿಗಳ ನಿರ್ಮಾಣ ಇದರಿಂದ ನೀರಿನ ಮೂಲಗಳನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಪಂಚಾಯಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ ಇನ್ನೂ ಮೂರು ವರ್ಷಗಳ ಕಾಲ ಈ ಯೋಜನೆಯನ್ನು ಮುನ್ನಡೆಸುತ್ತೇವೆ
ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪುರಸ್ಕಾರ ನೀಡಿ ಕಾಯಕದಲ್ಲಿ ತೊಡಗಿಕೊಳ್ಳಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದೆ