ಶಿವಮೊಗ್ಗ:- ಜಯನಗರದ ಶ್ರೀ ಸೀತಾರಾಮ ಮಂದಿರದಲ್ಲಿ ಮಾ. 22ರಿಂದ ಏ. 3ರವರೆಗೆ 60ನೇ ಶ್ರೀ ವಸಂತ ರಾಮೋತ್ಸವ, ಸೀತಾ ಕಲ್ಯಾಣೋತ್ಸವ ಪಟ್ಟಾಭಿಷೇಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿರುತ್ತವೆ.
ಚಾಂದ್ರಮಾನ ಯುಗಾದಿ ನಿಮಿತ್ತ ಮಾ. 22ರಂದು ಬೆಳಿಗ್ಗೆ 9ರಿಂದ ಉತ್ಸವ ರಾಮರಿಗೆ ಅಭಿಷೇಕ, ಮಾ. 30ರಂದು ಬೆಳಿಗ್ಗೆ 8ರಿಂದ ಶ್ರೀ ರಾಮನವಮಿ ನಿಮಿತ್ತ ದೇವರಿಗೆ ಮಹಾಭಿಷೇಕ, ಮಾರುತಿ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ, ಅನ್ನಸಂತರ್ಪಣೆ ಜರುಗಲಿದ್ದು, ಅಂದು ರಾತ್ರಿ 7ಕ್ಕೆ ರಥದೊಂದಿಗೆ ಪ್ರಾಕಾರೋತ್ಸವ ನಡೆಯಲಿದೆ.
ಮಾ. 31ರಂದು ಬೆಳಿಗ್ಗೆ 10ರಿಂದ ಶ್ರೀ ಲಕ್ಷ್ಮಿ ನರಸಿಂಹ ಮೂಲಮಂತ್ರ ಹೋಮ, ರಾತ್ರಿ 7ರಿಂದ ಸೀತಾ ಕಲ್ಯಾಣೋತ್ಸವ ಜರುಗಲಿದೆ.
ಏ. 1ರಂದು ಬೆಳಿಗ್ಗೆ 10ರಿಂದ ರುದ್ರಹೋಮ, ರಾತ್ರಿ 7ರಿಂದ ರಾಜಬೀದಿ ಉತ್ಸವ, ಏ. 2ರಂದು ಭಾನುವಾರ ಬೆಳಿಗ್ಗೆ 9ರಿಂದ ರಾಮತಾರಕ ಹೋಮ, 11ರಿಂದ ಶ್ರೀರಾಮ ಪಟ್ಟಾಭಿಷೇಕದ ಮಹಾಭಿಷೇಕ, ಕಿರೀಟಧಾರಣೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಹಾಗೂ ಏ. 3ರಂದು ರಾತ್ರಿ 8 ಗಂಟೆಗೆ ದೇವರಿಗೆ ಶಯನೋತ್ಸವ ವಿಶೇಷ ಅಲಂಕಾರ ಇರುತ್ತದೆ. ಹಾಗೆಯೇ ರಾಮನವಮಿ ನಿಮಿತ್ತ ಮಾ. 22ರಿಂದ ಏ.3 ರವರೆಗೆ ಶ್ರೀರಾಮ ದೇವರಿಗೆ ವಿಶೇಷ ಅಲಂಕಾರಗಳಿರುತ್ತವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಅಧ್ಯಕ್ಷ ಎಂ.ಡಿ. ಲಕ್ಷ್ಮಿಕಾಂತ್, ಕಾರ್ಯದರ್ಶಿ ಸತೀಶ್ ಅಯ್ಯಂಗಾರ್ ಮತ್ತು ಪದಾಧಿಕಾರಿಗಳು ಕೋರಿದ್ದಾರೆ.

error: Content is protected !!