“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಕೃಷಿ ಮತ್ತು ತೋಟಗಾರಿಕಾ ಮೇಳ 2023 ಸುಸ್ಥಿರ ಆದಾಯಕ್ಕಾಗಿ – ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗವು ಮಾರ್ಚ್ 17 ರಿಂದ 20 ರವರೆಗೆ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳ-2023ನ್ನು ‘ಸುಸ್ಥಿರ ಆದಾಯಕ್ಕಾಗಿ – ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ’ ಎಂಬ ಧ್ಯೇಯದೊಂದಿಗೆ ಕೃಷಿ ಮಹಾವಿದ್ಯಾಲಯದ ನವುಲೆ ಆವರಣದಲ್ಲಿ ಆಚರಿಸಲಾಗುತ್ತಿದೆ.
ಕೃಷಿ ಮೇಳವನ್ನು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ಉದ್ಘಾಟಿಸಲಿದ್ದು, ಮಾನ್ಯ ಕೃಷಿ ಸಚಿವರು, ಮಾನ್ಯ ಗೃಹ ಸಚಿವರು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಲೋಕ ಸಭಾ ಸದಸ್ಯರು, ಮಾನ್ಯ ವಿಧಾನ ಸಭಾ ಶಾಸಕರುಗಳು ಮತ್ತು ಸರ್ಕಾರದ ಇನ್ನಿತರ ಮಾನ್ಯರುಗಳು ಭಾಗವಹಿಸಲಿದ್ದಾರೆ.
ಕೃಷಿ ಮೇಳದ ಸಂದರ್ಭದಲ್ಲಿ ಕೃಷಿ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಯ ‘ಸಸ್ಯಕಾಶಿ’ಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ನವೀನ ತಾಂತ್ರಿಕತೆಗಳು ಮತ್ತು ವಿವಿಧ ಬೆಳೆಗಳ ಹೊಸ ತಳಿಗಳ ಬಿಡುಗಡೆಯನ್ನು ಮಾಡಲಾಗುತ್ತಿದೆ. ಅಲ್ಲದೆ ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಮತ್ತು ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಲಾಗುತ್ತಿದೆ.
ಕೃಷಿ ಪರಿಕರ ವಿತರಕರು, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ.
ಕೃಷಿ ಮತ್ತು ತೋಟಗಾರಿಕಾ ಮೇಳದ ವಿಶೇಷತೆಗಳು :
• ತಂತ್ರಜ್ಞಾನ ಉದ್ಯಾನವನ
• ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ
• ಹೈ-ಟೆಕ್ ತೋಟಗಾರಿಕೆ-ಹೈಡ್ರೋಫೆÇೀನಿಕ್ ಕೃಷಿ
• ಪುಷ್ಪ ಕೃಷಿ, ಜೇನು ಸಾಕಾಣಿಕೆ
• ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ
• ಸಿರಿಧಾನ್ಯಗಳ ಮಹತ್ವ
• ಕೃಷಿ-ತೋಟಗಾರಿಕೆ-ಅರಣ್ಯ ಸಮಗ್ರ ಪದ್ಧತಿಗಳು
• ಸಾವಯವ ಕೃಷಿ, ಅಣಬೆ ಬೇಸಾಯ
• ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು
• ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ
• ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು
• ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು
• ಹವಾಮಾನ ಆಧಾರಿತ ಕೃಷಿ
• ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ
• ಶ್ರೇಷ್ಠ ಕೃಷಿಕರು ಮತ್ತು ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ
• ರೈತರ ಯಶೋಗಾಥೆ ಮತ್ತು ಕೃಷಿ ತಜ್ಞರೊಂದಿಗೆ ಸಂವಾದ
• ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023
ವಿಶ್ವಸಂಸ್ಥೆಯು ಭಾರತ ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿಕೊಂಡು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75 ನೇ ಅಧಿವೇಶನದಲ್ಲಿ 2023 ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದೆ. ಸಿರಿಧಾನ್ಯಗಳ ಸುಸ್ಥಿರ ಉತ್ಪಾದನೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆಹಾರ ಭದ್ರತೆ ಮತ್ತು ಪೆÇೀಷಣೆಗೆ ಸಿರಿಧಾನ್ಯಗಳ ಕೊಡುಗೆಯ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಈ ಘೋಷಣೆ ಹೊಂದಿದೆ. ನಿರಂತರವಾಗಿ ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆಯನ್ನು ಪೆÇೀಷಿಸಲು, ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಸಿರಿಧಾನ್ಯಗಳು ಸವಾಲುಗಳನ್ನು ಜಯಿಸಲು ಸಹಾಯ ಮಾಡುವ ಧಾನ್ಯಗಳಾಗಿವೆ. ಭಾರತದಲ್ಲಿನ ಪ್ರಮುಖ ಸಿರಿಧಾನ್ಯ ಬೆಳೆಗಳೆಂದರೆ ಸಜ್ಜೆ, ರಾಗಿ, ನವಣೆ, ಸಾಮೆ, ಜೋಳ, ಊದಲು, ಬರಗು, ಅರಕ ಎಂದು ಪರಿಗಣಿಸಲಾಗಿದೆ. ಜಾಗತಿಕವಾಗಿ ಭಾರತವು ಸಿರಿಧಾನ್ಯವನ್ನು ರಫ್ತು ಮಾಡುವಲ್ಲಿ 5ನೇ ಅತಿ ದೊಡ್ಡ ದೇಶವಾಗಿದೆ. ಸಿರಿಧಾನ್ಯ ಮತ್ತು ಅದರ ಪ್ರಯೋಜನಗಳಿಗೆ ಸಂಬಂಧಿಸಿದ ವಿಷಯದ ಬಗ್ಗೆ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುವುವಲ್ಲಿ, ಸೆಂಟರ್ ಫಾರ್ ಎಕ್ಸಲೆನ್ಸ್, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಅನೇಕ ರಾಜ್ಯಗಳಲ್ಲಿ ಸಿರಿಧಾನ್ಯ ಉತ್ತೇಜನಕ್ಕಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಇನ್ನು ಸಿರಿಧಾನ್ಯಗಳು ಹೆಚ್ಚಿನ ಪೌಷ್ಟಿಕಾಂಶದ ಲಕ್ಷಣಗಳನ್ನು ಹೊಂದಿವೆ. ಸಿರಿಧಾನ್ಯಗಳನ್ನು ಕಡಿಮೆ ನೀರಾವರಿಯನ್ನು ಬಳಸಿಯೂ ಬೆಳೆಸಬಹುದಾಗಿದೆ. ಒಣ ಪ್ರದೇಶದಲ್ಲಿಯೂ ಉತ್ತಮ ಇಳುವರಿಯನ್ನು ನೀಡುವ ಬೆಳೆ ಎನ್ನುವ ಹೆಗ್ಗಳಿಕೆಯೂ ಸಿರಿಧಾನ್ಯಕ್ಕೆ ಇದೆ. ಅಲ್ಲದೇ ಕಡಿಮೆ ಫಲವತ್ತತೆ ಹೊಂದಿರುವ ಭೂಮಿಯಲ್ಲಿಯೂ ಸುಲಭವಾಗಿ ಬೇಸಾಯವನ್ನು ಮಾಡಬಹುದಾಗಿದೆ. ಸಿರಿಧಾನ್ಯವು ಆಹಾರ ಭದ್ರತೆ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿಯೂ ಸಹಕಾರಿ ಆಗಿದೆ. ಜಾಗತಿಕವಾಗಿ ನಿರಂತರವಾಗಿ ಹೆಚ್ಚುತ್ತಿರುವ ನ್ಯೂಟ್ರಿಯಾ-ಧಾನ್ಯಗಳ ಬೇಡಿಕೆಯನ್ನು ಪೆÇರೈಸುವ ನಿಟ್ಟಿನಲ್ಲಿಯೂ ಸಿರಿಧಾನ್ಯಗಳು ಮಹತ್ವದ ಪಾತ್ರವನ್ನು ವಹಿಸಿವೆ.
ಭಾರತೀಯ ರಫ್ತುದಾರರು ಕಂಡುಕೊಂಡಂತೆ ಮುಂದಿನ ವರ್ಷಗಳಲ್ಲಿ ಸಿರಿಧಾನ್ಯಗಳ ರಫ್ತುಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಸಿರಿಧಾನ್ಯಗಳ ರಫ್ತು ಪ್ರಮಾಣವನ್ನು ಗಮನಿಸುವುದಾದರೆ, ಭಾರತವು ಸಿರಿಧಾನ್ಯಗಳ ರಫ್ತಿನಲ್ಲಿ ಐದನೇ ಅತಿದೊಡ್ಡ ದೇಶವಾಗಿದೆ. 2020ರ ಮಾಹಿತಿಯ ಪ್ರಕಾರ, ಸಿರಿಧಾನ್ಯದ ರಫ್ತುಗಳು ನಿರಂತರವಾಗಿ ಶೇಕಡ 3 ರಷ್ಟು ಪ್ರಮಾಣ ಹೆಚ್ಚಳವಾಗುತ್ತಿದೆ. 2020ಕ್ಕೆ ಕೊನೆಗೊಳ್ಳುವ ಐದು ವರ್ಷಗಳು 2020-21 ರಲ್ಲಿ, (ಡಾಲರ್ ಅನ್ವಯ) 26.97 ಮಿಲಿಯನ್ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡಲಾಗಿದೆ. ಸಿರಿಧಾನ್ಯಗಳನ್ನು ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್, ಭಾರತ, ಚೀನಾ, ನೆದಲ್ಯಾರ್ಂಡ್, ಫ್ರಾನ್ಸ್, ಪೋಲೆಂಡ್ ಮತ್ತು ಅಜೆರ್ಂಟೀನಾ ಪ್ರಮುಖವಾಗಿ ಗುರುತಿಸಿಕೊಂಡಿವೆ. 2020-21ರಲ್ಲಿ ಭಾರತದಿಂದ ಸಿರಿಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಮುಖ ಮೂರು ದೇಶಗಳಲ್ಲಿ ನೇಪಾಳ, ಯುಎಇ ಮತ್ತು ಸೌದಿ ಅರೇಬಿಯಾ ಗುರುತಿಸಿಕೊಂಡಿದೆ. ಸಿರಿಧಾನ್ಯವನ್ನು ಜಾಗತಿಕವಾಗಿ ಪ್ರಚಾರ ಮಾಡುವ ತುರ್ತು ಇಂದಿದೆ.
ಸಿರಿಧಾನ್ಯದ ಕುರಿತು ನೀತಿಗಳು ಮತ್ತು ಕಾರ್ಯಗಳು
ಸಿರಿಧಾನ್ಯಗಳ ಉತ್ತೇಜನಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶೀಯ ಮತ್ತು ಜಾಗತಿಕ ಬೇಡಿಕೆ ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು, ಪೌಷ್ಟಿಕಾಂಶದ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನೂ ಆಚರಿಸುತ್ತಿದೆ. ಏಪ್ರಿಲ್, 2018ರಲ್ಲಿ ಸಿರಿಧಾನ್ಯಗಳನ್ನು ಪೌಷ್ಟಿಕ-ಧಾನ್ಯವನ್ನಾಗಿಯೂ ಗುರುತಿಸಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪೆÇೀಷಣ್ ಅಡಿಯಲ್ಲಿಯೂ ಸಿರಿಧಾನ್ಯವನ್ನು ಸೇರಿಸಲಾಗಿದೆ. ಮಿಷನ್ ಅಭಿಯಾನ ಅಡಿಯಲ್ಲಿ 500ಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳು ಸಿರಿಧಾನ್ಯ ಮೌಲ್ಯ ಸರಪಳಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವೂ ಈ ನಿಟ್ಟಿನಲ್ಲಿ ಸಮಗ್ರ ಕಾರ್ಯತಂತ್ರವನ್ನು ಸಿದ್ಧಪಡಿಸಿದೆ. ಭಾರತೀಯ ಸಿರಿಧಾನ್ಯಗಳ ಪ್ರಚಾರದ ಭಾಗವಾಗಿ 2022ರ ಡಿಸೆಂಬರ್ ವಿಶೇಷ ಅಭಿಯಾನವೂ ಪ್ರಾರಂಭವಾಗಿದೆ.
ಸಿರಿಧಾನ್ಯಗಳ ಪ್ರಚಾರ ಮತ್ತು ಬಳಕೆಯಲ್ಲಿ ಭಾರತದ ಸಾಧನೆ
ಭಾರತವು ಈಗಾಗಲೇ ವಿವಿಧ ಹಂತಗಳಲ್ಲಿ ಸಿರಿಧಾನ್ಯಗಳ ಬಳಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಸಿರಿಧಾನ್ಯ ಬೆಳೆಯುವುದು ಹಾಗೂ ಬಳಸುವುದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುತ್ತಿದೆ. ಭಾರತದಲ್ಲಿ ಅಗ್ರ ಐದು ಸಿರಿಧಾನ್ಯಗಳನ್ನು ಉತ್ಪಾದಿಸುವ ರಾಜ್ಯಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿವೆ. ಸಿರಿಧಾನ್ಯ ರಫ್ತಿನ ಪಾಲು ಒಟ್ಟು ಸುಮಾರು 1 ಪ್ರತಿಶತ ಇದೆ. ಭಾರತದಿಂದ ಸಿರಿಧಾನ್ಯಗಳ ರಫ್ತು ಮುಖ್ಯವಾಗಿ ಧಾನ್ಯಗಳು ಸೇರಿವೆ. ವಿಶ್ವದಲ್ಲಿ ಭಾರತವು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗದ ಪ್ರಕಾರ, ವಿಶ್ವ ಉತ್ಪಾದನೆಯಲ್ಲಿ 2022 ರಲ್ಲಿ ಸಿರಿಧಾನ್ಯದ ಪ್ರಮಾಣವು 30.464 ಮಿಲಿಯನ್ ಮೆಟ್ರಿಕ್ ಟನ್ ಮತ್ತು ಭಾರತದ ಪಾಲು 12.49 ಮಿಲಿಯನ್ ಮೆಟ್ರಿಕ್ ಟನ್ ಆಗಿದೆ. ಇದು ಒಟ್ಟು ಸಿರಿಧಾನ್ಯದ ಉತ್ಪಾದನೆಯ 41 ಪ್ರತಿಶತವನ್ನು ಹೊಂದಿದೆ.
ಸಿರಿಧಾನ್ಯಗಳ ಪೌಷ್ಟಿಕಾಂಶ, ಪರಿಸರ ಮತ್ತು ಆರ್ಥಿಕ ಪ್ರಯೋಜನಗಳು
ಪೌಷ್ಟಿಕಾಂಶದ ಮೌಲ್ಯಕ್ಕೆ ಸಂಬಂಧಿಸಿದಂತೆ, ಸಿರಿಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಮೈಕ್ರೋನ್ಯೂಟ್ರಿಯೆಂಟ್ ಮತ್ತು ನ್ಯೂಟ್ರಾಸ್ಯುಟಿಕಲ್ ಫೈಟೊಕೆಮಿಕಲ್‍ಗಳು ಉತ್ತಮ ಮೂಲಗಳಾಗಿವೆ. ಹೆಚ್ಚಿನ ಕ್ಯಾಲ್ಸಿಯಂ, ಕಬ್ಬಿಣ, ಸತು, ಲಿಪಿಡ್‍ಗಳು ಮತ್ತು ಉತ್ತಮ-ಗುಣಮಟ್ಟದ ಪ್ರೋಟೀನ್ಗಳು ಇರುವುದರಿಂದ ಅವು ಮಾನವ ಮತ್ತು ಪ್ರಾಣಿಗಳ ಆಹಾರಕ್ರಮಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ಸಿರಿಧಾನ್ಯಗಳು 7-12% ಪ್ರೋಟೀನ್ 2-5% ಕೊಬ್ಬು, 65-75% ಕಾರ್ಬೋಹೈಡ್ರೇಟ್ ಮತ್ತು 15-20 % À ಫೈಬರ್ ಅನ್ನು ಹೊಂದಿದೆ. ಪ್ರಧಾನ ಬೆಳೆಗಳಾದ ಅಕ್ಕಿ ಮತ್ತು ಗೋಧಿಯ ಬೆಳೆಗಳಿಗೆ ಹೋಲಿಸಿದರೆ, ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ ಅಂಶವು 10 ಪಟ್ಟು ಹೆಚ್ಚು. ಹಾಗೆಯೇ ಸಿರಿಧಾನ್ಯಗಳಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ, ಇದು ಮಧುಮೇಹದ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ.
ಸಿರಿಧಾನ್ಯವು ಟೈಪ್ 2 ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿ, ಗ್ಯಾಸ್ಟ್ರಿಕ್ ಅಲ್ಸರ್ ಅಥವಾ ಕೊಲೊನ್ ಕ್ಯಾನ್ಸರ್ ನಂತಹ ಜಠರಗರುಳಿನ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಮಲಬದ್ಧತೆ ಮತ್ತು ಇನ್ನಿತರ ಸಮಸ್ಯೆಗಳನ್ನು ನಿವಾರಿಸುತ್ತದೆ.
ಪೋಷಕಾಂಶಗಳ ಭದ್ರತೆ ಇತ್ತೀಚಿನ ದಿನಗಳಲ್ಲಿ ಮನುಷ್ಯರ ಆರೋಗ್ಯವು ಅದಗೆಡುತ್ತಿದೆ. ಇಂತಹ ಸಮಸ್ಯೆಗೆ ಮೂಲ ಕಾರಣ ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳ ಕೊರತೆ. ಈ ಸಂದರ್ಭದಲ್ಲಿ ನಾವು ಆಹಾರ ಭದ್ರತೆ ಮತ್ತು ಪೌಷ್ಠಿಕತೆಯ ಆಯಾಮಗಳನ್ನು ನಿಭಾಯಿಸುವುದು ಮುಖ್ಯವಾಗಿದೆ. ಆದುದರಿಂದ ನಾವು ಸೇವಿಸುವ ಆಹಾರ ಕ್ರಮವನ್ನು ಆರೋಗ್ಯ ರೀತಿಯಲ್ಲಿ ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕು. ದೇಹಕ್ಕೆ ಬೇಕಾಗುವಂತಹ ಉತ್ತಮ ಶರ್ಕರಪಿಷ್ಟ, ವಿಟಮಿನ್, ಖನಿಜಾಂಶ ಹಾಗೂ ಹೆಚ್ಚಿನ ಪೋಷಕಾಂಶ ಇರುವ ಆಹಾರವಾದ ಸಿರಿಧಾನ್ಯ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮಲ್ಲಿ ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ. ಅವು ಯಾವುವೆಂದರೆ:
ಸಿಟ್ರಸ್ ಅಂಶ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಇವು ವಿಟಮಿನ್ ‘ಸಿ’ ರೋಗ ನಿರೋಧಕ ಸಾಮಥ್ರ್ರ್ಯವನ್ನು ಹೆಚ್ಚಿಸುತ್ತವೆ. ಅಣಬೆಯ ಸೇವನೆಯಿಂದ ಇದರಲ್ಲಿರುವ ಸಸಾರಜನಕ ಹಾಗೂ ಇತರೆ ಪೋಷಕಾಂಶಗಳು ಸೋಂಕಾಣು ಮತ್ತು ಬ್ಯಾಕ್ಟೀರಿಯಾದ ವಿರುದ್ದ ಹೋರಾಡಲು ಸಹಾಯ ಮಾಡುತ್ತವೆ.
 ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹದಲ್ಲಿ ಪೋಷಕಾಂಶಗಳನ್ನು ದೊರೆಯುವಂತೆ ಸಹಾಯ ಮಾಡುತ್ತದೆ ಅಲ್ಲದೆ ಇದರಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡುವ ಆ್ಯಂಟಿ ಆಕ್ಸಿಡೆಂಟ್‍ಗಳು ಇರುತ್ತದೆ.
 ಮೊಸರಲ್ಲಿ ಪೆÇ್ರೀಬಯೋಟಿಕ್ ಬ್ಯಾಕ್ಟೀರಿಯಾವು ಜಠರದ ಆರೋಗ್ಯವನ್ನು ಹೆಚ್ಚಿಸಿ ಸೋಂಕು ತಗಲದಂತೆ ಕಾಪಾಡುತ್ತದೆ.
 ಶುಂಠಿಯು ಒಣ ಕೆಮ್ಮನ್ನು ತಡೆಯಲು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
 ನಿಂಬೆ ಮತ್ತು ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದ್ದು ಇದು ಉತ್ಕರ್ಷಣಾ ನಿರೋಧಕ ಮತ್ತು ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

ರೈತರ ಆದಾಯ ದ್ವಿಗುಣ:
ರೈತರ ಆದಾಯ ದ್ವಿಗುಣಗೊಳಿಸುವುದು ಭಾರತ ಸರ್ಕಾರದ ಕನಸಿನ ಯೋಜನೆಗಳ ಪೈಕಿ ಪ್ರಮುಖವಾದದ್ದಾಗಿದೆ. ಯೋಜನೆಗೆ ಸಂಬಂಧಿಸಿದ ರೂಪರೇಷೆಗಳು ಸುಲಭ ಆದರೆ ಅದನ್ನು ಸಾಧಿಸಲು ಇರುವ ಮಾರ್ಗ ಬಹಳ ಸವಾಲಿನದ್ದಾಗಿದೆ.
ಇದಕ್ಕಾಗಿ ಬೆಳೆ ಸುಧಾರಣೆ, ಜಾನುವಾರು ಉತ್ಪಾದಕತೆ, ಸಂಪನ್ಮೂಲ ಬಳಕೆಯಲ್ಲಿ ದಕ್ಷತೆ, ಉತ್ಪಾದನಾ ವೆಚ್ಚದಲ್ಲಿ ಉಳಿತಾಯ, ಬೆಳೆಯ ತೀವ್ರತೆಯನ್ನು ಹೆಚ್ಚಿಸುವುದು, ವಾಣಿಜ್ಯ ಬೆಳೆಗಳ ಕಡೆಗೆ ವೈವಿಧ್ಯಗೊಳಿಸುವುದು, ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸುವುದು ಮತ್ತು ರೈತರ ಬೆಳೆಗಳಿಗೆ ನೈಜ ಬೆಲೆಯನ್ನು ನೀಡುವತ್ತ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ರೈತರ ಆದಾಯ ದ್ವಿಗುಣಗೊಳಿಸುವುದರಲ್ಲಿ ಬಹುದೊಡ್ಡ ಸವಾಲು ಇರುವುದು ಕೊಯ್ಲು ನಂತರದ ಪ್ರಕ್ರಿಯೆ,ಆದ್ದರಿಂದ ಆಹಾರೋತ್ಪನ್ನಗಳ ಕೊಯ್ಲು ನಂತರದ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವುದರತ್ತ ಹೆಚ್ಚಿನ ಗಮನ ಹರಿಸಬೇಕಿದ್ದು, ಕೊಯ್ಲು ನಂತರ-ಒಟ್ಟುಗೂಡಿಸುವಿಕೆ, ಸಂಸ್ಕರಣೆ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ರಫ್ತು ವಿಭಾಗಗಳೂ ಕೂಡ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಪ್ರಮುಖ ಅಂಶವಾಗಿರಲಿವೆ.


ಹಣ್ಣು-ತರಕಾರಿಗಳ ವಿಭಾಗದಲ್ಲಿ ಶೇ.25-30ರಷ್ಟು ಪೋಲಾಗುತ್ತಿದೆ. ಆದರೆ ಆಹಾರ ಧಾನ್ಯಗಳ ವಿಭಾಗದಲ್ಲಿ ಪೋಲು ಪ್ರಮಾಣ ಶೇ.8-10ರಷ್ಟಿದೆ. ಇದರಿಂದ 95,000 ಕೋಟಿ ರೂಪಾಯಿ ಮೌಲ್ಯದ ಹಣ್ಣುಗಳು, ತರಕಾರಿಗಳು, ಆಹಾರ ಧಾನ್ಯಗಳು ನಷ್ಟವಾಗುತ್ತಿವೆ. ಹಾಲು ಉತ್ಪಾದನೆಯಲ್ಲಿ ಉತ್ಪಾದನೆಯಿಂದ ಗ್ರಾಹಕರವರೆಗೆ ಕೋಲ್ಡ್ ಚೈನ್ ಇರುವುದರಿಂದ ಶೇ.1ರಷ್ಟು ಉತ್ಪನ್ನ ವ್ಯರ್ಥವಾಗುತ್ತದೆ. ಆದರೆ ತರಕಾರಿಗಳು ಹಣ್ಣುಗಳು ಕೊಯ್ಲಿನ ನಂತರ ಬೇಗ ಹಾಳಾಗುತ್ತದೆ. ಸರಿಯಾದ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯ ಕಾರಣದಿಂದಾಗಿ ಈ ವಿಭಾಗದಲ್ಲಿ ನಷ್ಟ ಹೆಚ್ಚಾಗಿದೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.
“ಉತ್ಪನ್ನಗಳಿಗೆ ಸರ್ಕಾರದಿಂದ ಸರಿಯಾದ ಮಾರುಕಟ್ಟೆ ಸೌಲಭ್ಯಗಳು ಮತ್ತು ಕನಿಷ್ಠ ಬೆಂಬಲ ಬೆಲೆ ದೊರೆತಲ್ಲಿ ರೈತರು ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದು ಇಲ್ಲದೇ ಹೋದಲ್ಲಿ ಕೃಷಿಯೆಡೆಗಿನ ಆಸಕ್ತಿ ಕಡಿಮೆಯಾಗುತ್ತದೆ.
ಸರ್ಕಾರ ಕೆಲವು ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಕೆಲವೊಂದು ಉತ್ಪನ್ನಗಳ ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ನಡುವೆ ಅಂತರ ಹೆಚ್ಚಾಗಿದೆ. ಹತಾಶೆಗೊಳಗಾಗುವ ರೈತರು ಬೆಳೆದು ನಿಂತಿರುವ ಕೃಷಿ ಉತ್ಪನ್ನಗಳನ್ನು ನಾಶ ಮಾಡುತ್ತಾರೆ ಹಾಗೂ ಮುಂದಿನ ಹಂತದ ಬೆಳೆಯ ಬಗ್ಗೆ ಅನಾಸಕ್ತಿ ತೋರುತ್ತಾರೆ. ರೈತರ ಆದಾಯ ದ್ವಿಗುಣಗೊಳಿಸಲು ಆಹಾರೋತ್ಪನ್ನಗಳ ಕೊಯ್ಲು ನಂತರದ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವುದು ಬಹುದೊಡ್ಡ ಸವಾಲಿನ ಸಂಗತಿಯಾಗಿದೆ.
ರೈತರು ಈ ಕೆಳಕಂಡ ಅಂಶಗಳನ್ನು ಅನುಸರಿಸಿದ್ದಲ್ಲಿ ಆದಾಯವನ್ನು ದ್ವಿಗುಣಗೊಳಿಸಲು ಸಹಕಾರಿಯಾಗುತ್ತದೆ:
 ವೈಜ್ಞಾನಿಕ ಸಮಗ್ರ ಕೃಷಿ ಪದ್ಧತಿಯನ್ನು ಅವರ ತಾಕುವಿನಲ್ಲಿ ಅಳವಡಿಸುವುದು.
 ಉತ್ತಮ ಬೆಲೆ ಸಿಗುವಂತಹ ಬೆಳೆಗಳನ್ನು ಬೆಳೆಯುವ ಜ್ಞಾನ ಮತ್ತು ಸಹಕಾರವನ್ನು ಪಡೆದುಕೊಳ್ಳುವುದು.
 ಮೂಲಸೌಕರ್ಯಗಳನ್ನು (ಶೇಖರಣೆ, ತಂಪು ಶೇಖರಣಾ ಘಟಕ, ಕೃಷಿ ಯಂತ್ರೋಪಕರಣಗಳು, ಪರಿಕರಗಳು ಇತ್ಯಾದಿ) ಪರಸ್ಪರ ವಿನಿಮಯ ಮಾಡಿಕೊಂಡು ಸದ್ಬಳಕೆ ಮಾಡುವುದು.
 ಖರೀದಿದಾರರೊಂದಿಗೆ ಉತ್ತಮ ಬೆಳೆ ಬೆಲೆಗಾಗಿ ಮಾತುಕತೆ ಮಾಡಿಕೊಳ್ಳುವುದು.
 ಕೃಷಿ ಪರಿಕರಗಳನ್ನು ಖರೀದಿ ಮಾಡುವಾಗ ಮಾರಾಟಗಾರರೊಂದಿಗೆ ಗುಣಮಟ್ಟದ ಪರಿಕರ ಮತ್ತು ಉತ್ತಮ ಬೆಲೆಗಾಗಿ ಮಾತುಕತೆ ಮಾಡಿಕೊಳ್ಳುವುದು.
 ರೈತರ ಉತ್ಪಾದನಾ ಸಂಸ್ಥೆಗಳನ್ನು ಸ್ಥಾಪಿಸಿ, ಇದರ ಮೂಲಕ ಕೃಷಿ ಪರಿಕರಗಳ ಖರೀದಿ ಮತ್ತು ಮಾರಾಟ ಹಾಗೂ ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವುದು
 ಮಣ್ಣು ಪರೀಕ್ಷೆ ಆಧಾರದ ಮೇಲೆ ಬೆಳೆಗಳಿಗೆ ಗೊಬ್ಬರಗಳನ್ನು ನೀಡುವುದು.
 ಹಸಿರು ಮನೆಗಳಲ್ಲಿ ಹೆಚ್ಚಿನ ಬೆಲೆಯುಳ್ಳ ಹಣ್ಣು ತರಕಾರಿಗಳು ಮತ್ತು ಬೇಸಾಯ ಮಾಡುವುದು
 ಸೂಕ್ಷ್ಮ ನೀರಾವರಿ ಹಾಗೂ ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬೇಕು.
 ಕೊಯ್ಲಿನ ನಂತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದು.

ಕೃಷಿ ಮತ್ತು ತೋಟಗಾರಿಕಾ ಮೇಳ – 2023 ರ ತಾಂತ್ರಿಕ ಸಮಾವೇಶ
ದಿನಾಂಕ 17.03.2023 ರಂದು ಕೃಷಿ ಮತ್ತು ತೋಟಗಾರಿಕಾ ಮೇಳ 2023 ರ ತಾಂತ್ರಿಕ ಸಮಾವೇಶದಲ್ಲಿ ಅಡಿಕೆ ಬೇಸಾಯ ಪದ್ಧತಿಗಳು, ಅಡಿಕೆ ಬೆಳೆಯಲ್ಲಿ ಸಮಗ್ರ ಬೆಳೆ ಸಂರಕ್ಷಣೆ, ಅಡಿಕೆಯಲ್ಲಿ ಬಹು ಬೆಳೆ ಪದ್ಧತಿ, ಅಡಿಕೆ ಮಾರುಕಟ್ಟೆ ಅವಕಾಶಗಳು ಮತ್ತು ಮೌಲ್ಯವರ್ಧನೆ, ತೋಟಗಾರಿಕಾ ಇಲಾಖೆಯ ಯೋಜನೆಗಳ ವಿಷಯದ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ.
ದಿನಾಂಕ 18.03.2023 ರಂದು ಕೃಷಿ ಮತ್ತು ತೋಟಗಾರಿಕಾ ಮೇಳ 2023 ರ ತಾಂತ್ರಿಕ ಸಮಾವೇಶದಲ್ಲಿ ಗೋಡಂಬಿ ಬೆಳೆಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಸಾಂಬಾರು ಬೆಳೆಗಳಲ್ಲಿ ಮೌಲ್ಯವರ್ಧನೆ, ಹಲಸು, ಬಾಳೆ ಹಾಗೂ ಅಡಿಕೆಯಲ್ಲಿ ಕೊಯ್ಲೋತ್ತÀರ ತಂತ್ರಜ್ಞಾನ ಹಾಗೂ ಮೌಲ್ಯವರ್ಧನೆ, ಕೃಷಿ ನವೋದ್ಯಮ ಮತ್ತು ಸೆಕೆಂಡರಿ ಕೃಷಿ, ಜೇನು ಕೃಷಿ ಮತ್ತು ಮೌಲ್ಯವರ್ಧನೆ, ತೋಟಗಾರಿಕೆ ನರ್ಸರಿ ಮತ್ತು ಮೌಲ್ಯವರ್ಧನೆ, ಕೃಷಿ ಇಲಾಖೆಯ ಕಾರ್ಯಕ್ರಮಗಳ ಕಿರುಪರಿಚಯದ ವಿಷಯದ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ.
ದಿನಾಂಕ 19.03.2023 ರಂದು ಕೃಷಿ ಮತ್ತು ತೋಟಗಾರಿಕಾ ಮೇಳ 2023 ರ ತಾಂತ್ರಿಕ ಸಮಾವೇಶದಲ್ಲಿ ಸಿರಿಧಾನ್ಯಗಳು ಆರೋಗ್ಯ ಮತ್ತು ಭವಿಷ್ಯದ ಬೆಳೆ, ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಆದಾಯಕ್ಕಾಗಿ ಸಮಗ್ರ ಕೃಷಿ ಪದ್ಧತಿಗಳು, ಸಿರಿಧಾನ್ಯಗಳ ಸಂರಕ್ಷಣೆ ಹಾಗೂ ಮೌಲ್ಯವರ್ಧನೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಮತ್ತು ಸಿರಿಧಾನ್ಯಗಳ ವೈವಿಧ್ಯತೆ ಮತ್ತು ಮಾರುಕಟ್ಟೆ ಅವಕಾಶಗಳು ವಿಷಯದ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ.

error: Content is protected !!