ಭಾರತದ ಸಂಶೋಧಕರಲ್ಲಿ ಅಗ್ರ 8ನೇ ಸ್ಥಾನ ಪಡೆದ ಡಾ. ಬಿ. ಜೆ. ಗಿರೀಶ್

ಶಂಕರಘಟ್ಟ, ಮಾ. 10: ಅಂತಾರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್‌ತಾಣವು ಬಿಡುಗಡೆಗೊಳಿಸಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿಯ ಡಾ. ಬಿ ಜೆ ಗಿರೀಶ್ ಭಾರತದಲ್ಲಿಯೇ ಅಗ್ರ ಎಂಟನೇ ಸ್ಥಾನ ಪಡೆದಿದ್ದಾರೆ.

ರಿಸಚ್ ಡಾಟ್ ಕಾಂ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುವ ಖ್ಯಾತ ತಾಣವಾಗಿದೆ. ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ವರದಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಭಾರತದ ಉತ್ತಮ ಸಂಶೋಧಕರ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ. 238 ಸಂಶೋಧನಾ ಲೇಖನ ಪ್ರಕಟಿಸಿದ್ದು, 6000ಕ್ಕೂ ಅಧಿಕ ಬಾರಿ ಅವು ಸಂಶೋಧಕರುಗಳಿಂದ ಮರು ಉಲ್ಲೇಖ, ಪರಾಮರ್ಶನ ಕಂಡಿವೆ. ಒಟ್ಟು ಡಿ-ಇಂಡೆಕ್ಸ್ನಲ್ಲಿ 43 ಅಂಕಗಳನ್ನು ಗಳಿಸಿದ್ದಾರೆ. ಜಾಗತಿಕವಾಗಿ 942ನೇ ಸ್ಥಾನದಲ್ಲಿರುವ ಅವರು ಭಾರತದ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ.

ಥರ್ಮೊಡೈನಾಮಿಕ್ಸ್, ಮೆಕ್ಯಾನಿಕ್ಸ್, ಶಾಖ ಪ್ರಸರಣೆ ವಿಷಯ ಮತ್ತು ಉಪವಿಷಯಗಳಲ್ಲಿನ ಅವರ ಸಂಶೋಧನಾ ಪ್ರಖರತೆಯನ್ನು ಗಮನಿಸಿ ಈ ಸ್ಥಾನವನ್ನು ನೀಡಿರುವುದಾಗಿ ರಿಸರ್ಚ್ ಡಾಟ್ ಕಾಂ ತಿಳಿಸಿದೆ. ಸಂಸ್ಥೆಯು ಸಂಶೋಧನೆಯ ಗುಣಮಟ್ಟ ಮತ್ತು ಪರಾಮರ್ಶನವನ್ನು ಗಮನಿಸಿ ರ‍್ಯಾಂಕಿಂಗ್ ಹಾಗೂ ಡಿ-ಇಂಡೆಕ್ಸ್ ನೀಡುತ್ತದೆ. ಕಳೆದ ಹಲವು ವರ್ಷಗಳಿಂದ ವಿವಿಯು ಸಂಶೋಧನೆಯಲ್ಲಿ ಉತ್ತಮ ಸಾಧನೆಗೈಯುತ್ತಿದ್ದು, ಡಾ. ಗಿರೀಶ್ ಬಿ ಜೆ ಸಾಧನೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿನಂದಿಸಿದ್ದಾರೆ.

error: Content is protected !!