ಶಿವಮೊಗ್ಗ, ಫೆಬ್ರವರಿ 23, : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಾಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ ಫೆ.26 ರಂದು 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಇರುವ ನೀರಿನ ಕಂದಾಯ ವಸೂಲಾತಿ ಮಾಡಲು ನಗರದ ಕೆಲ ಸ್ಥಳಗಳಲ್ಲಿ ವಿಶೇಷ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗುತ್ತದೆ.
ನೀರಿಯ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು.
ವಿಶೇಷ ವಸೂಲಾತಿ ಕೌಂಟರ್ಗಳನ್ನು ಕಿದ್ವಾಯಿ ಶಾಲೆ ಹತ್ತಿರ ಆರ್ಎಂಎಲ್ ನಗರ, ಗಾಯತ್ರಿ ವಿದ್ಯಾಲಯ ಹೆಚ್.ಸಿದ್ದಯ್ಯ ರಸ್ತೆ, ಪುರಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಶೋಕನಗರ ನಂದಿನಿ ಬೂತ್ ಪೆÇಲೀಸ್ ಕ್ವಾಟ್ರಸ್ ಹತ್ತಿರ, ವಿನೋಬನಗರ ಪೆÇಲೀಸ್ ಚೌಕಿ ಹತ್ತಿರ ಶಿವಮೊಗ್ಗ ಈ ಸ್ಥಳಗಳಲ್ಲಿ ತೆರೆಯಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಳ ಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.