ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಸವೋತೋಮುಖ ಬೆಳವಣಿಗೆಗೆ ಸೀಮಿತವಾಗಿರಬೇಕು. ಪುಸ್ತಕದ ಕಲಿಕೆಯಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ

ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಅಲ್ಲದೆ ಬಲಗಡೆ ಬ್ರೇನ ಹಾಗೂ ಎಡಗಡೆ ಬ್ರೇನ ಇವೆರಡು ಸೇರಿ ಹೊಂದಾಣಿಕೆಯಿಂದ ಹೊದರೆ ಮಾತ್ರ ವ್ಯಕ್ತಿ ವಿಕಸನ ಹೊಂದುತ್ತಾನೆ ಆದ್ದರಿಂದ ನಮ್ಮಲ್ಲಿರುವ ಎರಡು ಬ್ರೇನ್‌ಗಳು ಒಂದೆ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಹೊಂದಾಣಿಕೆಯಿಂದ ಹೊಗುವಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸುತ್ತಾ ಇಂದು ನಡೆದ ಸಂಸ್ಥಾಪಕರಾದ ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್‌ರವರ ಜನ್ಮದಿನಾಚರಣೆ ಹಾಗೂ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರಧಾನ ನೇರವೇರಿಸಿ ಮಾತನಾಡಿದರು.

ಚಾಣಾಕ್ಷತನ, ಸಮಯ ಸ್ಪೂರ್ತಿ, ಚುರುಕುತನ, ತಾಳ್ಮೆ ಇವೆಲ್ಲವನ್ನು ಬೇಡನ್ ಪೋವೆಲ್ ರವರಲ್ಲಿ ಕಾಣುತ್ತೇವೆ ಹಾಗೆ ತಾವು ಸಹ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ತಿಳಿಸುತ್ತಾ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳು ಹತ್ತಿರ ಬಂದಿದ್ದರಿಂದ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂದು ಕೆಲವೊಂದು ಸಲಹೆಗಳನ್ನು ಕೊಟ್ಟು ಚೆನ್ನಾಗಿ ಪರೀಕ್ಷೆಯನ್ನು ಎದುರಿಸುವಂತೆ ತಿಳಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶ ಶಾಸ್ತಿçಯವರು ವಿದ್ಯಾರ್ಥಿ ದೆಸೆಯಲ್ಲಿ ನಿರ್ದಿಷ್ಟ ಗುರಿಯತ್ತ ಗಮನಹರಿಸಬೇಕು. ಗುರಿ ಸಾಧನೆಗೆ ಶ್ರಮವಹಿಸಬೇಕು. ಕಳೆದು ಹೋದ ಸಮಯ ಮತ್ತೆ ಬಾರದು. ಯುವಜನತೆ ತಮ್ಮ ಸಾಮರ್ಥ್ಯ ಅರಿತು, ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ, ಬದುಕಿನ ಗುರಿ ಸಾಧನೆಗೆ ಬಳಸಿಕೊಳ್ಳಬೇಕು. ಜೀವನದಲ್ಲಿ ಕಷ್ಟುಪಟ್ಟು ಉನ್ನತ ಮಟ್ಟಕ್ಕೇರಿದ ಮಹನೀಯರ ಆದರ್ಶ, ಗುಣಗಳನ್ನು ಅನುಸರಿಸಬೇಕು ಎಂದು ನುಡಿದರು.
ಸಮಾರಂಭದ ಪ್ರಾಸ್ಥಾವಿಕವಾಗಿ ಸಂಸ್ಥಾಪಕರ ದಿನಾಚರಣೆ ಹಾಗೂ ಜಿಲ್ಲಾ ಪುರಸ್ಕಾರದ ಪ್ರಶಸ್ತಿ ಪ್ರಧಾನ ಮಾಡುವ ವಿಷಯವಾಗಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್ ರವರು ಸವಿಸ್ತಾರವಾಗಿ ತಿಳಿಸಿದರು. ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ನೇರವೇರಿಸಿದರು, ವಂದನೆಯನ್ನು ಜಿಲ್ಲಾ ಆಯುಕ್ತರು ಗೈಡ್ ಶಕುಂತಲಾ ಚಂದ್ರಶೇಖರ್ ರವರು ನೇರವೇರಿಸಿದರು ನಿರೂಪಣೆಯನ್ನು ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ ರವರು ನೇರವೇರಿಸಿದರು. ಶಿಬಿರದ ವರದಿಯನ್ನು ಹೆಚ್.ಶಿವಶಂಕರ್ ಎ.ಎಲ್.ಟಿ ರವರು ನೀಡಿದರು.
ಈ ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಪಿ.ಬಿಂದುಕುಮಾರ, ಜಿಲ್ಲಾ ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ರವರು, ಎಲ್.ಎ.ಕಾರ್ಯದರ್ಶಿಗಳಾದ ಎ.ವಿ.ರಾಜೇಶ, ಎ.ಎಸ್.ಮಂಜುನಾಥ, ಆರ್.ಟಿ.ಶೇಖರಪ್ಪ, ಆರ್.ವೆಂಕಟೇಶ ಸ್ಕೌರ‍್ಸ್ ಗೈರ‍್ಸ್ ಗಳು ಹಾಗೂ ಒಟ್ಟು ೪೦೦ ಕಬ್, ಬುಲ್‌ಬುಲ್, ಸ್ಕೌಟ್ಸ್, ಗೈಡ್ಸ್ ಗಳು ಹಾಜರಿದ್ದರು.

error: Content is protected !!