ಮ್ಯಾರಥಾನ್ ಹಾಗೂ ಫ್ಯಾಷನ್ ಶೋ ಸ್ಪರ್ಧೆ
ಶಿವಮೊಗ್ಗ: ಸ್ಟೆಪ್ ಹೋಲ್ಡರ್ಸ್ ಡ್ಯಾನ್ರಸ ಸ್ಟುಡಿಯೋ ಶಿವಮೊಗ್ಗ , ರೌಂಡ್ ಟೇಬಲ್ ಶಿವಮೊಗ್ಗ ಘಟಕ ಹಾಗೂ ಸರ್ಜಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗಷ್ಟೇ ಅಕಾಲಿಕ ಮರಣ ಹೊಂದಿದ ಖ್ಯಾತ ಯುವ ಉದ್ಯಮಿ ಶರತ್ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಮಕ್ಕಳ ತಜ್ಞರಾಗಿದ್ದ ಡಾ.ಹೆಚ್.ಎಸ್. ಸತೀಶ್ ಅವರ ಸ್ಮರಣಾರ್ಥ ಭಾನುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಹಲವಾರು ಸ್ಪರ್ಧೆಗಳು ನಡೆದವು.
ಬೆಳಿಗ್ಗೆ ಶಿವಮೊಗ್ಗ ರನ್ ಹೆಸರಿನಲ್ಲಿ 4 ಕಿ.ಮೀ. ಮ್ಯಾರಥಾನ್ಗೆ ಶಿವಮೊಗ್ಗ ರೌಂಡ್ ಟೇಬಲ್ -166 ಘಟಕದ ಚೇರ್ಮನ್ ಆದ ಟಿ.ಆರ್. ಕಾರ್ತೀಕ್ ಸಿ.ಎಸ್. ಅವರು ಚಾಲನೆ ನೀಡಿದರು.
ಮ್ಯಾರಥಾನ್ ಜೈಲ್ ಗೇಟ್ನಿಂದ ಆರಂಭಗೊಂಡು ಉಷಾ ನರ್ಸಿಂಗ್ ಹೋಂ, ನೆಹರೂ ಸ್ಟೇಡಿಯಂ ಸರ್ಕಲ್, ನಂತರ ಜೈಲ್ ಸರ್ಕಲ್ ಮಾರ್ಗವಾಗಿ ಮರಳಿ ಫ್ರೀಡಂ ಪಾರ್ಕ್ ಸೇರಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರು ವಿಭಾಗದಲ್ಲಿ ನಡೆದ ಮ್ಯಾರಥಾನ್ನಲ್ಲಿ 300 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶರತ್ ಭೂಪಾಳಂ ಭಾವಚಿತ್ರದ ಟೀ ಶರ್ಟ್ನ್ನು ನೀಡಲಾಯಿತು. ಮ್ಯಾರಥಾನ್ ಕಾರ್ಯಕ್ರಮಸ ಉಸ್ತುವಾರಿಯನ್ನು ಸಂಪೂರ್ಣವಾಗಿ ರೌಂಡ್ ಟೇಬಲ್ ಶಿವಮೊಗ್ಗ ಘಟಕ ವಹಿಸಿಕೊಂಡಿತ್ತು. ಮ್ಯಾರಥಾನ್ ವಿಜೇತರಿಗೆ ಪ್ರಶಸ್ತಿಪತ್ರ, ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಮ್ಯಾರಥಾನ್ನಲ್ಲಿ ಶಿವಮೊಗ್ಗ ಸ್ಟೆಪ್ ಹೋಲ್ಡರ್ಸ್ ಡ್ಯಾನ್ಸ್ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ರಾಜ್ ಶೆಟ್ಟಿ, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಚೇರ್ಮನ್ ನಿತಿನ್, ಶಿವಮೊಗ್ಗ ಫಾರ್ಟಿ ಒನ್ನರ್ಸ್ ಚೇರ್ಮನ್ ರೋಹನ್ ಗುತ್ತಿ, ಸ್ಕಲ್ ಫಿಟ್ನೆಸ್ ಜಿಮ್ನ ರಂಜಿತ್, ಯುವ ಮುಖಂಡ ಮಾಲತೇಶ್, ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಟ್ರಸ್ಟಿಗಳಾದ ನಮಿತಾ ಸರ್ಜಿ, ಈಶ್ವರ್ ಸರ್ಜಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾ.ರಜತ್ ಮತ್ತಿತರರು ಭಾಗವಹಿಸಿದ್ದರು.
ಮಧ್ಯಾಹ್ನ 2 ರಿಂದ ಶಿವಮೊಗ್ಗ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸತ್ರೆ ಹಾಗೂ ಫೌಂಡೇಶನ್ ವತಿಯಿಂದ ಮಧ್ಯಾಹ್ನ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಮಕ್ಕಳ ತಜ್ಞರಾಗಿದ್ದ ಡಾ.ಹೆಚ್.ಎಸ್. ಸತೀಶ್ ಅವರ ಸ್ಮರಣಾರ್ಥ ಮಕ್ಕಳಿಗೆ ಫ್ಯಾಷನ್ ಶೋ ನಡೆಯಿತು.
3 ರಿಂದ 5ವರ್ಷದವರಿಗೆ ಲಿಟಲ್ ಪ್ರಿನ್ಸ್ ಆಫ್ ಶಿವಮೊಗ್ಗ ವಿನ್ನರ್ ಯುವಿನ್, ರನ್ನರ್ ರಾಘವ್, ಲಿಟಲ್ ಪ್ರಿನ್ಸಸ್ ವಿಭಾಗದಲ್ಲಿ ವೈದೇಹಿ ವಿನ್ನರ್ ಲಿಟಲ್ ಪ್ರಿನ್ಸಸ್ ಆಫ್ ಶಿವಮೊಗ್ಗ , ನಿಧಿ ಆರ್. ರನ್ನರ್, 6 ರಿಂದ 11 ವರ್ಷದ ವಿಭಾಗದಲ್ಲಿ ಲಿಟಲ್ ಪ್ರಿನ್ಸ್ ಆಫ್ ಶಿವಮೊಗ್ಗ ವಿನ್ನರ್ ಆರ್ಯನ್ ಖಾನ್, ರನ್ನರ್ ಆಗಿ ಆಯುಷ್ ರಂಗದೋಳ್ , ಪ್ರಿನ್ಸಸ್ ವಿಭಾಗದಲ್ಲಿ ನಿಹಾರಿಕಾ ಆರ್ ವಿನ್ನರ್, ಲಹರಿ ರನ್ನರ್ ಹಾಗೂ 11 ರಿಂದ 15 ವರ್ಷದವರ ವಿಭಾಗದಲ್ಲಿ ಲಿಟಲ್ ಪ್ರಿನ್ಸ್ ವಿನ್ನರ್ ಆಗಿ ನೀರಜ್ ಆರ್, ಶಶಾಂಕ್ ರನ್ನರ್, ಪ್ರಿನ್ಸಸ್ ವಿಭಾಗದಲ್ಲಿ ವಿನ್ನರ್ ಆಗಿ ಇಂಚಾ ಜೈನ್, ರಿದ್ದಿ ಜೈನ್ ರನ್ನರ್ ಬಹುಮಾನ ವಿತರಿಸಲಾಯಿತು. ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ನಮಿತಾ ಸರ್ಜಿ, ಅರುಣೋದಯ ಶಾಲೆಯ ಮುಖ್ಯಸ್ಥರಾದ ಮಂಜುಳಾ ಅವರು ತೀರ್ಪುಗಾರಾಗಿ ಭಾಗವಹಿಸಿದ್ದರು.