ಶಿವಮೊಗ್ಗ: ಮಕ್ಕಳಿಗೆ ಬಾಲ್ಯದಿಂದ ಹಾಗೂ ಶೈಕ್ಷಣಿಕ ಹಂತದಿಂದಲೇ ರಾಷ್ಟ್ರ ಪ್ರೇಮದ ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಫ್ರೆಂಡ್ ಸೆಂಟರ್ ಅಧ್ಯಕ್ಷ ನಾಗರಾಜ್ ಹೇಳಿದರು.
ವಿನೋಬನಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫ್ರೆಂಡ್ಸ್ ಸೆಂಟರ್ ರಕ್ತ ಮತ್ತು ನೇತ್ರ ಬಂಡಾರ, ಶಿವಮೊಗ್ಗ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಂಡ್ ಸೆಟ್ ಕೊಡುಗೆ ಮತ್ತು ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳಲ್ಲಿ ಎಲ್ಲ ಪ್ರತಿಭೆ ಇರುತ್ತದೆ. ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳು ನಮ್ಮ ದೇಶದ ಆಸ್ತಿ. ಎಲ್ಲಾ ಮಕ್ಕಳಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ ಮತ್ತು ಸದ್ಭಾವನೆ ಶಿಸ್ತಿನ ಅರಿವು ಅಗತ್ಯ. ರಾಷ್ಟ್ರೀಯತೆಯ ಮಹತ್ವದ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾದ ವಲ್ಲಭಭಾಯಿ ಪಟೇಲ್ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವಿವರಿಸಿದರು. ನೆರವು ನೀಡಲು ಬಯಸುವ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಹಾಯ ಮಾಡಬೇಕು. ಈ ಬ್ಯಾಂಡ್ ಸೆಟ್ ಮುಖಾಂತರ ಮಕ್ಕಳಲ್ಲಿ ಚಟುವಟಿಕೆ ಆತ್ಮಸ್ಥೈರ್ಯ ಹೆಚ್ಚಬೇಕು. ಸರ್ಕಾರಿ ಶಾಲೆಯಲ್ಲಿ ಓದುವುದರ ಮೂಲಕ ಉತ್ತಮ ಅಂಕಗಳಿಸುವುದರೊಂದಿಗೆ ಎಲ್ಲಾ ಕ್ಷೇತ್ರದಲ್ಲೂ ದೇಶಕ್ಕೆ ಮಾದರಿಯಾಗಲಿ ಮತ್ತು ದಾನ ನೀಡಿದ ವಸ್ತುಗಳ ಸದ್ಭಳಕೆಯಾಗಬೇಕು ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗೋಪಾಲಕೃಷ್ಣ, ನಿರ್ದೇಶಕರಾದ ವಿಜಯಕುಮಾರ್, ರವೀಂದ್ರನಾಥ ಐತಾಳ್, ಮಹಿಳಾ ಅಧ್ಯಕ್ಷೆ ಲತಾ ರಮೇಶ್, ರಂಜಿನಿ ದತ್ತಾತ್ರಿ, ಡಿ.ಪಿ.ಮೋಹನ್, ಸುನಿತಾ ಮೋಹನ್, ಆಡಿಟರ್ ಲೋಕೇಶ್, ಮಂಜುಳಾ, ಗುರುನಾಥ, ವೀಣಾ ಗುರುನಾಥ, ಸತ್ಯನಾರಾಯಣ, ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮುಖ್ಯಶಿಕ್ಷಕಿ ಪಾರ್ವತಮ್ಮ, ವಿ.ನಾಗರಾಜ್ ಮತ್ತು ಇತರ ಸದಸ್ಯರು ಹಾಜರಿದ್ದರು.

error: Content is protected !!