*ಜಿಲ್ಲೆಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ*
ಹಿರಿಯರು ಮತ್ತು ಸಾಧಕ ಪತ್ರಕರ್ತರನ್ನು ಗುರುತಿಸಿ, ಕರ್ನಾಟಕ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿಗಳ ಸಾಲಿನಲ್ಲಿ, ಶಿವಮೊಗ್ಗ ಜಿಲ್ಲೆ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ, ಹದಿಮೂರು ಪತ್ರಕತ೯ರಿಗೆ ಪ್ರಶಸ್ತಿ ಪ್ರಕಟಿಸಿದೆ..
ಶಿವಮೊಗ್ಗದ ಹಿರಿಯ ಪತ್ರಕರ್ತರಾದ *ಸಿ.ರುದ್ರಪ್ಪ,* *ಭಂಡಿಗಡಿ ನಂಜುಂಡಪ್ಪ* ( ವಾಯ್ಸ್ ಆಫ್ ಶಿವಮೊಗ್ಗ), *ಹುಲಿಮನೆ ತಿಮ್ಮಪ್ಪ* (ಸಂಯುಕ್ತ ಕರ್ನಾಟಕ), *ಶಾಂತಕುಮಾರ್ ಎನ್.ಡಿ.* (ವಿಜಯವಾಣಿ), *ವೆಂಕಟೇಶ್* (ಪ್ರಜಾವಾಣಿ), *ಡಿ. ಪಿ. ಸತೀಶ್* ( ನ್ಯೂಸ್ 18), *ವಿ. ಎಸ್. ಸುಬ್ರಹ್ಮಣ್ಯ* (ಪ್ರಜಾವಾಣಿ), *ಅರವಿಂದ ಆಕ್ಲಾಪುರ* (ವಿಜಯವಾಣಿ) *ಹೊನ್ನಾಳಿ ಚಂದ್ರಶೇಖರ್* (ಕನ್ನಡ ಮೀಡಿಯಂ), *ನಾಗರಾಜ ನೇರಿಗೆ* (ಕ್ರಾಂತಿದೀಪ),
*ರಾಮಸ್ವಾಮಿ ಹುಲಕೋಡು* ( ವಿಸ್ತಾರ ಟೀವಿ), *ದೀಪಕ್ ಸಾಗರ್* (ವಿಜಯವಾಣಿ) ಅವರುಗಳು ವಾರ್ಷಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
2020,ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಯಾಗಿ
“ಆಂದೋಲನ ಪ್ರಶಸ್ತಿ ” ಯು *”ನಾವಿಕ”* ದಿನಪತ್ರಿಕೆಯ ಮುಡಿಗೇರಿದೆ.
ಪ್ರಶಸ್ತಿಗೆ ಭಾಜನರಾದ ಈ ಎಲ್ಲಾ ಪತ್ರಕರ್ತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷರೂ, ಕನಾ೯ಟಕ ಮಾಧ್ಯಮ ಅಕಾಡೆಮಿ ಸದಸ್ಯರೂ ಆದ *ಕೆ. ವಿ. ಶಿವಕುಮಾರ್*, ಪ್ರಧಾನ ಕಾಯ೯ದಶಿ೯ *ವಿ. ಟಿ. ಅರುಣ್*, ರಾಜ್ಯ ಸಮಿತಿ ನಿದೇ೯ಶಕ *ಎನ್. ರವಿಕುಮಾರ್* ಹಾಗೂ ಪದಾಧಿಕಾರಿಗಳು, ಕಾಯ೯ಕಾರಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ..
ಪ್ರಶಸ್ತಿ ಘೋಷಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ *ಸದಾಶಿವ ಶೆಣೈ*,ಕಾರ್ಯದರ್ಶಿ *ಶ್ರೀಮತಿ ರೂಪ* ಮತ್ತು ಎಲ್ಲಾ ಸದಸ್ಯರುಗಳಿಗೆ ಕನಾ೯ಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಹೃತ್ಪೂವ೯ಕ ಧನ್ಯವಾದಗಳನ್ನು ಸಲ್ಲಿಸುತ್ತದೆ.