ಶಿವಮೊಗ್ಗ: PACS ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ & ಖಾಸಗಿ ರಸಗೊಬ್ಬರ ಮಾರಾಟಗಾರರ ತರಬೇತಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ
ಶ್ರೀಮತಿ ಜಿಸಿ ಪೂರ್ಣಿಮಾ, ಜಂಟಿ ಕೃಷಿ ನಿರ್ದೇಶಕರು ಸರಿಯಾದ ಸಮಯದಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ರೈತರಿಗೆ ಗುಣಮಟ್ಟದ ಪೂರೈಕೆ ಕುರಿತು ಹೇಳಿದರು.ಹೊಸ ತಂತ್ರಜ್ಞಾನ ನಾನೋ ಯೂರಿಯಾ ಹೆಚ್ಚು ಬಳಸಲು ಸೂಚಿಸಿದರು.
ಶ್ರೀ ವಾಸುದೇವ್ ಜಿ, ಸಹಕಾರ ಸಂಘಗಳ ಉಪನಿಬಂದಕರು ಮಾತನಾಡಿ ಸಂಘಗಳು ರಸಗೊಬ್ಬರ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿ ನೆಡೆಸಬೇಕೆಂದರು.
ಡಾ.ಸಿ ನಾರಾಯಣಸ್ವಾಮಿ, ರಾಜ್ಯ ಮಾರಾಟ ವ್ಯವಸ್ಥಾಪಕರು, ಇಫ್ಕೋ ಬೆಂಗಳೂರು ರಸಗೊಬ್ಬರ ಮಾರಾಟಗಾರರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ನ್ಯಾನೋ ಯೂರಿಯಾ ಬಳಕೆಯಿಂದ ಶೇ.50% ಸಾಂಪ್ರದಾಯಕ ಯೂರಿಯಾ ಬಳಕೆಯನ್ನು ಕಡಿಮೆ ಮಾಡಬಹುದು ಎಂದರು. ನ್ಯಾನೋ ಯೂರಿಯಾ ಬಳಕೆಯಿಂದ ಭೂಮಿಯ ಆರೋಗ್ಯ ಕಾಪಡುವುದಲ್ಲದೆ, ಶೇ.8 ರಷ್ಟು ಇಳುವರಿ ಹೆಚ್ಚು ಪಡೆಯಬಹುದಾಗಿದೆ.

ಡಾ.ಸರ್ವಜ್ಞ ಸಾಲಿಮಠ, ಹಿರಿಯ ವಿಜ್ಞಾನಿ, ಕೃಷಿ-ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಮಾತನಾಡಿ ಸಮಗ್ರ ಪೋಷಕ ನಿರ್ವಹಣೆ ಹಾಗೂ ಕೃಷಿಯಲ್ಲಿ ಉಪಯೋಗಿಸುವ ಪರಿಕರಗಳ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯನ್ನು
ಒದಗಿಸಲು ಮಾರಾಟಗಾರರ ತರಬೇತಿ ಅವಶ್ಯಕ ಎಂದರು.

ಇಫ್ಕೋ ಶಿವಮೊಗ್ಗ ಸಹಾಯಕ ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ ಬಿ ಎಲ್ ರಾಜು ಅವರು
ನ್ಯಾನೊ ಯೂರಿಯಾ ಬಳಕೆ, ವಿಶೇಷ ರಸಗೊಬ್ಬರಗಳು ಬಗ್ಗೆ ವಿವರವಾದ ಪ್ರಸ್ತುತಿ ಮಂಡಿಸಿದರು.ನಂತರ ವಿಜ್ಞಾನಿಗಳು ಹಾಗೂ ಇಫ್ಕೋ ಸಂಸ್ಥೆ ಅಧಿಕಾರಿಗಳೊಂದಿಗೆ ಸಂವಾದವನ್ನು ನಡೆಸಲಾಯಿತು ಕಾರ್ಯಕ್ರಮದಲ್ಲಿ
ಸುಮಾರು 120 ಸಿಇಒಗಳು ಮತ್ತು ಮಾರಾಟಗಾರರು ಭಾಗವಹಿಸಿದ್ದರು.

error: Content is protected !!