ಶಿವಮೊಗ್ಗ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಕಳೆದ 10 ವರ್ಷಗಳಿಂದ ಶಿವಮೊಗ್ಗ ಸೇರಿದಂತೆ ನೆರೆಯ ಜಿಲ್ಲೆಯ ಜನತೆಗೆ ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಎಲ್ಲಾ ವಿಭಾಗಗಳಲ್ಲಿಯೂ ಒದಗಿಸುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಸುಸಜ್ಜಿತ ಮತ್ತು ಸುವ್ಯವಸ್ಥಿತವಾದ ಸಂಪೂರ್ಣ ಕ್ಯಾನ್ಸರ್ ಆರೈಕೆ ಕೇಂದ್ರವನ್ನು ಕೆಳಗಿನ ಸೌಲಭ್ಯಗಳೊಂದಿಗೆ ಅತೀ ಶೀಘ್ರದಲ್ಲಿ ಪ್ರಾರಂಭಗೊಳ್ಳುತ್ತಿದೆ.
ಈ ಕ್ಯಾನ್ಸರ್ ಕೇಂದ್ರವು ರೇಡಿಯೇಷನ್, ಸಿಟಿ ಪ್ಲ್ಯಾನರ್, ಬ್ರಾಕಿ ಥೆರಪಿ, ಮ್ಯಾಮೊಗ್ರಫಿ ಸೌಲಭ್ಯಗಳ ಜೊತೆಗೆ ಮೆಡಿಕಲ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ರೆಡಿಯೇಷನ್ ಥೆರಪಿ, ಪೈನ್ & ಪ್ಯಾಲಿವೆಟಿವ್ ಹಾಗೂ ಆಂಕೋಪೆಥಾಲಜಿ ವಿಭಾಗದೊಂದಿಗೆ ನುರಿತ ಅನುಭವಿ ತಜ್ಞ ವೈದ್ಯರೊಂದಿಗೆ ಸೇವೆಗೆ ಸಜ್ಜಾಗುತ್ತಿದೆ. ಕ್ಯಾನ್ಸರ್‍ನಂತಹ ಮಾರಕ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ 2, 3 ಮತ್ತು ಅಂತಿಮ ಹಂತದಲ್ಲಿರುವ ರೋಗಿಗಳಿಗೂ ಸಹ ಉತ್ತಮ ದರ್ಜೆಯ ಸೇವೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಆಸ್ಪತ್ರೆಯ ಉದ್ದೇಶವಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್ ತಿಳಿಸಿದ್ದಾರೆ.
ಆಸ್ಪತ್ರೆಯ ವಿಶಾಲವಾದ ಸ್ಥಳಾವಕಾಶದಲ್ಲಿ ಇದೇ ತಿಂಗಳು 8ನೇ ತಾರೀಖು ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಶ್ರೀಯುತ ಬಿ.ವೈ ರಾಘವೇಂದ್ರರವರು ನೂತನ ಕಟ್ಟಡದ ಗುದ್ದಲಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ಸಮೂಹದ ರಿಜಿನಲ್ ಡೈರೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಟ್ಟಡವು ಶೀಘ್ರದಲ್ಲಿ ಪ್ರಾರಂಭಗೊಂಡು ಮುಂದಿನ 5 ರಿಂದ 6 ತಿಂಗಳುಗಳೊಳಗೆ ಸೇವೆಗೆ ಸಜ್ಜಾಗಲಿದೆ ಎಂದು ಮಾರ್ಕೇಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀಯುತ ರಾಜಾಸಿಂಗ್ ರವರು ತಿಳಿಸಿದರು.
ಇದೇ ಶುಭದಿನದಂದು ಶಿವಮೊಗ್ಗ ವೈದ್ಯಕೀಯ ಮೆಡಿಕಲ್ ಕಾಲೇಜಿನ ಸ್ತ್ರೀ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರು, ಶಿವಮೊಗ್ಗದ ಈಔಉSI ಯ ಅಧ್ಯಕ್ಷರಾದ ಶ್ರೀಯುತ ಡಾ|| ಲೆಪಾಕ್ಷಿಯವರು ಮ್ಯಾಮೊಗ್ರಫಿ ಘಟಕಕ್ಕೆ ಚಾಲನೆ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಆಸ್ಪತ್ರೆಯ ಎಲ್ಲಾ ವಿಭಾಗದ ವೈದ್ಯರುಗಳು, ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಪಾಲ್ಗೊಳ್ಳುವರು.