ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ , ಎಜುರೈಟ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಸಂಕಲ್ಪ ಫೌಂಡೇಶನ್ (ರಿ). ಹಾಗೂ ಜಾಗೃತಿ ಯುವಕರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ.ಸುರೇಶ್.ಎಚ್. ಎಮ್. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ.ಜಿ.ಕೌ.ಅ.ಇ..ಶಿವಮೊಗ್ಗ ಇವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿಧ್ಯಾರ್ಥಿಗಳಿಗೆ ಇವತ್ತು ಶಿಕ್ಷಣಕ್ಕೆ ಅಷ್ಟೇ ಬೆಲೆಯಲ್ಲ ಶಿಕ್ಷಣದ ಜೊತೆಗೆ ಕೌಶಲ್ಯ ಬಹಳ ಪ್ರಾಮುಖ್ಯತೆ ಇದೆ ಎಂದು ವಿಧ್ಯಾರ್ಥಿಗಳ ಗಮನಕ್ಕೆ ತಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ. ಮಲಪ್ಪ ಕೆ. ತೊಡಲಬಗಿ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತಿ, ಶಿವಮೊಗ್ಗ ಇವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕಾದರೆ ಧನಾತ್ಮಕ ಚಿಂತನೆ ಮತ್ತು ದೃಢ ನಿರ್ಧಾರ ಕಠಿಣ ಪರಿಶ್ರಮ ನಿರಂತರ ಪ್ರಯತ್ನ ಮಾಡಿದರೆ ಗುರಿ ತಲುಪಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ.ಸರೋಜ ಅವರು ತಾವು ಬಡತನ ಕುಟುಂಬದಿಂದ ಬೆಳೆದು ಬಂದು ಸ್ವಯಂ ಉದ್ಯೋಗವನ್ನು ಪ್ರಾರಂಬಿಸುವುದರ ಮೂಲಕ ಹತ್ತಾರು ಕುಟುಂಬಗಳಿಗೆ ಉದ್ಯೋಗವನ್ನು ನೀಡುವುದರ ಮೂಲಕ ಅವರು ಬೆಳೆದು ಬಂದ ಹಾದಿಯ ಬಗ್ಗೆ ವಿದ್ಯಾಥಿ೯ಗಳಿಗೆ ತಿಳಿಸಿದರು.

ಡಾ.ಆರ್.ಶಂಕರ್ ನಾರಾಯಣ.ಪ್ರಾಂಶುಪಾಲರು, ಎಜುರೈಟ್ ಕಾಲೇಜು ಇವರು ಅಧ್ಯಕ್ಷತೆಯ ನುಡಿಯಲ್ಲಿ ನಮ್ಮ ಕಾಲೇಜಿನ ವಿದ್ಯಾಥಿ೯ಗಳಿಗೆ ಇವತ್ತು ಈ ವಿಶೇಷವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಧ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ. ಉಲ್ಲಾಸ್ ಕೆ.ಟಿ.ಕೆ. ಜಿಲ್ಲಾ ಯುವ ಅಧಿಕಾರಿಗಳು‌, ನೆಹರು ಯುವ ಕೇಂದ್ರ ಶಿವಮೊಗ್ಗ.ಎನ್.ವೈ.ಕೆ. ಸ್ವಯಂ ಸೇವಕರು ಉಪಸ್ಥಿತರಿದ್ದರು.

ಕಾಯ೯ಕ್ರಮದಲ್ಲಿ ಪ್ರಮುಖವಾಗಿ ವಿದ್ಯಾಥಿ೯ಗಳಿಗಾಗಿ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದ್ದು, ಗೋಷ್ಠಿಯಲ್ಲಿ ನುರಿತ ಸಂಪನ್ಮೂಲವ್ಯಕ್ತಿಗಳು ಆಗಮಿಸಿ ಎಲ್ಲಾ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಶ್ರೀ.ಮಲ್ಲೇಶ್‌, ಉಪನ್ಯಾಸಕರು. ಜೆ.ಎನ್.ಸಿ. ಇ ಕಾಲೇಜು ಶಿವಮೊಗ್ಗ.ಸ್ವಾವಲಂಭಿ ಬದುಕಿಗೆ ಸ್ವಯಂ ಉದ್ಯೋಗದ ಬಗ್ಗೆ,ಶ್ರೀ ಸಮನ್ವಯಕಾಶಿ. ಅಭಿಯಾನ ವ್ಯವಸ್ಥಾಪಕರು, ಕೌಶಲ್ಯಾಭಿವೃದ್ಧಿ ಇಲಾಖೆ,ಶಿವಮೊಗ್ಗ, ಬದುಕು ಸುಂದರವಾಗಿದೆ ಎಂಬ ವಿಷಯದ ಬಗ್ಗೆ, ಮನೋತಜ್ಞರಾದ ಡಾ..ಅರವಿಂದ್‌ ತಿಮ್ಮಯ್ಯರವರು ನೆನಪಿನ ಶಕ್ತಿಯ ತಂತ್ರಗಳ ಬಗ್ಗೆ, ತರಬೇತುದಾರರಾದ ಶ್ರಿ. ಯಶಸ್ ಜಿ. ಎ. ರವರು ಸ್ಮಧಾ೯ತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಮಾತನಾಡಿದರು. .

error: Content is protected !!