ಶಿವಮೊಗ್ಗ: ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಸರ್ಕಾರದ ಯೋಜನೆಗಳು ಫಲಪ್ರದವಾಗಿ ಸಾರ್ವಜನಿಕರಿಗೆ ತಲುಪಿ ಯೋಜನೆ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್ ಹೇಳಿದರು.
ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿ ಕುಟುಂಬ ಮಿಲನ ಹಾಗೂ ಸಾಂಸ್ಕೃತಿಕ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಡಾವಣೆಗಳಲ್ಲಿ ಪಾರ್ಕ್ ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕರ ಮಾರ್ಗದರ್ಶನ, ಸಹಕಾರ ಹಾಗೂ ಸಲಹೆ ಅಗತ್ಯವಾಗಿದೆ. ಸರ್ಕಾರದ ಅನುದಾನ ಸದ್ವಿನಿಯೋಗವಾಗಲಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ ಮಾತನಾಡಿ, ಎಲ್‌ಬಿಎಸ್ ನಗರ ಬಡಾವಣೆಯ ಅಭಿವೃದ್ಧಿಗೆ ಸಂಪೂರ್ಣ ಪ್ರಯತ್ನ ನಡೆಸಿದ್ದು, ನಗರದಲ್ಲಿ ಸುಂದರ ಬಡಾವಣೆಯಾಗಿ ರೂಪುಗೊಳ್ಳುತ್ತಿದೆ. ಗ್ರಾಮಾಂತರ ಕ್ಷೇತ್ರವ್ಯಾಪ್ತಿಯಲ್ಲಿ ಅಶೋಕನಾಯ್ಕ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಯೂತ್ ಹಾಸ್ಟೆಲ್ ಸಹಕಾರದಿಂದ ಆಯೋಜಿಸಿದ್ದ ಬೆಳದಿಂಗಳ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಕಲಾವಿದ ಜಿ.ವಿಜಯ್‌ಕುಮಾರ್ ಅವರನ್ನು ಸನ್ಮಾನಿಸಿದರು.
ಎಲ್ ಬಿ ಎಸ್ ನಗರ ಪಾರ್ಕ್ ಸಮಿತಿ ಅಧ್ಯಕ್ಷ ಸಿ.ಪಿ.ವೀರಣ್ಣ ಮಾತನಾಡಿ, ಬಡಾವಣೆ ನಿವಾಸಿಗಳ ಪರಸ್ಪರ ಓಡನಾಟ, ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಕಲಾವಿದ ಜಿ.ವಿಜಯ್‌ಕುಮಾರ್ ಅವರು ಹಾಸ್ಯಗೀತೆ, ಕನ್ನಡ ಹಳೇ ಚಿತ್ರಗೀತೆಗಳನ್ನು ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು.
ಪ್ರಮುಖರಾದ ಮಹಾಬಲೇಶ್ವರ ಹೆಗಡೆ, ರಾಜೇಂದ್ರ ಪ್ರಸಾದ್, ರಾಜೀವ್ ಪಾಂಡುರಂಗಿ, ನಾಗರಾಜ್, ಮಂಜುನಾಥ್, ಡಾ. ರಾಜೇಂದ್ರ, ಗೋಪಾಲ್, ಯೂತ್ ಹಾಸ್ಟೆಲ್ ಅಸೊಸಿಯೆಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೀಶ್, ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ನಿರ್ದೇಶಕರಾದ ಮಲ್ಲಿಕಾರ್ಜುನ ಕಾನೂರ್, ಮಮತ, ಸುರೇಖಾ ಮತ್ತು ಎಲ್ ಬಿ ಎಸ್ ನಗರದ ನಿವಾಸಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

error: Content is protected !!