” ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಗೋಮಾತೆಗೆ ಒಣ ಹುಲ್ಲನ್ನು ಸಮರ್ಪಣೆ “

ಜನವರಿ : 26 : ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿರುವ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ಸೇವೆಯಾಗಿ ಸಾಗರ ತಾಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಭಕ್ತರು ನೀಡಿದ್ದ ಒಣ ಹುಲ್ಲನ್ನು ಇಂದು ಮಾಧ್ಯಹ್ನ 12 -00 ಗಂಟೆಗೆ ಸರಿಯಾಗಿ ಗೋಪೂಜೆ ಹಾಗು ಗೋಮಾತೆಗೆ ಒಣ ಹುಲ್ಲನ್ನು ಸಮರ್ಪಣೆ ಮಾಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು .

ರಾಜ್ಯದ ಬೆಂಗಳೂರು , ಹಾಸನ , ಮೈಸೂರು , ಹುಬ್ಬಳ್ಳಿ , ಧಾರವಾಡ , ಶಿವಮೊಗ್ಗ , ಶಿಕಾರಿಪುರ ಹಾಗು ಇನ್ನಿತರೇ ಪ್ರದೇಶಗಳಿಂದ ಆನ್ ಲೈನ್ ಮೂಲಕ ಹಣ ಸಂದಾಯ ಮಾಡಿ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ತೆಗೆದುಕೊಳ್ಳಲು ಸೇವೆಯಾಗಿ ನೀಡಿದ್ದಾರೆ ಹಾಗು ಸಾಗರ ತಾಲ್ಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಮೂನ್ನೂರುಕ್ಕೂ ಹೆಚ್ಚು ಭಕ್ತರು ಹಾಗು ಶಿಕಾರಿಪುರದ ಭಕ್ತರು ಒಣ ಹುಲ್ಲನ್ನು ಸೇವೆಯಾಗಿ ಹುಲ್ಲಿನ ರೂಪದಲ್ಲಿ ನೀಡಿದ್ದಾರೆ ಎಂದು ದೇವಾಲಯದ ಧರ್ಮ ದರ್ಶಿಗಳಾದ ಸಿ.ಎಂ. ನಾರಾಯಣ ಶಾಸ್ತ್ರೀ ನುಡಿದರು .

ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಭಟ್ ಅವರು ಶ್ರೀ ಉಮಾಮಹೇಶ್ವರ ನ ಸನ್ನಿಧಾನದಲ್ಲಿ ಆನ್ ಲೈನ್ ಮೂಲಕ ಹಣ ಸಂದಾಯ ಮಾಡಿರುವ ಹಾಗು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಮೂನ್ನೂರುಕ್ಕೂ ಹೆಚ್ಚು ಭಕ್ತರು ಒಣ ಹುಲ್ಲನ್ನು ಸೇವೆಯಾಗಿ ಹುಲ್ಲಿನ ರೂಪದಲ್ಲಿ ಗೋಶಾಲೆಯಲ್ಲಿ ಇರುವ ಗೋಮಾತೆಗೆ ನೀಡಿರುವ ಭಕ್ತರ ಕುರಿತು ವಿಶೇಷವಾದ ಪ್ರಾರ್ಥನೆ ಸಲ್ಲಿಸಿದ್ದರು .

ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿರುವ ಶ್ರೀ ಭಾರತೀತೀರ್ಥ ಗೋಶಾಲೆ ಯಲ್ಲಿ ಇರುವ ಶಿವದಾಸ ಹಾಗು ಗೋವುಗಳಿಗೆ ಒಣ ಹುಲ್ಲನ್ನು ದೇವಾಲಯದ ಧರ್ಮ ದರ್ಶಿಗಳಾದ ಸಿ.ಎಂ. ನಾರಾಯಣ ಶಾಸ್ತ್ರೀ ಹಾಗು ದೇವಾಲಯಕ್ಕೆ ಬಂದಿದ್ದ ಸುತ್ತಮುತ್ತಲಿನ ಭಕ್ತರು ಸಮರ್ಪಣೆ ಮಾಡಿದರು ನಂತರ ದೇವಾಲಯದಲ್ಲಿ ಗೋಪೂಜೆಗೆ ಬಂದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು .

ಶ್ರೀ ಉಮಾ ಮಹೇಶ್ವರ ದೇವಾಲಯದ ಅರ್ಚಕರಾದ ವಿಜಯ್ ವಿಠಲ ಹೆಬ್ಬಾರ್ , ಉಮಾಮಹೇಶ್ವರ ಹೆಗಡೆ ಹಾಗು ಗ್ರಾಮದ ಹಾಗು ಸುತ್ತಮುತ್ತಲಿನ ಐಗಿನ ಬೈಲು ದಿನೇಶ್ , ಗಣಪತಿ ಶೆಟ್ಟಿ , ಕೆ.ಟಿ. ರಮೇಶ್ , ಶ್ರೀಧರ ಜೋಯಿಸ್ , ಶ್ರೀ ರಕ್ಷಾ ಹಾಗು ಇನ್ನೂ ಅನೇಕ ಭಕ್ತರು ಉಪಸ್ಥಿತರಿದ್ದರು .

error: Content is protected !!