ಶಿವಮೊಗ್ಗ ಡಿಸೆಂಬರ್ 23 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2022-23ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಬಾಲ ಭವನ ಸಮಿತಿಯ ವತಿಯಿಂದ 5-16 ವರ್ಷ ವಯೋಮಿತಿಯ ಮಕ್ಕಳಿಗೆ ಡಿಸೆಂಬರ್-2022 ರಿಂದ ಮಾರ್ಚ್ 2023ರ ವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ಮ.3.00 ರಿಂದ ಸಂಜೆ 5.00ರವರೆಗೆ  ಸರ್ಕಾರಿ ಬಾಲಕರ ಬಾಲಮಂದಿರ ಆವರಣ, ಆಲ್ಕೋಳ, ಶಿವಮೊಗ್ಗ ಇಲ್ಲಿ ವಾರಾಂತ್ಯ ಕಾರ್ಯಗಾರವನ್ನು  ಹಮ್ಮಿಕೊಳ್ಳಲಾಗಿದೆ.
ಆಸಕ್ತ ಮಕ್ಕಳು ನಿಗಧಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಲ್ಕೋಳ, ಶಿವಮೊಗ್ಗ ಇಲ್ಲಿಂಡ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿ.30ರೊಳಗಾಗಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295514 ನ್ನು ಸಂಪರ್ಕಿಸುವುದು.

error: Content is protected !!