ಶಿವಮೊಗ್ಗ ಡಿಸೆಂಬರ್ 19: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡಿಹೆಚ್ಆರ್/ಐಸಿಎಂಆರ್ ವತಿಯಿಂದ ವೈರಲ್ ರಿಸರ್ಚ್ ಡಯಾಗ್ನಸ್ಟಿಕ್ ಲ್ಯಾಬೋರೆಟರಿ ಮಂಜೂರಾಗಿದ್ದು, ಇಲ್ಲಿ ಗುತ್ತಿಗೆ ಆಧಾರದಲ್ಲಿ ಸಂಚಿತ ವೇತನದಡಿ ಕೆಲಸ ಮಾಡಲು ಸೈಂಟಿಸ್ಟ್-ಬಿ (ಮೆಡಿಕಲ್) ಹುದ್ದೆಗೆ ನೇಮಕಾಗಿ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿ ನಮೂನೆಯನ್ನು ಸಂಸ್ಥೆಯ ವೆಬ್ಸೈಟ್ www.sims-shimoga.com ರಲ್ಲಿ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರಿಗೆ ರೂ. 1000/-ಗಳ ಡಿ.ಡಿ.ಯೊಂದಿಗೆ ಡಿ.31ರೊಳಗಾಗಿ ಸಿಮ್ಸ್ನಲ್ಲಿ ಸಲ್ಲಿಸುವಂತೆ ಸಂಸ್ಥೆಯ ನಿರ್ದೇಶಕರು ಮತ್ತು ಡೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.