TAVI ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ನಗರದ ಸಹ್ಯಾದಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರು
ಹೃದಯ ಸಂಬಂಧಿ ಕಾಯಿಲೆಗಳು ಭಾರತದಲ್ಲಿ ಹಾಗೂ ಜಗತ್ತಿನಾದ್ಯಂತ ಮಹಾಮಾರಿಯಂತೆ ವ್ಯಾಪಿಸುತ್ತಿದೆ.
ಹೃದಯಾಘಾತದಿಂದಾಗುವ ತೊಂದರೆಗಳಲ್ಲದೆ, ಹೃದಯದ ಒಳಭಾಗದಲ್ಲಿರುವ ಕವಾಟಗಳು ಹಲವಾರು ಕಾರಣಗಳಿಂದ
ಹಾನಿಗೊಳಗಾಗುತ್ತವೆ. ಹೃದಯದ ಕವಾಟಗಳಿಗೆ ವಯಸ್ಸು ಹೆಚ್ಚಿದಂತೆ ಹಾನಿಕರವಾದ ಕ್ಯಾಲ್ಲಿಯಂ ಹಾಗೂ ಕೊಬ್ಬಿನಂಶ ಸೇರಿದಾಗ ವಾಲ್ಗಳು ಗಡುಸಾಗಿ ನಿಷ್ಕ್ರಿಯಗೊಳ್ಳತೊಡಗುತ್ತವೆ. ಇದರಿಂದ ಈ ವಾಲ್ಕೆಗಳು ತೆರೆದುಕೊಳ್ಳುವ ಮತ್ತು ರಕ್ತದ
ಒಮ್ಮುಖ ಚಲನೆಯನ್ನು ನಿರ್ವಹಿಸುವಲ್ಲಿ ತೊಂದರೆಯಾಗುತ್ತದೆ.
ಮುಖ್ಯವಾಗಿ ಹೃದಯದಲ್ಲಿ 4 ವಾಲ್ಗಳಿತ್ತವೆ. ಆಯೋರ್ಟಿಕ್ ವಾಲ್ಟ್’ ಎಂಬುವುದು ಎಡ ಹೃತ್ಯುರಣದಿಂದ (Left Ventricular) ದೇಹದ ಮುಖ್ಯ ರಕ್ತನಾಳವಾದ ಆಯೋರ್ಟಿ (ಮಾಲಪಧಮನಿ) ಮಧ್ಯ ಏಕಮುಖ ಸಂಚಾರಕ್ಕೆ
(LVನಿಂದ ಆಯೋರ್ಟಗೆ) ರಕ್ತ ಸರಾಗವಾಗಿ ಹೊಮ್ಮುವಂತೆ ಕಾರ್ಯ ನಿರ್ವಹಿಸುತ್ತದೆ. ಆದರೆ ಮೇಲೆ ಹೇಳಿದ ಕಾರಣಗಳಿಂದ ಆಯೋರ್ಟಿಕ್ ವಾಲ್ಸ್ ಸಂಕುಚಿತ ಗೊಳ್ಳಲಾರಂಭಿಸುತ್ತದೆ. ಈ ಕಾಯಿಲೆಗೆ ಆಯೋರ್ಟಿಕ್ ಸ್ಟೆನೋಸ್ (ವಾಲ್ವ ಬ್ಲಾಕೇಜ್) ಹಾಗೂ ಸೋರಿಕೆ Regurgitation ಎಂದು ಕರೆಯುತ್ತಾರೆ.
ಆಯೋರ್ಟಿಕ್ ಸೈನೋಸಿಸ್ ಕಾಯಿಲೆಯ ಲಕ್ಷಣಗಳು
ಆಯೋರ್ಟಿಕ್ ಸ್ಟೆನೋಸಿಸ್ ಇರುವ ರೋಗಿಗಳಲ್ಲಿ ಅಲ್ಲ, ಮಧ್ಯಮ ಹಾಗೂ ತೀವ್ರ ಪ್ರಮಾಣದ ತೊಂದರೆಗಳೆಂದು ವಿಗಂಡಿಸಬಹುದು. ತೀವ್ರ ಪ್ರಮಾಣದ ತೊಂದರೆ ಇರುವವರಿಗೆ ನಡೆದಾಗ ದಮ್ಮು ಹತ್ತಿದ ಅನುಭವ, ಎದೆ ನೋವು, ತಲೆಸುತ್ತು ಹಾಗೂ ಹರಾತ್ ಸಾವು ಇಂತಹ ಲಕ್ಷಣಗಳು ಕಂಡು ಬರುತ್ತವೆ.
ಸಾಮಾನ್ಯವಾಗಿ ಈ ಆಯೋರ್ಟಿಕ್ ವಾಲ್ಸ್ ತೊಂದರೆಗಳು ವಯಸ್ಸು ಹೆಚ್ಚಿದಂತೆ ಕಾಣುವ ತೊಂದರೆಗಳಾಗಿದ್ದು ಇಳಿ ವಯಸ್ಸಿನಲ್ಲಿ ಕಂಡು ಬರುವ ಇತರೆ ಕಾಯಿಲೆಗಳಾದ ದಮ್ಮು, ಕಿಡ್ನಿ ವೈಫಲ್ಯ ಲಿವರ್ ತೊಂದರೆಗಳ ಜೊತೆಗೆ ಕಂಡು ಬರುವುದರಿಂದ ರೋಗಿಗಳ ಚಿಕಿತ್ಸೆ ಹಲವಾರು ಬಾರಿ ಕಷ್ಟವಾಗುತ್ತದೆ. ಇದನ್ನು ಪತ್ತೆಹಚ್ಚಲು ಇರೋಕಾರ್ಡಿಯೋಗ್ರಾಂ ಪರೀಕ್ಷೆ
ಮಾಡಿ ನಂತರದ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಮಧ್ಯಮ ಹಾಗೂ ಅಲ್ಪ ರೀತಿಯ ಆಯೋರ್ಟಿಕ್ ವಾಲ್ ಕಾಯಿಲೆಗಳನ್ನು ಔಷಧಿಗಳ ಮೂಲಕ ತಡೆಗಟ್ಟಬಹುದಾದರೂ ತೀವ್ರ ಪ್ರಮಾಣದ ತೊಂದರೆಗಳಿಗೆ ಔಷಧೀಯ ಚಿಕಿತ್ಸೆ
ಸೂಕ್ತವಲ್ಲ.
ಇತ್ತೀಚಿನವರೆಗೂ ಈ ರೀತಿಯ ವಾಳ್ಯ ತೊಂದರೆಗಳಿಗೆ ತೆರೆದ ಹೃದಯ ಚಿಕಿತ್ಸೆಯ ಮೂಖಾಂತರ ವಾಲ್ನ್ನು
ಬದಲಿಸಿ, ಲೋಹದ ಅಥವಾ ಜೈವಿಕ ವಾಲ್ಗಳನ್ನು ಆಳವಡಿಸಲಾಗುತಿತ್ತು. ಆದರೆ ಮೊದಲು ತಿಳಿಸಿದಂತೆ ಈ ಕಾಯಿಲೆಯು ವಯೋವೃದ್ಧರಲ್ಲಿ ಕಾಣುವ ಸಂಭವ ಹೆಚ್ಚಾಗಿರುವುದರಿಂದ ತೆರೆದ ಹೃದಯ ಚಿಕಿತ್ಸೆ ಆಪಾಯಕಾರಿಯಾಗಬಹುದು.
Transcutaneous Aortic Valve
ಈ ದಿನಗಳಲ್ಲಿ ಆಯೋರ್ಟಿಕ್ ವಾಲ್ಸ್ ಕಾಯಿಲೆಗಳಿಗೆ
Implantation (TAVI) ಎಂಬ ನೂತನ ಚಿಕಿತ್ಸೆಯನ್ನು ಮಾಡಲಾಗುತ್ತದೆ. (PIC 3) ಇದರಲ್ಲಿ ರೋಗಿಗೆ ತೊಡೆಯ ರಕ್ತನಾಳದ ಮೂಲಕ ಕೃತಕವಾದ ಜೈವಿಕ ವಾಲ್ (Bioprosthesis) ಅನ್ನು ಅಳವಡಿಸಲಾಗುತ್ತದೆ. ಈ TAVI ಚಿಕಿತ್ಸೆಯನ್ನು ತೊಡೆಯ ರಕ್ತನಾಳದ ಮೂಲಕ ಮಾಡುವುದರಿಂದ ತೆರೆದ ಹೃದಯದ ಚಿಕಿತ್ಸೆಯಿಂದ ಆಗುವ ತೊಂದರೆಗಳು ಇರುವುದಿಲ್ಲ.
ಉದಾಹರಣೆ (ಅನಸ್ತೇಶಿಯಾ, ದೀರ್ಘವಾದ ವಿಶ್ರಾ, ದೊಡ್ಡದಾದ ಗಾಯ) ಹಾಗೂ ಯಶಸ್ವಿಯಾದ TAVI
ಚಿಕಿತ್ಸೆಯ ನಂತರ ಕೇವಲ 2-3 ದಿನಗಳಲ್ಲಿ ರೋಗಿ ದಿಸ್ಟಾರ್ಟ್ ಆಗಿ ದಿನ ನಿತ್ಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು.
ರೋಗಿಯಾದ ಲತಾ ಎಸ್. (ಹೆಸರು ಬದಲಾಯಿಸಲಾಗಿದೆ) 80 ವರ್ಷ, ಇವರಿಗೆ ಕಳೆದ 23
ತಿಂಗಳಿನಿಂದ ವಿಪರೀತ ಆಯಾಸ ಹಾಗೂ 10 ಹೆಜ್ಜೆ ನಡೆಯಲಾಗದಷ್ಟು ಉಬ್ಬರ, ವಯೋಸಹಜವೆಂದು ಮನೆಯವರು ಮೊದಲು ಭಾವಿಸಿದರೂ ಪರೀಕ್ಷೆ ಮಾಡಿದಾಗ ಇವರಿಗೆ ಆಯೋಟಿಕ್ ಶೈನಿಂದ ಲಕ್ಷಣಗಳು ಕಂಡುಬರುವುದೆಂದು ತಿಳಿಯಿತು. ಹಾಗೂ ಇವರ ದೈಹಿಕ ಸ್ಥಿತಿ ತೀರಾ ಹದಗೆಟ್ಟಿತ್ತು, ಕಿಡ್ನಿಯ ತೊಂದರೆ, ಲಿವರ್ನ ಕೊಂದರೆ ಈ ಎಲ್ಲಾ ಸಮಸ್ಯೆಗಳು ಸೇರಿ ರೋಗಿಯು ದಿನಗಳನ್ನು ಎಣಿಸುತ್ತಿದ್ದರು. ಇವರ ದೇಹಸಿಗೆ ಕರದ ಚಿಕಿತ್ಸೆ ಮಾಡುವುದು
ಅಸಾಧ್ಯ ಎನ್ನುವ ಮಟ್ಟಿಗೆ ಕ್ಷೀಣಿಸಿದ್ದರು. ಈ ಅಂಶವನ್ನು ಮನಗಂಡ ರೋಗಿಯನ್ನು ಶಿವಮೊಗ್ಗ ನಗರದ ಸಹ್ಯಾದಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆತಂದರು. ರೋಗಿಯನ್ನು ಪರೀಕ್ಷಿಸಿದ ಡಾ. ಶ್ರೀವತ್ಸ ಸಾಂಗ್ರವರು ಐಪಿ ಚಿಕಿತ್ಸೆಯ ಬಗ್ಗೆ ರೋಗಿಯ ಸಂಬಂಧಿಕರಿಗೆ ತಿಳಿಸಿದಾಗ ಅವರು ಸಹ ಚಿಕಿತ್ಸೆಗೆ ಒಪ್ಪಿಗೆ ನೀಡಿದರು. ನಂತರ ವೈದ್ಯರ ತಂಡವು
ರೋಗಿಗೆ TAVI ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದರು.
ಇಡೀ ಮಧ್ಯ ಕರ್ನಾಟಕದಲ್ಲಿ ಮೊದಲ ಬಾರಿಗೆ ಅತ್ಯಂತ ಯಶಸ್ವಿಯಾಗಿ ಈ ಚಿಕಿತ್ಸೆ ಮರಗಟ್ಟಿತು. ಈ
ಚಿಕಿತ್ಸೆಯಾದ ಕೇವಲ 2 ದಿನಕ್ಕೆ ರೋಗಿಯು ಡಿಸ್ಟಾರ್ಜ್ ಹೊಂದಿದ್ದಾರೆ. ಒಂದು ತಿಂಗಳಾಗಿದೆ, ರೋಗಿಯು ತಾವೇ ಓಡಾಡಿಕೊಂಡು ದಿನನಿತ್ಯದ ಕಾರ್ಯಗಳನ್ನು ಮಾಡುತಿದ್ದಾರೆ.
ಭಾರತೀಯರಲ್ಲಿ ವಯಸ್ಸಿನ ನಿರೀಕ್ಷೆ (Age Expectation) ಹೆಚ್ಚಿದಂತೆಲ್ಲಾ ಆಯೋರ್ಟಿಕ್ ಸೈನೋಲಸ್ ಸಹ ಕಾಯಿಲೆಗಳು ಒಂದು ಸವಾಲಾಗಿ ಪರಿಣಮಿಸಿವೆ. ಇದು ರೋಗಿಯನ್ನು ಸಂಪೂರ್ಣವಾಗಿ ಸಾಯಲೂ ಬಿಡದೆ, ಬದುಕಲೂ ಬಿಡದೆ ನರಳಾಡಿಸುತ್ತವೆ. ಇಂಥಹ ರೋಗಿಗಳಿಗೆ ಬಿಂಗಿದ ಚಿಕಿತ್ಸೆಯು ವರದಾನವಾಗಿ ಹೊರ ಹೊಮ್ಮಿದೆ, ಯಾವುದೇ ಆಪರೇಷನ್ ಇಲ್ಲದೆ ಅರವಳಿಕೆಯ ಅವಶ್ಯಕತೆ ಇಲ್ಲದೆ ಕೇವಲ ಒಂದು ಚಿಕ್ಕ ಸೂಜಿಯಿಂದ ಕೆಲಸ ಮುಗಿದು ಹೋಗುವ
ಆದ್ಭುತ ಚಿಕಿತ್ಸೆ, ಈ ಶತಮಾನದ ಮುಖ್ಯ ಅವಿಷ್ಕಾರಗಳಲ್ಲೊಂದು ಎಂದರೆ ಅತಿಶಯೋಕ್ತಿಯಾಗಲಾರದು.
ಈ ಯಶಸ್ವಿ ಟಾವಿ ಚಿಕಿತ್ಸೆಯಲ್ಲಿ ಪಾಲ್ಗೊಂಡ ತಜ್ಞ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯವರು ಅಭಿನಂದಿಸಿದರು.
ಸಹ್ಯಾದಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ವೈದ್ಯರು – ಡಾ. ಶ್ರೀವತ್ಸ ನಾಡಿಗ್, ವ್ಯವಸ್ಥಾಪಕ ನಿರ್ದೇಶಕರು ವೈದ್ಯಕೀಯ ನಿರೀಕ್ಷಕರು – ಡಾ. ಚಕ್ರವರ್ತಿ ಸಂಡೂರು ಮಾರ್ಕೆಟಿಂಗ್ ಮುಖ್ಯಸ್ಥರು – ಶ್ರೀಯುತ ರಾಜಾಸಿಂಗ್ ಎಸ್ ವಿ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು